More

    ನರೇಗಾ ಕೆಲಸ ನೀಡಲು ಒತ್ತಾಯ

    ಧಾರವಾಡ: ನರೇಗಾ ಯೋಜನೆ ಅಡಿ ಕೆಲಸ ನೀಡುವುದು ಹಾಗೂ ಈವರೆಗೆ ಬಾಕಿ ಇರುವ ಕೂಲಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ರೈತ-ಕೃಷಿ ಕಾರ್ವಿುಕರ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪಂಚಾಯಿತಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

    ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ನರೇಗಾ ಯೋಜನೆ ಅಡಿ ಕೆಲಸ ಪಡೆಯಲು ಹರಸಾಹಸ ಪಡುವಂತಾಗಿದೆ. ತಾಲೂಕಿನ ತೇಗೂರು ಗ್ರಾಪಂ ವ್ಯಾಪ್ತಿಯ ಗುಳೇದಕೂಪ್ಪ ಗ್ರಾಮದಲ್ಲಿ ಕೆಲಸ ಆರಂಭಿಸಿ ಕೇವಲ 25 ದಿನಗಳು ಮಾತ್ರ ಕೆಲಸ ನೀಡಿದ್ದಾರೆ. ಈಗ ಕೆಲಸ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.

    ಲಾಕ್​ಡೌನ್ ಅವಧಿಯಲ್ಲಿ ಸಹ ನ್ಯಾಯಯುತವಾಗಿ ಕೆಲಸ ಕೊಡದೆ ಸತಾಯಿಸಿದ್ದಾರೆ. ಕೃಷಿ ಚಟುವಟಿಕೆಗಳಿಂದಲೂ ಸರಿಯಾಗಿ ಕೆಲಸ ಸಿಗದ ಸದ್ಯದ ಸ್ಥಿತಿಯಲ್ಲಿ ನರೇಗಾ ಅಡಿ ಕೆಲಸ ಪ್ರಾರಂಭಿಸಬೇಕು. ಅಲ್ಲದೆ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

    ನಂತರ ಜಿಪಂ ಉಪ ಕಾರ್ಯದರ್ಶಿಗೆ ಮನವಿಪತ್ರ ಸಲ್ಲಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗನ್ನವರ, ಕಾರ್ಯದರ್ಶಿ ಶರಣು ಗೋನವಾರ, ಶಿವಾಜಿ ಸಾವಂತನವರ, ಯಲ್ಲಪ್ಪ ಪೀರಗಾರ, ರಾಣಪ್ಪ ಸಾವಂತನವರ, ಶಿವಾಜಿ ಹೊಸಮನಿ, ಈರಣ್ಣ ಖೋದಾನಪೂರ, ಮಾರುತಿ ಪವಾರ, ತುಳಸಮ್ಮ ಗಾಯಕವಾಡ, ವಿಜಯಲಕ್ಷ್ಮೀ ನಿಕ್ಕಂ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts