More

    ನರಗುಂದದಲ್ಲಿ ಮತ್ತೆ ಭೂಕುಸಿತ

    ನರಗುಂದ: ಪಟ್ಟಣದ ಕಸಬಾ ಬಡಾವಣೆ ಪ್ರದೇಶದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್​ವೊಂದರ ಕೆಳಗೆ ಭೂ ಕುಸಿತ ಉಂಟಾಗಿ ವಾಹನದ ಇಂಜಿನ್ ಸಿಲುಕಿಕೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಘಟನೆ ಕಂಡ ತಕ್ಷಣವೇ ಸಾರ್ವಜನಿಕರು ಕಂದಕಕ್ಕೆ ಮಣ್ಣು ಹಾಕಿ ಟ್ರ್ಯಾಕ್ಟರ್ ಮೇಲಕ್ಕೆತ್ತಿದ್ದಾರೆ. ಪಟ್ಟಣದ ಕಸಬಾ, ಅರ್ಬಾಣ, ದಂಡಾಪೂರ ಮತ್ತು ಹಗೇದಕಟ್ಟಿ ಓಣಿಯಲ್ಲಿ ಇಂತಹ ಘಟನೆಗಳು ಪದೇಪದೆ ಸಂಭವಿಸುತ್ತಿದ್ದು, ಸರ್ಕಾರ ಪರಿಹಾರ ಕಂಡುಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    5 ಅಡಿ ಆಳ ಮತ್ತು 8 ಅಡಿ ಅಗಲದ ಕಂದಕ ಸೃಷ್ಟಿಯಾಗಿದ್ದು, ಅದರಲ್ಲಿ ನೀರು ತುಂಬಿತ್ತು. ಪುರಸಭೆ ಸಿಬ್ಬಂದಿ ಶುಕ್ರವಾರ ಸ್ಥಳಕ್ಕೆ ಆಗಮಿಸಿ ಆರು ಟ್ರ್ಯಾಕ್ಟರ್ ಗರ್ಸ ತಂದು ಕಂದಕ ಮುಚ್ಚಿದ್ದಾರೆ.

    ಕಳೆದ ಒಂದು ವಾರದಿಂದ ಕಸಬಾ ಬಡಾವಣೆಯ ಕರಿಯಪ್ಪ ತಹಸೀಲ್ದಾರ ಎಂಬುವವರ ಮನೆಯಲ್ಲಿ ಬಿರುಕು ಕಾಣಿಸಿಕೊಂಡಿವೆ. ಕೇವಲ ಐದು ವರ್ಷದ ಹಿಂದಷ್ಟೇ ಮನೆ ಕಟ್ಟಲಾಗಿದೆ. ಹೀಗಾಗಿ ಮನೆಯವರು ಭಯದಲ್ಲೇ ರಾತ್ರಿ ಕಾಲಕಳೆಯುವಂತಾಗಿದೆ.

    ಮೂರು ದಿನಗಳ ಹಿಂದಷ್ಟೇ ಕಸಬಾ ಬಡಾವಣೆಯ ವಿಠಲ ಗುಡದರಿ ಮತ್ತು ಫಕೀರಪ್ಪ ಭಾವಿಯವರ ಮನೆಯೊಳಗೆ ಬೃಹದಾಕಾರದ ಕಂದಕಗಳು ಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

    ಸರ್ಕಾರ ಕೂಡಲೆ ಭೂಗರ್ಭ ಶಾಸ್ತ್ರಜ್ಞರನ್ನು ಕರೆಯಿಸಿ ಮೂರ್ನಾಲ್ಕು ಬಾರಿ ಅಧ್ಯಯನ ನಡೆಸಿದ್ದರೂ ಭೂಕುಸಿತಕ್ಕೆ ಕಾರಣವೇನು ಎಂದು ಮಾಹಿತಿ ನೀಡಿಲ್ಲ. ಪದೇಪದೆ ಭೂಕುಸಿತಗೊಳ್ಳುತ್ತಿರುವ ಈಭಾಗದ ಜನರ ರಕ್ಷಣೆಗೆ ಮುಂದಾಗಬೇಕಿದೆ ಎಂದು ಸತೀಶಗೌಡ ಪಾಟೀಲ, ಮಲಪ್ಪ ಬಳ್ಳೊಳ್ಳಿ, ಮುತ್ತು ಅರುಣಸಿ, ದ್ಯಾವಪ್ಪ ಬೆಳಹಾರ, ಚನ್ನಪ್ಪ ಕರಕನ್ನವರ, ಇತರರು ಆಗ್ರಹಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts