More

    ನವೀಕೃತ ಇಂಧನ ಕ್ಷೇತ್ರದತ್ತ ಚಿತ್ತ ಹರಿಸಿ

    ಕಲಬುರಗಿ: ನವೀಕರಿಸಬಹುದಾದ ಇಂಧನ ಕ್ಷೇತ್ರದತ್ತ ಗಮನಹರಿಸಲು ಇದು ಸಕಾಲ. ಈ ನೀತಿಗಳ ಆಧಾರದ ಮೇಲೆ ಅನೇಕ ಏಜೆನ್ಸಿಗಳು ಸೌರ ಮತ್ತು ಪವನ ವಿದ್ಯುತ್ ಸ್ಥಾವರ ಸ್ಥಾಪಿಸಿವೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ (ಕ್ರೆಡಲ್) ಅಧ್ಯಕ್ಷ ಚಂದು ಪಾಟೀಲ್ ಹೇಳಿದರು.

    ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನ ಮೂಲ ಬಳಕೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸೌರ ನೀತಿ ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರ ನವೀಕರಿಸಬಹುದಾದ ಇಂಧನ ನೀತಿ ಬಿಡುಗಡೆ ಮಾಡಿದೆ. ಈ ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಮಾರ್ಗಸೂಚಿ ನೀಡಲಾಗಿದೆ. ಇದರ ಭಾಗವಾಗಿ ಕ್ರೆಡೆಲ್​ನಿಂದ ವಿವಿಧ ಕಾಲೇಜುಗಳ ಸಹಯೋಗದಲ್ಲಿ ವಿಚಾರ ಸಂಕಿರಣ, ಉಪನ್ಯಾಸ, ಕಾರ್ಯಾಗಾರ ಸಂಘಟಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ಶಕ್ತಿ ಸಂರಕ್ಷಣೆ, ಇಂಧನ ಉಳಿತಾಯ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಮತ್ತು ಪ್ರಕೃತಿ ಉಳಿಸಲು ಅದು ಹೇಗೆ ಸಹಾಯಕ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ಕೈಗಾರೀಕರಣದ ಬೆಳವಣಿಗೆಯೊಂದಿಗೆ ವಿದ್ಯುತ್ ಅತ್ಯಗತ್ಯ. ಬೇಡಿಕೆ ವೇಗವಾಗಿ ಹೆಚ್ಚುತ್ತಿದ್ದು, ಪೂರೈಸಲು ನಾವು ಸನ್ನದ್ಧರಾಗಬೇಕಾಗಿದೆ. ಜಾಗತಿಕವಾಗಿ ಭಾರತ ದೇಶ ನವೀಕರಿಸಬಹುದಾದ ಇಂಧನ ಸಾಮಥ್ರ್ಯದಲ್ಲಿ 4ನೇ ಸ್ಥಾನದಲ್ಲಿದೆ ಎಂದರು.

    ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದಶಿ ಬಸವರಾಜ ದೇಶಮುಖ, ಕುಲಸಚಿವ ಡಾ.ಅನಿಲಕುಮಾರ್ ಬಿಡವೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಮದನ್ಮೋಹನ್ ಗೌಡ ಮಾಹಿತಿ ನೀಡಿದರು.

    ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗದ ಡೀನ್ ಡಾ.ಶಿವಕುಮಾರ್ ಜವಳಗಿ, ಗೋದುತಾಯಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಂ ಶಶಿಕಲಾ, ಭರತ್, ಮಾಲಿನಿ ಶಿವಕುಮಾರ, ಉಮೇಶ ಪಾಟೀಲ್, ಸುಷ್ಮಾ ಪಾಟೀಲ್ ಇದ್ದರು. ಪ್ರೊ.ಶೃತಿ ಮತ್ತು ಪ್ರೊ.ಅಭಿಲಾಷಾ ನಿರೂಪಣೆ ಮಾಡಿದರು. ಪ್ರೊ.ಸಾವಿತ್ರಿ ಸ್ವಾಗತಿಸಿದರೆ, ಪ್ರೊ.ಗೀತಾ ವಂದಿಸಿದರು. ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗ, ಗೋದುತಾಯಿ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಕಾರ್ಯಕ್ರಮ ಸಂಘಟಿಸಲಾಗಿತ್ತು.

    ಮುಂಬರುವ ದಿನಗಳಲ್ಲಿ ಕಲಬುರಗಿಯಲ್ಲಿ 500 ಮೆಗಾವ್ಯಾಟ್ ಸೋಲಾರ್ ಪಾರ್ಕ್​ ಸ್ಥಾಪಿಸುವ ಯೋಜನೆಯು ಮಾತುಕತೆ ಹಂತದಲ್ಲಿದೆ. ನಮ್ಮ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸೋಲಾರೈಸ್ ಮಿಲ್ ಪ್ರಾರಂಭಿಕ ಹಂತದಲ್ಲಿದೆ. ಇದೆಲ್ಲ ಕೈಗೂಡಿದರೆ ಹೆಚ್ಚು ಉದ್ಯೋಗ ಸೃಷ್ಟಿ ಮಾಡಬಹುದಾಗಿದೆ.
    |ಚಂದು ಪಾಟೀಲ್
    ಕ್ರೆಡಲ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts