More

    ನಮ್ಮ ಹೆಣದ ಮೇಲೆ ಕೃಷ್ಣೆಯ ನೀರು ಒಯ್ಯಿರಿ

    ಬಾಗಲಕೋಟೆ: ಉತ್ತರ ಕರ್ನಾಕಟದ ಜೀವ ನದಿ ಕೃಷ್ಣೆಯ ಮೇಲೆ ದಕ್ಷಿಣ ಕರ್ನಾಟದ ಕಣ್ಣು ಬಿದ್ದಿದೆ. ಕೃಷ್ಣೆಯ ನೀರನ್ನು ತಮ್ಮತ್ತ ತಿರುಗಿಸಿ ನಮ್ಮನ್ನು ಬೀದಿಗೆ ತಂದು ನಿಲ್ಲಿಸುವ ಹುನ್ನಾರ ನಡೆಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಕೃಷ್ಣೆಯ ನೀರನ್ನು ಕೊಡಲು ಸಾಧ್ಯವಿಲ್ಲ. ನಮ್ಮ ಹೆಣದ ಮೇಲೆ ನೀರು ಒಯ್ಯಿರಿ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಗುಡುಗಿದ್ದಾರೆ.

    ರಾಜ್ಯದ ೨೮ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಗೆಲ್ಲಿಸಿ, ಆಗ ದಕ್ಷಿಣದ ಹತ್ತು ಜಿಲ್ಲೆಗಳಲ್ಲಿ ಕುಡಿವ ನೀರಿನ ಭವಣೆ ತೀರಿಸಿಲು ಮೋದಿ ಅವರಿಗೆ ಕಾವೇರಿ-ಕೃಷ್ಣೆಯ ನೀರು ಕೊಡಿ ಎಂದು ಕೇಳೋಣ ಎಂದು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಎದುರಲ್ಲೆ ಮಾಜಿ ಪಿಎಂ ದೇವೇಗೌಡರು ಈ ಮಾತನ್ನು ಹೇಳಿದ್ದಕ್ಕೆ ಎಸ್.ಆರ್.ಪಾಟೀಲ ಹೀಗೆ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಬುಧವಾರ ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್.ಆರ್.ಪಾಟೀಲ, ಯಾರೋ ಒಬ್ಬರು ಈ ಮಾತನ್ನು ಹೇಳಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬಹುದಿತ್ತು. ಆದರೆ, ಮಾಜಿ ಪ್ರಧಾನಿ, ದೂರದೃಷ್ಟಿ ಇರುವ ದೇವೇಗೌಡರೇ ಈ ಮಾತು ಆಡಿದ್ದಾರೆ ಎಂದರೆ, ಉತ್ತರ ಕರ್ನಾಟಕದ ಜನರು ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಕೃಷ್ಣೆಯ ನೀರು ಬೆಂಗಳೂರ ಸೇರಿದಂತೆ ಕಾವೇರಿ ಜಲಾಯನ ಪ್ರದೇಶದ ಜಿಲ್ಲೆಗಳಲ್ಲಿ ತೆಗೆದುಕೊಂಡು ಹೋಗುವ ಹುನ್ನಾರ ನಡೆಸಿದ್ದಾರೆ. ಈ ಅಪಾಯದ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಈ ಭಾಗದ ಜನಪ್ರತಿನಿಽಗಳು ಮತ್ತು ಸಾರ್ವಜನಿಕರು ಕೂಡಲೇ ಜಾಗೃತರಾಗಬೇಕು ಎಂದು ಎಚ್ಚರಿಸಿದರು.

    ಕೃಷ್ಣೆ ಮತ್ತು ಕಾವೇರಿ ರಾಜ್ಯದ ಜೀವನದಿಗಳು ಆಗಿದ್ದರೂ ಕಾವೇರಿ ವಿಚಾರ ಬಂದರೆ ಬೆಂಗಳೂರಗೆ ಬೆಂಕಿ ಬೀಳುತ್ತದೆ. ಆದರೆ, ಕೃಷ್ಣೆಯನ್ನು ಕೇಳುವವರೆ ಇಲ್ಲ. ಒಂದು ಸರ್ಕಾರ ಸಹ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸಿಕೊಂಡು ಬಂದಿದೆ. ಈಗ ಕೃಷ್ಣೆಯ ನೀರಿನ ಮೇಲೂ ಅವರ ಕಣ್ಣು ಬಿದ್ದಿದೆ. ಇದನ್ನು ರಕ್ಷಿಸಿಕೊಳ್ಳುವ ಹೊಣೆ ಉತ್ತರ ಕರ್ನಾಟಕದ ಜನರ ಮೇಲಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಮುಂದೆ ಪರಿತಪಿಸಬೇಕಾಗುತ್ತದೆ. ಕೃಷ್ಣೆಯ ಮಕ್ಕಳು ಬೀದಿಗೆ ಬರುವ ಅಪಾರ ಇದೆ. ಕೃಷ್ಣಾ ನ್ಯಾಯಾಽಕರಣ-೨ರ ತೀರ್ಪಿನಂತೆ ನಮ್ಮ ಪಾಲಿನ ೧೩೦ ಟಿಎಂಸಿ ನೀರು ಹಂಚಿಕೆಯನ್ನು ಕೇಂದ್ರ ಸರ್ಕಾರ ಅಽಸೂಚನೆ ಹೊರಡಿಸಿಲ್ಲ. ಕಾವೇರಿ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದಾಗಲೂ ಕೇಂದ್ರ ಸರ್ಕಾರ ಅಽಸೂಚನೆ ಹೊರಡಿಸಿತ್ತು. ಅದೇ ನಿಯಮ ಕೃಷ್ಣೆಗೆ ಏಕಿಲ್ಲ? ಇಲ್ಲೂ ಸಹ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ೧೨ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ತಕ್ಕಪಾಠ ಕಲಿಸುವ ಮೂಲಕ ಕೃಷ್ಣೆಯನ್ನು ಉಳಿಸಿಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts