More

    ನಗರಸಭೆ ಗಾದಿಗೆ ತ್ರಿಕೋನ ಸ್ಪರ್ಧೆ, ಅಧ್ಯಕ್ಷ, ಉಪಾಧ್ಯಕ್ಷ ಗಿರಿಗೆ ತೆರೆಮರೆ ತಾಲೀಮು, ಮೈತ್ರಿ ಮೂಲಕ ಅಧಿಕಾರ ಗದ್ದುಗೆ

    ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ನಗರಸಭೆ ಆಡಳಿತ ರಚನೆಗೆ ಬಿಜೆಪಿ ಯಾವ ಪಕ್ಷದ ಸಖ್ಯ ಬೆಳೆಸಲಿದೆ ಎಂಬ ಚರ್ಚೆ ಬಿರುಸಾಗಿರುವ ನಡುವೆಯೇ ನಗರಸಭೆ ಗದ್ದುಗೆಯಿಂದ ಬಿಜೆಪಿಯನ್ನು ಶತಾಯಗತಾಯ ದೂರವಿಡಬೇಕೆಂಬ ಪಣತೊಟ್ಟಿರುವ ಕಾಂಗ್ರೆಸ್, ಜೆಡಿಎಸ್ ವರಿಷ್ಠರ ಮನವೊಲಿಕೆಗೆ ಕಸರತ್ತು ಆರಂಭಿಸಿದೆ. ಏತನ್ಮಧ್ಯೆ ಜೆಡಿಎಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಜೆಡಿಎಸ್ ವರಿಷ್ಠರ ಆಣತಿ ಎದುರು ನೋಡುತ್ತಿದೆ.

    ದೊಡ್ಡಬಳ್ಳಾಪುರ ನಗರಸಭೆ ಲಿತಾಂಶ ಹೊರಬಿದ್ದು 15 ದಿನ ಕಳೆಯುತ್ತಾ ಬಂದಿದ್ದು, ನಗರಸಭೆಯಲ್ಲಿ ಯಾವ ಪಕ್ಷಗಳು ಆಡಳಿತ ಹಿಡಿಯಲಿವೆ, ಯಾರ ಜತೆ ಸಖ್ಯ ಸಲವಾಗಲಿದೆ, ಯಾರಿಗೆ ಅಧ್ಯಕ್ಷ ಗಾದಿ ಒಲಿಯಲಿದೆ ಎಂಬ ಬಿಸಿಬಿಸಿ ಚರ್ಚೆಯೂ ಶುರುವಾಗಿದೆ.
    ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ, ಜತೆಗೆ ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿಸಿದ್ದ ಇಬ್ಬರು ಗೆದ್ದಿದ್ದು, ಇವರೂ ಬಿಜೆಪಿ ಬೆಂಬಲಿಸುವ ಇಂಗಿತ ವ್ಯಕ್ತಪಡಿಸಿರುವುದರಿಂದ ಇನ್ನುಳಿದ ಮೂರು ಸ್ಥಾನಗಳ ಬೇಟೆಗೆ ಬಿಜೆಪಿ ತಾಲೀಮು ನಡೆಸುತ್ತಿದೆ.

    9 ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ 7 ವಾರ್ಡ್‌ಗಳಲ್ಲಿ ಜಯಗಳಿಸಿರುವ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ನಿರಾಯಾಸವಾಗಿ ಮೈತ್ರಿ ಮಾಡಿಕೊಳ್ಳಲು ಹವಣಿಸುತ್ತಿದೆ. ಎರಡೂ ಪಕ್ಷಗಳ ಮನವೊಲಿಕೆಗೆ ಒಳಗಾಗಿರುವ ದಳಪತಿಗಳು ಯಾರ ಪರ ಒಲವು ತೋರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

    ಬಿಜೆಪಿಗೆ ಅಧ್ಯಕ್ಷ ಗಾದಿ!: ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಅಧ್ಯಕ್ಷ ಗಾದಿ ಹಿಡಿಯವುದು ಬಹುತೇಕ ಖಚಿತ ಎಂಬ ಮಾತು ಕೇಳಿಬರುತ್ತಿದೆ, ಇದರ ನಡುವೆ 5 ವರ್ಷದ ಅವಧಿಗೆ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಇದರಲ್ಲಿ ಯಾರಿಗೆ ಮೊದಲ ಅವಧಿಯ ಅಧ್ಯಕ್ಷಗಿರಿ ನೀಡಬೇಕೆಂಬ ಬಗ್ಗೆಯೂ ತೆರೆಮರೆಯಲ್ಲಿ ಮಾತುಕತೆ ನಡೆಯುತ್ತಿದೆ.

    ಕೈ-ತೆನೆ ಮೈತ್ರಿಯಾದರೆ ಜೆಡಿಎಸ್‌ಗೆ ಗಾದಿ?: ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ಕಾಂಗ್ರೆಸ್‌ನ ಸ್ಥಳೀಯ ಶಾಸಕ ವೆಂಕಟರಮಣಯ್ಯ ಶತಾಯಗತಾಯ ನಗರಸಭೆಯಲ್ಲಿ ಬಿಜೆಪಿ ದೂರವಿಡಬೇಕೆಂಬ ಹಟಕ್ಕೆ ಬಿದ್ದಿದ್ದಾರೆ. ಜೆಡಿಎಸ್ ಹಾಗೂ ಪಕ್ಷೇತರರ ಒಲವು ಗಿಟ್ಟಿಸಿ ಮೈತ್ರಿ ಮೂಲಕ ಗದ್ದುಗೆ ಹಿಡಿಯಲು ಕಸರತ್ತು ನಡೆಸುತ್ತಿದ್ದಾರೆ. ಒಂದು ವೇಳೆ ಎಲ್ಲ ಯೋಜಿಸಿದಂತೆ ಜೆಡಿಎಸ್ ಮೈತ್ರಿಯಲ್ಲಿ ಸಲವಾದರೆ ಜೆಡಿಎಸ್‌ಗೆ ಮೊದಲ ಅವಧಿಯ ಅಧ್ಯಕ್ಷಗಿರಿ ನೀಡುವ ಚಿಂತನೆಯೂ ಕಾಂಗ್ರೆಸ್ ಪಾಳಯದ ಮುಂದಿದೆ ಎಂಬ ಮಾತುಗಳು ಹರಿದಾಡುತ್ತಿವೆ, ಜೆಡಿಎಸ್‌ಗೆ ಅಧಿಕಾರ ಬಿಟ್ಟುಕೊಟ್ಟರೂ ಸರಿಯೇ, ಬಿಜೆಪಿಗೆ ನಗರಸಭೆ ಕುರ್ಚಿ ಬಿಟ್ಟುಕೊಡಬಾರದು ಎಂಬುದು ಕೈ ನಾಯಕರ ಉದ್ದೇಶವಾಗಿದೆ.

    ಜೆಡಿಎಸ್ ವರಿಷ್ಟರದ್ದೇ ಅಂತಿಮ ತೀರ್ಮಾನ: ಇತ್ತ ಕಡೆ ಕಿಂಗ್‌ಮೇಕರ್ ಎನಿಸಿರುವ ಜೆಡಿಎಸ್ ವರಿಷ್ಠರು ಯಾರ ಕಡೆ ಒಲವು ತೋರಿಸಲಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ, ಕೊನೇ ಕ್ಷಣದಲ್ಲಿ ಅಚ್ಚರಿ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಬಗ್ಗೆ ಜೆಡಿಎಸ್ ವಲಯದಲ್ಲಿ ಗುಸುಗುಸು ಕೇಳಿಬರುತ್ತಿದೆ, ವರಿಷ್ಠರು ಯಾವ ಪಕ್ಷದ ಕಡೆ ಬೆರಳು ತೋರಿಸುತ್ತಾರೋ ಅವರಿಗೆ ಜೈಕಾರ ಹಾಕಲು ಜೆಡಿಎಸ್ ಸದಸ್ಯರು ಸಿದ್ದರಿದ್ದಾರೆ.

    ಎಲ್ಲವೂ ಜೆಡಿಎಸ್ ವರಿಷ್ಠರ ಆಣತಿ ಮೇಲೆ ಆಧಾರವಾಗಿದೆ, ಸ್ಥಳೀಯವಾಗಿ ಎಲ್ಲರೂ ಒಗ್ಗಟ್ಟಿನಿಂದಲೇ ವರಿಷ್ಠರ ಆಣತಿ ಪಾಲಿಸಲಿದ್ದೇವೆ, ನಗರಾಭಿವೃದ್ಧಿ ದೃಷ್ಟಿಯಿಂದ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೆ ಒಳ್ಳೆಯದು ಎಂಬುದನ್ನು ವರಿಷ್ಠರು ನಿರ್ಧರಿಸಲಿದ್ದಾರೆ. ಎಲ್ಲ ಸದಸ್ಯರು ಹೈಕಮಾಂಡ್‌ನತ್ತ ಎದುರು ನೋಡುತ್ತಿದ್ದಾರೆ.
    ಅಪ್ಪಯ್ಯಣ್ಣ, ಜಿಪಂ ಮಾಜಿ ಸದಸ್ಯ, ಜೆಡಿಎಸ್ ಮುಖಂಡ

    ಈಗಾಗಲೇ ಕಂದಾಯ ಸಚಿವ ಆರ್.ಅಶೋಕ್ ಜೆಡಿಎಸ್ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದು ಲಪ್ರದವಾಗಿದೆ ಎಂಬ ಸುಳಿವು ಸಿಕ್ಕಿದೆ. ಬಹುತೇಕ ಜೆಡಿಎಸ್‌ನೊಂದಿಗೆ ಕೈಜೋಡಿಸಿ ನಗರಸಭೆಯಲ್ಲಿ ಮೈತ್ರಿ ಮೂಲಕ ಆಡಳಿತ ರಚನೆಯಾಗಲಿದೆ, ಉಳಿದಂತೆ ಬಿಜೆಪಿ ವರಿಷ್ಠರ ನಿರ್ಧಾರದ ಮೇಲೆ ಎಲ್ಲವೂ ಆಧಾರಿತವಾಗಿದೆ.
    ಶಿವಶಂಕರ್, ಬಿಜೆಪಿ ದೊಡ್ಡಬಳ್ಳಾಪುರ ನಗರಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts