More

    ನಗರ ಸಾರಿಗೆ ಉಚಿತ ಪ್ರಯಾಣ ರದ್ದತಿಗೆ ಆಗ್ರಹ-ಆಟೋರಿಕ್ಷಾ, ಟ್ಯಾಕ್ಸಿ ಚಾಲಕರ ಪ್ರತಿಭಟನೆ,

    ದಾವಣಗೆರೆ: ನಗರ ಸಾರಿಗೆ ಬಸ್‌ಗಳಲ್ಲಿ ಉಚಿತ ಬಸ್ ಪ್ರಯಾಣ ರದ್ಧತಿ, ಚಾಲಕರ ಕಲ್ಯಾಣ ಮಂಡಳಿ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶ್ರೀ ಕೃಷ್ಣ ಸಾರಥಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘದಿಂದ ನಗರದಲ್ಲಿ ಸೋಮವಾರ ಆಟೋ ಚಾಲಕರು ಪ್ರತಿಭಟನೆ ನಡೆಸಿದರು.

    ನಗರದ ಹೈಸ್ಕೂಲ್ ಮೈದಾನದಿಂದ ಆಟೋ ರ‌್ಯಾಲಿ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
    ರಾಜ್ಯ ಸರ್ಕಾರ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಯಿಂದ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಆಹಾರ ಧಾನ್ಯ, ಗ್ಯಾಸ್, ಇಂಧನ, ಬಿಡಿಭಾಗಗಳ ಬೆಲೆ ಗಗಕ್ಕೇರಿರುವುದರಿಂದ ಜೀವನ ನಡೆಸುವುದು ದುಸ್ತರವಾಗಿದೆ. ಆಟೋ ಸಾಲದ ಕಂತು ಕಟ್ಟಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
    ಆಟೋದಿಂದ ಸರ್ಕಾರಕ್ಕೆ ಪ್ರತಿವರ್ಷ ಸರ್ಕಾರಕ್ಕೆ ಕೋಟಿಗೂ ಅಧಿಕ ಆದಾಯವಿದ್ದು, ಚಾಲಕರ ಕಲ್ಯಾಣ ಮಂಡಳಿ ಸ್ಥಾಪಿಸಿ 500 ಕೋಟಿ ರೂ. ಮೀಸಲಿರಿಸಿ ಸಂಕಷ್ಟದಲ್ಲಿರುವ ಚಾಲಕರ ನೆರವಿಗೆ ಧಾವಿಸಬೇಕು. ಮಕ್ಕಳ ಶಿಕ್ಷಣಕ್ಕೆ ನೆರವು, ಸೂರಿಲ್ಲದವರಿಗೆ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
    ಸರ್ಕಾರ 15 ವರ್ಷ ಮೇಲ್ಪಟ್ಟ ಎಲ್ಲ ವಾಹನಗಳಿಗೆ ಗುಜರಿ ನೀತಿ ಜಾರಿಗೆ ತರಲು ರಿಜಿಸ್ಟರ್ ಸ್ಟಾಂಪಿಂಗ್ ಪಾಲಿಸಿ ಕರ್ನಾಟಕ ಕಾಯ್ದೆ ಜಾರಿಗೆ ಆದೇಶಿಸಿದ್ದು, ಕೂಡಲೇ ಇದನ್ನು ಹಿಂಡೆಯಬೇಕು. ದುಬಾರಿ ದಂಡ ಹಾಗೂ ಶುಲ್ಕದ ಎಂ.ವಿ.ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು. ಸಾರಿಗೆ ವಾಹನಗಳ ಇನ್ಸೂರೆನ್ಸ್ ಪಾಲಿಸಿಗಳ ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಕಾಯ್ದೆ ರದ್ದು ಅಥವಾ ಜಿಎಸ್‌ಟಿ ಮತ್ತು ಇಂಧನ ದರ ಕಡಿಮೆ ಮಾಡಬೇಕು. ನಗರದ ಎಲ್ಲ ಬಡಾವಣೆಗಳಲ್ಲಿ ಆಟೋ ನಿಲ್ದಾಣ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
    ಸಂಘದ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ನಂದಿಗಾವಿ, ಗೌರವಾಧ್ಯಕ್ಷ ಶ್ರೀನಿವಾಸಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಾಳೇಕಾಯಿ, ಪಂಚಾಕ್ಷರಿ ಕಳ್ಳಿಮಠ, ಸಂತೋಷ್‌ಕುಮಾರ್, ಸಿ.ಎಸ್.ನಾಗಭೂಷಣ, ರಾಮು ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts