More

    ನಗರೋತ್ಥಾನದಲ್ಲಿ ಆದ್ಯತೆ ಕಡೆಗಣನೆ: ಬಂಗಾರಪೇಟೆ, ಡೂಂಲೈಟ್ ಮಾರ್ಗಕ್ಕೆ ಸಿಗಲಿಲ್ಲ ಬೀದಿದೀಪ, ಸಂಚಾರ ದಟ್ಟಣೆ ರಸ್ತೆಗಳಿಗಿಲ್ಲ ಮುಕ್ತಿ

    ಕೋಲಾರ: ಮುಖ್ಯಮಂತ್ರಿಯವರ ಅಮೃತ್ ನಗರೋತ್ಥಾನ ಯೋಜನೆಯಲ್ಲಿ ನಗರಸಭೆ ಆಡಳಿತವು ಆದ್ಯತೆ ಕಡೆಗಣಿಸಿ, ‘ಲಾಬಿ, ಲಾಭ’ ದೃಷ್ಟಿಯಿಂದ ಕ್ರಿಯಾಯೋಜನೆ ತಯಾರಿಸಿರುವುದು ಬೆಳಕಿಗೆ ಬಂದಿದೆ.

    ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅಧ್ಯಕ್ಷತೆಯಲ್ಲಿ ಏ 13ರಂದು ವಿಕಾಸಸೌಧದ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆಗೊಂಡಿರುವ ನಗರೋತ್ಥಾನ 4ನೇ ಹಂತದ 40 ಕೋಟಿ ರೂ.ಗಳ ಯೋಜನೆಯಲ್ಲಿ ಅತ್ಯಗತ್ಯವಿರುವ ಕಡೆ ರಸ್ತೆ ಅಭಿವೃದ್ಧಿ ವಾಡದೆ ವಾಹನಗಳ ವಿರಳ ಸಂಚಾರ ಇರುವ ಕಡೆ ರಸ್ತೆ, ಚರಂಡಿ, ಸಿಸಿ ರಸ್ತೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ವಿನಿಯೋಗಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಬೀದಿದೀಪಗಳು ಇಲ್ಲದಿದ್ದರೂ, ಬೀದಿ ದೀಪಗಳ ಕಂಟ್ರೋಲ್ ಬಾಕ್ಸ್, ಟೈಮರ್, ಟಿಸಿ ಮತ್ತಿತರ ಸಲಕರಣೆಗಳಿಗೆ 45 ಲಕ್ಷ ರೂ. ಖರ್ಚು ವಾಡಲು ಮುಂದಾಗಿದ್ದಾರೆ. ಸಿಸಿ ಕ್ಯಾಮರಾಗಳಿಗೆಂದು ಪೊಲೀಸ್ ಇಲಾಖೆಗೆ 1ಕೋಟಿ ರೂ., ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿದ್ದರೂ, ಸ್ಮಾರ್ಟ್‌ಕ್ಲಾಸ್ ತಂತ್ರಾಂಶ ಅಳವಡಿಕೆಗೆ 30 ಲಕ್ಷ ರೂ. ಖರ್ಚು ವಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತ, ಡೂಂ ಲೈಟ್ ವೃತ್ತದಿಂದ ಕ್ಲಾಕ್‌ಟವರ್‌ವರೆಗೆ ರಸ್ತೆ ಅಭಿವೃದ್ಧಿಯಾಗಿದ್ದು, ತುರ್ತಾಗಿ ಬೀದಿ ದೀಪಗಳ ಅಳವಡಿಕೆ ವಾಡಬೇಕಿತ್ತು. ಎಸ್ಸೆನ್ನಾರ್, ಇಟಿಸಿಎಂ ಆಸ್ಪತ್ರೆ ಇದೇ ವಾರ್ಗದಲ್ಲಿದ್ದು ಜನ ಸಂಚಾರ ಹೆಚ್ಚಾಗಿದ್ದರೂ ವರ್ಷದಿಂದ ಆವರಿಸಿರುವ ಕತ್ತಲು ದೂರ ವಾಡಲು ಅಧ್ಯಕ್ಷೆ ಶ್ವೇತಾಶಬರೀಶ್ ಮತ್ತವರ ತಂಡ ವಾಡಿಲ್ಲ. ಆದಾಯ ಹೆಚ್ಚಾಗಿದ್ದರೂ, ದೊಡ್ಡಪೇಟೆ, ಗೌರಿಪೇಟೆ, ಕಠಾರಿಪಾಳ್ಯ, ಕುರುಬರ ಪೇಟೆ, ಅಮ್ಮವಾರಿಪೇಟೆ, ಕಿಲಾರಿಪೇಟೆ, ಬ್ರಾಹ್ಮಣರ ಬೀದಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ.

    ಏಕಮುಖ ರಸ್ತೆಗಳಿಂದಾಗಿ ಹಾಳಾಗಿರುವ ಪರ್ಯಾಯ ರಸ್ತೆಗಳಲ್ಲಿ ಕಷ್ಟಪಟ್ಟು ವಾಹನ ಓಡಿಸುವ ದುಸ್ಥಿತಿ ಇದೆ. ಕ್ರಿಯಾಯೋಜನೆಯಲ್ಲಿ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಮತ್ತು ಬೆರಳೆಣಿಕೆ ರಸ್ತೆಗಳನ್ನು ಪರಿಗಣಿಸಿದ್ದು, ಉಳಿದವುಗಳಿಗೆ ಮೋಕ್ಷ ಕಲ್ಪಿಸಿಲ್ಲ. ಎಸ್ಸೆನ್ನಾರ್ ಆಸ್ಪತ್ರೆ ಮುಂಭಾಗದ ರಸ್ತೆ, ಬಿಂದಿವಾಳ್ಯಂ ಕಲ್ಯಾಣ ಮಂಟಪದಿಂದ ಕೋಲಾರಮ್ಮ ಕೆರೆ ತನಕ, ಗೌರಿಪೇಟೆ, ಕಠಾರಿಪಾಳ್ಯದ ಬಹುತೇಕ ರಸ್ತೆಗಳು, ಡಿಸಿಸಿ ಬ್ಯಾಂಕ್ ವಾರ್ಗ ಸೇರಿ ವಾಹನ ದಟ್ಟಣೆ ಇರುವ ರಸ್ತೆಗಳನ್ನು ಕಡೆಗಣಿಸಲಾಗಿದೆ. ಸ್ಲಂಬೋರ್ಡ್‌ನಿಂದ ಹಣ ತಂದು ಅಭಿವೃದ್ಧಿಪಡಿಸಬಹುದಾದ ರಹಮತ್‌ನಗರ, ನಿಸಾರ್ ನಗರ, ಬಿಸ್ಮಿಲ್ಲಾನಗರ, ಪೂಲ್‌ಷಾ ಮೊಹಲ್ಲಾ, ಶಾಹಿದ್‌ನಗರ, ಚಿಕ್ಕಬಳ್ಳಾಪುರ ರಸ್ತೆಯ ಆಸುಪಾಸು ಪ್ರದೇಶದಲ್ಲಿ ಲಕ್ಷಾಂತರ ರೂ.ಗಳನ್ನು ಸಿಸಿ ರಸ್ತೆ, ಚರಂಡಿ ಮತ್ತಿತರ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ಕೆಲವು ಪುರಪಿತೃಗಳು, ಗುತ್ತಿಗೆದಾರರ ಲಾಬಿಗೆ ಮಣಿದು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂಬ ವಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

    ಟೆಂಡರ್ ಹಂತದಲ್ಲಿದೆ ಯೋಜನೆ: 40 ಕೋಟಿ ರೂ. ಕ್ರಿಯಾಯೋಜನೆಯನ್ನು ಮರು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ರಸ್ತೆ, ಚರಂಡಿ ಅಭಿವೃದ್ಧಿಗೆ ಮೊದಲ ಪ್ಯಾಕೇಜ್‌ನಲ್ಲಿ 10 ಕೋಟಿ ರೂ., 2 ನೇ ಪ್ಯಾಕೇಜ್‌ನಲ್ಲಿ 9.21 ಕೋಟಿ ರೂ., ಕಟ್ಟಡ ಕಾಮಗಾರಿಗೆ 3ನೇ ಪ್ಯಾಕೇಜ್‌ನಲ್ಲಿ 7.5 ಕೋಟಿ ರೂ. ನಿಗದಿಪಡಿಸಲಾಗಿದೆ. ಜಿಲ್ಲಾ ಸಮಿತಿ ಅನುಮೋದನೆ, ವಾರ್ಡ್‌ಗಳಲ್ಲಿ ಪರಿಶೀಲನೆ, ಸರ್ಕಾರದ ಆಡಳಿತಾತ್ಮಕ ಅನುಮೋದನೆಯಾಗಿ ಟೆಂಡರ್ ಹಂತಕ್ಕೆ ಬಂದಿದೆ. ಕೆಲವು ಸದಸ್ಯರು ಆದ್ಯತೆ ಕಡೆಗಣನೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೆಲ ಜನಪ್ರತಿನಿಧಿಗಳು ಉಸ್ತುವಾರಿ ಸಚಿವರು, ಮುಖ್ಯಮಂತ್ರಿಯವರ ಗಮನಕ್ಕೆ ತಂದರೂ ಬದಲಾವಣೆಯಾಗಿಲ್ಲ.

    ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿಗೆ ಆದ್ಯತೆ ಕೊಡಬೇಕು ಎಂದು ಹೇಳುತ್ತಲೇ ಬಂದಿದ್ದೇನೆ. ಜನರ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬುದು ನನ್ನ ನಿಲುವು. ಆದರೆ ಉಸ್ತುವಾರಿ ಸಚಿವರು ನಮ್ಮ ಮನವಿ ಕಡೆಗಣಿಸಿ ಅಧಿಕಾರಿ, ಜನಪ್ರತಿನಿಧಿಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಯೋಜನೆಗಳಿಗೆ ಅನುಮೋದನೆ ಕೊಡುವುದು ಸರಿಯಲ್ಲ. ಇಲ್ಲಿನ ಜನಪ್ರತಿನಿಧಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು.
    ಇಂಚರ ಗೋವಿಂದರಾಜು, ವಿಧಾನ ಪರಿಷತ್ ಸದಸ್ಯರು

    ನಗರಸಭೆಯ ಸಭೆಗಳಲ್ಲಿ ಚರ್ಚೆಯಾದಂತೆ, ಸದಸ್ಯರ ಮನವಿ ಪರಿಗಣಿಸಿ ಕ್ರಿಯಾಯೋಜನೆ ತಯಾರಿಸಬೇಕು. ಸ್ವಹಿತಾಸಕ್ತಿ, ಸ್ವಂತಕ್ಕೆ ಆದಾಯ ಬರುವುದನ್ನು ಗಮನದಲ್ಲಿಟ್ಟುಕೊಂಡು ಎಲ್ಲೋ ಕುಳಿತು ಕ್ರಿಯಾಯೋಜನೆ ತಯಾರಿಸುವುದು, ಅನುಮೋದನೆ ನೀಡುವುದು ವಾಡಿದರೆ ಅಭಿವೃದ್ಧಿಗೆಂದು ಎಷ್ಟು ಹಣ ಹಾಕಿದರೂ ನೀರಿನಲ್ಲಿ ಹೋಮ ವಾಡಿದಂತೆ ಆಗುತ್ತದೆ. ಉಸ್ತುವಾರಿ ಸಚಿವರು ಅಧಿಕಾರಿ, ಜನಪ್ರತಿನಿಧಿಗಳ ಸಭೆ ಕರೆಯದೆ ಬೆಂಗಳೂರಿನಲ್ಲಿ ಕುಳಿತು ಅನುಮೋದನೆ ನೀಡುವುದು ಸರಿಯಲ್ಲ.
    ರಾಕೇಶ್, ನಗರಸಭೆ ಸದಸ್ಯ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts