More

    ನರ್ಸಿಂಗ್ ವೃತ್ತಿಗೆ ಶಿಸ್ತು, ಬದ್ಧತೆ ಮತ್ತು ಸೇವಾಭಕ್ತಿಯ ಅಗತ್ಯ

    ಬಾಗಲಕೋಟೆ: ಭಾರತದಲ್ಲಿನ ಆರೋಗ್ಯ ವ್ಯವಸ್ಥೆಯಲ್ಲಿ 30.5ಪ್ರತಿಶತವನ್ನು ಪ್ರತಿನಿಧಿಸುವ ಶುಶ್ರೂಷಕರು ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಆಧಾರಸ್ಥಂಭವಾಗಿದ್ದು, ನರ್ಸಿಂಗ್ ವಿದ್ಯಾರ್ಥಿಗಳಿಗೆ ನರ್ಸಿಂಗ್ ವೃತ್ತಿಯ ಶಿಸ್ತು, ಬದ್ಧತೆ ಮತ್ತು ಸೇವಾಭಕ್ತಿಯ ಅಗತ್ಯತೆ ಇದೆ ಎಂದು ಮಂಗಳೂರಿನ ಲಕ್ಷ್ಮೀ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಹಾಗೂ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿ.ಒ.ಎಸ್ ಚೇರಮನ್ ಡಾ.ಲ್ಯಾರಿಸಾ ಮಾರ್ಕರ್ ಹೇಳಿದರು.

    ಅವರು ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಸಜ್ಜಲಶ್ರೀ ನರ್ಸಿಂಗ್ ಕಾಲೇಜ್, ಬಿ.ವಿ.ವಿ.ಎಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್ ಮತ್ತು ಶಾರದಾಂಬೆ ನರ್ಸಿಂಗ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಲ್ಯಾಂಪ್ ಲೈಟಿಂಗ ಮತ್ತು ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ಬಿ.ವಿ.ವಿ.ಸಂಘದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ ಅವಕಾಶ ನಿಮ್ಮದಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಮೂಲತ: ನರ್ಸಿಂಗ್ ವೃತ್ತಿಯು ಸೇವಾ ಮನೋಭಾವವನ್ನು ಅಪೇಕ್ಷಿಸುತ್ತದೆ. ಕಾರಣ ಈ ವೃತ್ತಿಯಲ್ಲಿ ತೊಡಗಿಸಿಕೊಳ್ಳುವವರು ವೃತ್ತಿಯನ್ನು ಪ್ರೀತಿಸುವ ಹಾಗೂ ಹೊಸ ಸಂಗತಿಗಳನ್ನು ಕಲಿಯುವ ಗುಣವುಳ್ಳವರಾಗಿರಬೇಕು. ಬಡರೋಗಿಗಳಿಗೆ ನೀವು ದೊಡ್ಡ ಆಸ್ತಿ ಇದ್ದಂತೆ. ರೋಗಿಗಳಿಗೆ ಸಮರ್ಪಣ ಹಾಗೂ ಕೌಶಲ್ಯಪೂರ್ಣ ಸೇವೆಯನ್ನು ಒದಗಿಸಿ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಿವಿವಿಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ ಮಾತನಾಡಿ ನಮ್ಮ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ 160 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಿದ್ದು,60.000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಅದರಲ್ಲಿ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಸಂಸ್ಥೆಯಲ್ಲಿ 1600 ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದು ಮೂರು ಹೊಸ ನರ್ಸಿಂಗ್ ಕಾಲೇಜುಗಳನ್ನು ಕೂಡ ಪ್ರಾರಂಭಿಸಲಾಗಿದೆ. ಇದಕ್ಕೆಲ್ಲ ಕಿರೀಟವಿಟ್ಟಂತೆ ಮಾನ್ಯ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಸಿ.ಚರಂತಿಮಠ ಅವರ ದೂರದೃಷ್ಟಿ ಮತ್ತು ಪ್ರಯತ್ನದಿಂದಾಗಿ 12 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭಾರತದಲ್ಲಿಯೇ ಎರಡನೇ ರಾಷ್ಟ್ರೀಯ ಸಿಮ್ಯೂಲೇಷನ್ ಸೆಂಟರ್‌ನ್ನು ಸ್ಥಾಪಿಸಲಾಗುತ್ತಿದ್ದು ಸಧ್ಯದಲ್ಲೇ ಕಾರ್ಯಾರಂಭ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

    ವೇದಿಕೆಯ ಮೇಲೆ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಎಮ್. ಸಜ್ಜನ (ಬೇವೂರ), ಶಾರದಾಂಬೆ ನರ್ಸಿಂಗ್ ಕಾಲೇಜ್ ಪ್ರಾಚಾರ್ಯ ಡಾ.ಪ್ರವೀಣ ಪಾಟೀಲ, ಬಿ.ವಿ.ವಿ.ಎಸ್ ನರ್ಸಿಂಗ್ ಕಾಲೇಜ್ ಪ್ರಾಚಾರ್ಯ ಡಾ.ಜಯಶ್ರೀ ಇಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts