More

    ನಮ್ಮ ಸಮ್ಮೇಳನ ಎಂಬ ಭಾವನೆ ಬರಲಿ


    ಕಲಬುರಗಿ: ಕಲಬುರಗಿಯಲ್ಲಿ ಮಾದರಿ ಸಮ್ಮೇಳನ ನಡೆಯಬೇಕು. ನಾವೆಲ್ಲರೂ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಬಿ. ಶರತ್ ಹೇಳಿದರು.
    ಗುಲ್ವರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕೇಂದ್ರೀಯ ವಿಶ್ವವಿದಾಲಯ ಕನ್ನಡ ವಿಭಾಗದಿಂದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತತ ಆಯೋಜಿಸಿದ `ಎಲ್ಲರಿಗಾಗಿ ಕನ್ನಡ ಸಾಹಿತ್ಯ’ ವಿಶೇಷ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದ ಅವರು, ಇದು ನಮ್ಮ ಸಮ್ಮೇಳನ ಎಂಬ ಭಾವನೆ ಬರಬೇಕು. ಜಿಲ್ಲೆಯ ಜನತೆಯ ಸಹಕಾರಕ್ಕೆ ನಾನು ಚಿರಋಣಿ ಎಂದರು.
    ಕನರ್ಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಮುಸ್ತಾಕ್ ಅಹ್ಮದ್ ಪಟೇಲ್ ಮಾತನಾಡಿದರು.
    ಡಾ. ಸ್ವಾಮಿರಾವ ಕುಲಕಣರ್ಿ ವಿಶೇಷ ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಅದನ್ನು ಎಲ್ಲರೂ ಸವಿಯಬೇಕು. ಪ್ರಾಚೀನ, ಮಧ್ಯ ಆಧುನಿಕ ಕನ್ನಡ ಸಾಹಿತ್ಯದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
    ಗುಲ್ಬರ್ಗ ವಿವಿ ಕುಲಪತಿ ಡಾ. ದೇವಿದಾಸ ಮಾಲೆ ಮಾತನಾಡಿ, ವಿಶ್ವವಿದ್ಯಾಲಯವು ಸಮ್ಮೇಳನ ಯಶಸ್ವಿಗೆ ಎಲ್ಲ ರೀತಿಯ ನೆರವು ನೀಡಲಿದೆ ಎಂದು ತಿಳಿಸಿದರು.
    ಕನ್ನಡ ಅಧ್ಯಯನ ಸಂಸ್ಥೆಯ ನಿದರ್ೇಶಕ ಪ್ರೊ. ಎಚ್.ಟಿ. ಪೋತೆ, ಪ್ರಮುಖರಾದ ಡಾ. ಪರಿಮಳ ಅಂಬೇಕರ್, ಡಾ.ಶ್ರೀಶೈಲ ನಾಗರಾಳ, ಡಾ. ಸಂಗಪ್ಪ ಹೊಸಮನಿ, ಸುರೇಶ ಬಡಿಗೇರ, ಡಾ. ಅಬ್ದುಲ್ ರಬ್ ಉಸ್ತಾದ್, ಡಾ. ಸುನಂದಾ, ಡಾ. ಎಂ.ಬಿ. ಕಟ್ಟಿ ಉಪಸ್ಥಿತರಿದ್ದರು.
    ಡಾ. ವಿಕ್ರಮ ವಿಸಾಜಿ ಸ್ವಾಗತಿಸಿದರು. ಡಾ. ಶಿವಪುತ್ರ ಮಾವಿನ ವಂದಿಸಿದರು. ಡಾ. ವಿಜಯಕುಮಾರ ಬೀಳಗಿ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts