More

    ನಮ್ಮದುಶರಣರ,ಬಸವರ ಆರಾಧನೆ

    ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
    ಭೂತ,ಪ್ರೇತ ಇತ್ಯಾದಿಗಳ ಸಂಕೋಲೆ,ಅಮಾವಾಸ್ಯೆ-ಹುಣ್ಣಿಮೆ,ರಾಹುಕಾಲ,ಸ್ಮಶಾನ,ಸಾವು,ಕ್ರೌರ್ಯತೆ ಎಂಬ ಕತ್ತಲನ್ನು ತುಂಬಿಕೊಂಡಿದ್ದೇವೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಶರಣ ಸಂಸ್ಕೃತಿ ಉತ್ಸವ ಅಂತಿಮ ದಿನ ಬುಧವಾರ ಅನುಭವ ಮಂಟಪದಲ್ಲಿ ಸಹಜ ಶಿವಯೋಗ ಸಾನ್ನಿಧ್ಯ ವಹಿಸಿ ಮಾತನಾಡಿ,ಕೆಲವರು ಭೂತಾರಾಧನೆ ನಂಬುತ್ತಾರೆ. ಆದರೆ ನಮ್ಮದು ಲಿಂಗಾರಾಧನೆ, ಶರಣರ,ಬಸವರ ಆರಾಧನೆಯಾಗಿದೆ.
    ಭೂತಾರಾಧನೆ,ಭಾನಾಮತಿ,ಮಾಟ-ಮಂತ್ರ,ವಾರ,ತಿಥಿ,ನಕ್ಷತ್ರ,ವಾಮಾಚಾರ ಇತ್ಯಾದಿ ಮಾನವನ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬದುಕನ್ನು ಬಂಧನಕ್ಕೆ ಒಳಪಡಿಸುವ ಅಂಶಗಳಾಗಿವೆ. ಸ್ವರ್ಗ-ನರಕ,ದೇವಲೋಕ-ಮರ್ತ್ಸೃಲೋಕ,ಪುನರ್ಜನ್ಮ ವೆಂಬ ಭ್ರಮೆಗಳ ಭಾರದಿಂದ ಹೊರಬರಬೇಕು. ಮುಕ್ತವಾದ ಬದುಕಿಗೆ ಇವೆಲ್ಲ ತೊಡಕುಗಳಾಗಿದ್ದು,ಭ್ರಮೆ,ಮೂಢನಂಬಿಕೆಗಳನ್ನು ಕಳಚಿಕೊಂಡಾಗ ಶೂನ್ಯತ್ವದೆಡೆಗೆ ಸಾಗಲು ಸಾಧ್ಯ.
    ಇಲ್ಲದ್ದನ್ನೆಲ್ಲ ಕಲ್ಪಿಸಿಕೊಂಡು ಭ್ರಮಾಧೀನರಾಗಬಾರದು. ಭ್ರಮೆ ಭಾರವನ್ನು ಹಂತ ಹಂತವಾಗಿ ಬಿಡಿಸಿಕೊಳ್ಳ ಬೇಕು. ದೇವರು,ಸಂಕಷ್ಟಿ,ನವ ಗ್ರಹಾರಾಧಾನೆ,ಉಪವಾಸ-ಇಂಥ ಭ್ರಮೆಗಳಿಂದ ಮುಕ್ತರಾಗಬೇಕು. ಧರ್ಮ ದೇವರನ್ನು ಸಂಪ್ರದಾಯಗಳಿಂದ ಕಟ್ಟಿ ಹಾಕಲಾಗಿದೆ. ಧರ್ಮ ಸಂಪ್ರದಾಯ ಅಲ್ಲ. ಸಂಪ್ರದಾಯ ಧರ್ಮ ಅಲ್ಲ. ಧರ್ಮ-ಸಂಪ್ರದಾಯದಾಚೆಗೆ ಧರ್ಮದ ತಿರುಳಿದೆ. ಸರಳವಾದ ನಮ್ಮ ಬದುಕು ಇಂದು ಬಂಧನಯುಕ್ತವಾಗಿದ್ದು,ಅನಾವರಣದಿಂದ ಬದುಕು ಆನಂದ,ಪರಮಾನಂದದೆಡೆ ಹೋಗಬೇಕೆಂದರು.
    ಶರಣ ಸಂಸ್ಕೃತಿ ಉತ್ಸವದ ಗೌರಾವಾಧ್ಯಕ್ಷ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ,ಕೊಡ್ಲಿಪೇಟೆ ಕಲ್ಲಳ್ಳಿಮಠದ ಶ್ರೀ ರುದ್ರ ಮುನಿ ಸ್ವಾಮೀಜಿ,ಬೇಲೂರು ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ,ಅರಕಲಗೂಡು-ಬೆಂಗಳೂರು ಶ್ರೀ ದೊಡ್ಡಮಠದ ಮಲ್ಲಿ ಕಾರ್ಜುನ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಲಕ್ಷ್ಮೀಸಾಗರ ಬಸವೇಶ್ವರ ಬಳಗದ ಮುಖಂಡ ಕೆ.ಶಿವಮೂರ್ತಿ,ಮೇದಾರ ಸಮಾಜದ ಮುಖಂಡ ಬಿ.ಸಿ. ಕುಬೇರಪ್ಪ,ಶಿವಸಿಂಪಿ ಸಮಾಜದ ಮುಖಂಡ ಜೆ.ಎಸ್.ಮುರುಗೇಶ್ ಸೇರಿದಂತೆ ನಾನಾ ಮಠಾಧೀಶರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts