More

    ನವ ಜೀವನಕ್ಕೆ ಕಾಲಿಟ್ಟ ಸಪ್ತ ಜೋಡಿ

    ಗಜೇಂದ್ರಗಡ: ವಿಶ್ವಗುರು ಬಸವಣ್ಣನವರ ಆಶಯದಂತೆ ಸಾಮೂಹಿಕ ವಿವಾಹಗಳು ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದು ಕುದರಿಮೋತಿಯ ಮೈಸೂರುಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.

    ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ 7 ಜೋಡಿಗಳ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ನವ ದಂಪತಿಗಳು ಮಾದರಿ ಜೀವನ ನಡೆಸಬೇಕು’ ಎಂದರು.

    ಮಾಜಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ‘ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಂಜೀವಿನಿಯಾಗಿದ್ದು, ಇದರಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಅಲ್ಲದೆ, ಬಡವ, ಮೇಲು ಕೀಳು ಭಾವನೆ ಅಳಿದು ಎಲ್ಲರೂ ಒಂದೇ ಎನ್ನುವ ಭಾವನೆ ಮೂಡುತ್ತದೆ’ ಎಂದರು.

    ಚಳಗೇರಾ ವೀರಸಂಗಮೇಶ್ವರ ಶಿವಾಚಾರ್ಯರು, ಯಲಬುರ್ಗಾ ಶ್ರೀಧರಮುರಡಿ ಹಿರೇಮಠ ಸ್ವಾಮಿ, ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಎಚ್.ಎಸ್. ಸೋಂಪೂರ, ಅರ್ಜುನ ರಾಠೋಡ, ವೀರಣ್ಣ ಕಾರಡಗಿಮಠ, ಪ್ರಶಾಂತ ರಾಠೋಡ, ಕುಮಾರ ಹಿರೇಮಠ, ಶರಣಪ್ಪ ಕತ್ತಿ, ಮುತ್ತಪ್ಪ ಗೋನಾಳ, ಮಲ್ಲಯ್ಯ ಹಿರೇಮಠ, ತೋಟಯ್ಯ ಹಿರೇಮಠ, ಹೇಮಂತ ಪೂಜಾರ, ಬಸಪ್ಪ ಚೂಟಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts