More

    ನಂಬಿಕೆ ಮೂಡಿದರೆ ಸಹಕಾರ ಕ್ಷೇತ್ರದತ್ತ ಜನರ ಒಲವು

    ಸಾಗರ: ರಾಷ್ಟ್ರೀಕೃತ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ವಹಿವಾಟು ನಡೆಸುವವರಿಗೆ ಸಹಕಾರಿ ಕ್ಷೇತ್ರದಲ್ಲಿ ನಂಬಿಕೆ ಮೂಡಿದರೆ ಅಲ್ಲಿಯೇ ತಮ್ಮ ವಹಿವಾಟು ನಡೆಸಲು ಆರಂಭಿಸುತ್ತಾರೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ತಾಲೂಕಿನ ಮಾಸೂರಿನಲ್ಲಿ ಶನಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಲಾಗಿರುವ ನವೀಕೃತ ಕೌಂಟರ್ ಮತ್ತು ಮೀಟಿಂಗ್ ಹಾಲ್, ಟ್ರಜರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಬೇರೆ ಬೇರೆ ಕಾರಣಗಳಿಂದ ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳು ರಾತ್ರೋ ರಾತ್ರಿ ಮುಚ್ಚಿ ಹೋಗುತ್ತಿವೆ. ಇಂತಹ ಘಟನೆಗಳು ನಡೆದಾಗ ಸಹಜವಾಗಿ ಜನರಿಗೆ ಅಪನಂಬಿಕೆ ಪ್ರಾರಂಭವಾಗುತ್ತದೆ. ಸಹಕಾರಿ ಸಂಸ್ಥೆಗಳಲ್ಲಿ ಪಾರದರ್ಶಕ ಆಡಳಿತ ತರಲು ಕೇಂದ್ರ ಸರ್ಕಾರ ಕಾನೂನು ಸುಧಾರಣೆ ತರುತ್ತಿದೆ. ಅದಕ್ಕೆ ನಾವು ಹೊಂದಿಕೊಂಡು ಹೋಗುವ ಅಗತ್ಯವಿದೆ. ಮಾಸೂರು ಸಹಕಾರಿ ಸಂಸ್ಥೆ ಅತ್ಯಂತ ಉತ್ತಮವಾಗಿ ಷೇರುದಾರರು, ರೈತರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಕೆಲಸ ಮಾಡುತ್ತಿದೆ ಎಂದರು.
    ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಮಾಸೂರು ಸಹಕಾರ ಸಂಘ ಲಾಭದಾಯಕವಾಗಿ ನಡೆಯುತ್ತಿದೆ. ಸಂಸ್ಥೆಯ ಆಡಳಿತ ಮಂಡಳಿ ಆಸಕ್ತಿಯಿಂದ ಕೆಲಸ ಮಾಡಿದಾಗ ಮಾತ್ರ ಉತ್ತಮ ಹೆಸರು ಗಳಿಸಲು ಸಾಧ್ಯ. ಸರ್ಕಾರ 3 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts