More

    ನಗರದಲ್ಲಿ ಹನುಮಾನ್ ಚಾಲೀಸಾ ಪಠಣ

    ಹುಣಸೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ತಿಳಿಸಿರುವುದನ್ನು ಖಂಡಿಸಿ ತಾಲೂಕಿನ ವಿವಿಧ ಹಿಂದುಪರ ಸಂಘಟನೆಗಳು ಹನುಮಾನ್ ಚಾಲೀಸಾ ಪಠಣದ ಮೂಲಕ ವಿರೋಧ ವ್ಯಕ್ತಪಡಿಸಿದವು.
    ನಗರದ ಮೈಸೂರು ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಸಂಜೆ ತಾಲೂಕು ಹನುಮಂತೋತ್ಸವ ಸಮಿತಿ, ವಿಶ್ವ ಹಿಂದು ಪರಿಷತ್, ಶ್ರೀರಾಮಸೇನೆ, ಹಿಂದು ಜನಜಾಗೃತಿ ಸಮಿತಿಗಳ ಸಹಯೋಗದಲ್ಲಿ ಅರ್ಚಕ ರವೀಂದ್ರದ ನೇತೃತ್ವದಲ್ಲಿ ಸಾಮೂಹಿಕವಾಗಿ ಕನ್ನಡ ಭಾಷೆಗೆ ಅನುವಾದಗೊಂಡಿರುವ ಹನುಮಾನ್ ಚಾಲೀಸಾವನ್ನು ಪಠಿಸಲಾಯಿತು.
    ಹನುಮಂತೋತ್ಸವ ಸಮಿತಿಯ ತಾಲೂಕು ಅಧ್ಯಕ್ಷ ವಿ.ಎನ್ ದಾಸ್ ಮಾತನಾಡಿ, ಬಜರಂಗದಳ ಸಂಘ ಪರಿವಾರದ ಕುಟುಂಬವಾಗಿದ್ದು, ಅದರಲ್ಲೂ ವಿಶ್ವ ಹಿಂದು ಪರಿಷತ್ತಿನ ಯುವ ಪಡೆ ಆಗಿದೆ. ಹಿಂದು ಧರ್ಮ, ಸಂಸ್ಕೃತಿಗೆ ಗೋಮಾತೆಗೆ, ಮಹಿಳೆಯರಿಗೆ, ವಿಶೇಷ ಗೌರವ ತೋರುವ ಮತ್ತು ಇವುಗಳ ಸಂರಕ್ಷಣೆಯಲ್ಲಿ ಪ್ರಥಮ ಸ್ಥಾನದಲ್ಲಿ ನಿಂತು ಹೋರಾಡುವ ಸಂಘಟನೆಯಾಗಿದೆ. ಯಾವುದೇ ಧರ್ಮದ ಮೇಲೆ ಅಸೂಯೆ, ಭಯೋತ್ಪಾದನೆಯಂತಹ ಕೃತ್ಯಗಳನ್ನು ಎಸಗಿಲ್ಲ. ಹಿಂದುಗಳ ಭಾವನೆಗೆ ಧಕ್ಕೆ ತರುವ ಇಂತಹ ಶಕ್ತಿಗಳಿಗೆ ಬಜರಂಗಿಯೇ ಶಿಕ್ಷೆ ನೀಡಲಿ ಎಂದರು.

    ಸಮಿತಿಯ ಗೌರವಾಧ್ಯಕ್ಷ ಬಿ.ಎಸ್.ಯೋಗಾನಂದಕುಮಾರ, ಖಜಾಂಚಿ ಗಣೇಶ್ ಕುಮಾರಸ್ವಾಮಿ, ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಮುಖಂಡರಾದ ಚೇತನ್, ಸುಧಾಕರ್, ದೀಪು, ದೀನಾ, ರವಿಶಂಕರ, ನಗರಸಭೆ ಸದಸ್ಯ ವಿವೇಕ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts