More

    ಧ.ಗ್ರಾ. ಸಂಸ್ಥೆಯಿಂದ ಸ್ವಾವಲಂಬಿ ಬದುಕು

    ಲಕ್ಷ್ಮೇಶ್ವರ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಚಿಂತನೆ, ಕಳಕಳಿಯಿಂದ ಸ್ಥಾಪಿತವಾದ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಇಂದು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಿದೆ ಎಂದು ಸಿಪಿಐ ಆರ್.ಎಚ್. ಕಟ್ಟಿಮನಿ ಹೇಳಿದರು.

    ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಲಕ್ಷ್ಮೇಶ್ವರ ವಲಯ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಸಾಧನಾ ಸಮಾವೇಶ ಮತ್ತು ಸುಜ್ಞಾನನಿಧಿ ಶಿಷ್ಯವೇತನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಯೋಜನೆ ಗದಗ ಜಿಲ್ಲೆ ನಿರ್ದೇಶಕ ಶಿವಾನಂದ ಆಚಾರ್ಯ ಅವರು ಸುಜ್ಞಾನನಿಧಿ ಶಿಷ್ಯವೇತನ ವಿತರಿಸಿ ಮಾತನಾಡಿ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ವಲಯ ಒಕ್ಕೂಟಗಳು ಹೆಚ್ಚು ಕ್ರಿಯಾಶೀಲವಾಗಿವೆ. ಇಲ್ಲಿನ ಮಹಿಳೆಯರು ಸಂಘಟನೆಯಲ್ಲಿ ತೊಡಗಿಸಿಕೊಂಡು ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಸಾಮಾಜಿಕ ಚಿಂತನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

    ಯೋಜನಾಧಿಕಾರಿ ಶಿವಣ್ಣ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಸದಸ್ಯರಾದ ಅಶ್ವಿನಿ ಅಂಕಲಕೋಟಿ, ನೀಲಮ್ಮ ಮೆಣಸಿನಕಾಯಿ, ದಾನಿಕೇರಿ ಒಕ್ಕೂಟ ಅಧ್ಯಕ್ಷೆ ಧರ್ಮಶೀಲಾ ದಾನಿ, ಮಂಜಲಾಪುರದ ಮಂಜುಳಾ, ವೀರಭದ್ರೇಶ್ವರ ಒಕ್ಕೂಟದ ಮೈಲವ್ವ, ಬಸವೇಶ್ವರ ಒಕ್ಕೂಟದ ರಜನಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರಕಲಾ ಇತರರಿದ್ದರು. ಮೇಲ್ವಿಚಾರಕಿ ಲತಾ ವಿಶ್ವನಾಥ ವಂದಿಸಿದರು. ನಾಗರತ್ನಾ ನಿರೂಪಿಸಿದರು. ಒಕ್ಕೂಟದ 500ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts