More

    ನವೆಂಬರ್‌ನಲ್ಲಿ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

    ಮುಳಬಾಗಿಲು: ಬೆಂಗಳೂರಿನಿಂದ ಹರಿಸುತ್ತಿರುವ ಸಂಸ್ಕರಿತ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ಹರಿಸಲು ತಾಲೂಕಿನ ಕೀಲುಹೊಳಲಿ ಕೆರೆ ಬಳಿ ನಿರ್ಮಿಸಿರುವ ಕೆ.ಸಿ.ವ್ಯಾಲಿ ಪಂಪ್‌ಹೌಸ್‌ಗೆ ಆಯುಧಪೂಜೆ ಅಥವಾ ವಿಜಯದಶಮಿಯಂದು ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತದೆ ಎಂದು ಸಚಿವ ಎಚ್.ನಾಗೇಶ್ ಹೇಳಿದರು.

    ತಾಲೂಕಿನ ಎಮ್ಮೇನತ್ತ ಗ್ರಾಪಂ ಅವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆ ಉದ್ಘಾಟಿಸಿ ವಾತನಾಡಿ, ನವೆಂಬರ್‌ನಲ್ಲಿ ಅಧಿಕೃತವಾಗಿ ಹೊಳಲಿ ಕೆರೆಯಿಂದ ತಾಲೂಕಿನ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಪಂಪ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಇದರಿಂದ ಬೇಸಿಗೆಯಲ್ಲೂ ತಾಲೂಕಿನ ಕೆರೆಗಳಲ್ಲಿ ನೀರು ಇರಲಿದ್ದು, ಕೃಷಿ ಮತ್ತು ಅಂರ್ತಜಲಮಟ್ಟ ಹೆಚ್ಚಲು ಅನುಕೂಲವಾಗಲಿದೆ ಎಂದರು.

    ಸವಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗಬೇಕೆಂಬ ದೃಷ್ಟಿಯಿಂದ ತಾಲೂಕಿನ 30 ಗ್ರಾಪಂ ವ್ಯಾಪ್ತಿಯಲ್ಲಿ ಕುಂದು ಕೊರತೆ ಸಭೆ ಹಮ್ಮಿಕೊಂಡಿದ್ದು, ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪಿಂಚಣಿ ಹಣ ಸಂದಾಯ ಸಮಸ್ಯೆಯನ್ನು ಶ್ರೀ ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.

    ರೈತರ ಪಹಣಿಗಳಲ್ಲಿರುವ ಪಿ.ನಂಬರ್ ತೆಗೆಯುವುದು ತೊಂದರೆಯಾಗುತ್ತಿದೆ. ಇದರಿಂದ ರೈತರು ಬ್ಯಾಂಕ್ ಸಾಲ ಸೇರಿ ವಿವಿಧ ಸಮಸ್ಯೆಗಳಿಗೆ ಒಳಗಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಎಲ್ಲ ರೈತರ ಪಿ.ನಂಬರ್ ದುರಸ್ತಿ ವಾಡಲಾಗುವುದು ಎಂದರು.
    ಎಮ್ಮೆನತ್ತ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪ ಸಮಸ್ಯೆ ಬಗೆಹರಿಸಿ, ಸಮುದಾಯ ಭವನ ನಿರ್ಮಿಸಲು ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿದರು.

    ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್, ವಾಜಿ ಅಧ್ಯಕ್ಷ ಸೊನ್ನವಾಡಿ ಸಿ.ರುಪತಿ, ನಿರ್ದೇಶಕ ಹೈದಲಾಪುರ ಜಯರಾಮರೆಡ್ಡಿ, ದರಖಾಸ್ತು ಸಮಿತಿ ಸದಸ್ಯ ಆರ್.ಪೆದ್ದಪ್ಪಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಡಿಕಲ್ ಎಂ.ಎಸ್.ವೆಂಕಟಾಚಲಪತಿಗೌಡ, ಯುವ ಕಾಂಗ್ರೆಸ್ ವಾಜಿ ಅಧ್ಯಕ್ಷ ಗೊಲ್ಲಹಳ್ಳಿ ಜಿ.ಎಸ್.ಜಗದೀಶ್, ಮುಖಂಡರಾದ ಪದಕಾಷ್ಟಿ ವಿ.ವೆಂಕಟಮುನಿ, ಮೇಲಾಗಾಣಿ ಪದ್ಮನಾಭಗೌಡ, ಎಮ್ಮೆನತ್ತ ರೆಡ್ಡಪ್ಪರೆಡ್ಡಿ ಇದ್ದರು.

    ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ: ಗ್ರಾಮಗಳಲ್ಲಿ ಶಾಲೆ, ಅಂಗನವಾಡಿ ಕಟ್ಟಡ, ರಸ್ತೆ, ಚರಂಡಿ ಅಭಿವೃದ್ಧಿ ಬಗ್ಗೆ ಮುಂದಿನ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಮುಳಬಾಗಿಲು ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ವಾದರಿಯಾಗಿ ಅಭಿವೃದ್ಧಿ ಪಡಿಸಿ ತೋರಿಸುತ್ತೇನೆ ಎಂದು ನಾಗೇಶ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts