More

    ನರೇಗಾ ಯೋಜನೆ ಅರಿವಿಗೆ ಜಾಗೃತಿ ನಾಟಕ

    ಹುಣಸೂರು: ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಜನರಿಗೆ ನರೇಗಾ ಯೋಜನೆ ಕುರಿತು ಅರಿವು ಮೂಡಿಸಲು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸಲಾಯಿತು.


    ಮಂಗಳವಾರ ತಾಲೂಕಿನ ಸಿಂಗರಮಾರನಹಳ್ಳಿ, ಕರೀಮುದ್ದನಹಳ್ಳಿ, ಉಯಿಗೊಂಡನಹಳ್ಳಿ, ಗುರುಪುರ, ಬೋಳನಹಳ್ಳಿ, ಬೀಜಗನಹಳ್ಳಿ, ಉದ್ದೂರು, ಮೂಕನಹಳ್ಳಿ, ಕಟ್ಟೆಮಳಲವಾಡಿ, ಮುಳ್ಳೂರು, ಕರ್ಣಕುಪ್ಪೆ, ಹನಗೋಡು, ಕಿರಂಗೂರು, ಹೆಗ್ಗಂದೂರು, ದೊಡ್ಡಹೆಜ್ಜೂರು ಹಾಗೂ ಕಡೇ ಮನುಗನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಸ್ಪಂದನಾ ಮಹಿಳಾ ಕಲಾತಂಡ ಹಾಗೂ ಸಂಭ್ರಮ ಮಹಿಳಾ ಕಲಾ ತಂಡದ ಸದಸ್ಯರು ಬೀದಿ ನಾಟಕ ಪ್ರದರ್ಶಿಸಿದರು.


    ಸಿಂಗರಮಾರನಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಬಿ.ಕೆ.ಮನು, ಪ್ರಸ್ತುತ ನರೇಗಾ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಹಿದ್ದೆ ಇದ್ದ ಕೂಲಿ ಮೊತ್ತವನ್ನು 309 ರೂ.ನಿಂದ 316ಕ್ಕೆ ಏರಿಕೆ ಮಾಡಲಾಗಿದೆ. ಕೂಲಿ ಕೆಲಸಕ್ಕಾಗಿ ಹೊರ ಜಿಲ್ಲೆಗಳಿಗೆ ತೆರಳದೆ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ದೊರೆಯುವಂತಹ ಸಮುದಾಯ ಕಾಮಗಾರಿಗಳ ಮೂಲಕ ಉದ್ಯೋಗ ಪಡೆದುಕೊಳ್ಳಬೇಕು. ಗ್ರಾಮಸ್ಥರು ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts