More

    ಧೂಪತ್ಮಹಾಗಾಂವ ಗ್ರಾಪಂ ಕಾರ್ಯ ಮಾದರಿ

    ಔರಾದ್: ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಒಂದೇ ಗ್ರಾಮದಲ್ಲಿ ಮೂರು ಕೆರೆಗಳನ್ನು ನಿಮರ್ಿಸಿ ಅಂತರ್ಜಲಮಟ್ಟ ಕಾಪಾಡಲು ಶ್ರಮಿಸಿದ ಧೂಪತ್ಮಹಾಗಾಂವ ಗ್ರಾಪಂನ ಪ್ರತಿಯೊಬ್ಬರೂ ಪುಣ್ಯಾತ್ಮರು ಎಂದು ತಹಸೀಲ್ದಾರ್ ಅರುಣಕುಮಾರ ಕುಲಕಣರ್ಿ ಹೇಳಿದರು.

    ಧೂಪತ್ಮಹಾಗಾಂವ ಧೂಪದ ಗುಗ್ಗವ್ವೆ ಕೆರೆ ಆವರಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ 20 ಲಕ್ಷ ರೂ. ಮೊತ್ತದಲ್ಲಿ ಅಧ್ಯಕ್ಷ, ಸದಸ್ಯರು, ಪಿಡಿಒ ಹಾಗೂ ಗ್ರಾಮದ ಸಾರ್ವಜನಿಕರು ಜತೆಗೂಡಿ ನೀರು ಸಂರಕ್ಷಣೆಗಾಗಿ ಕ್ರಾಂತಿಯನ್ನೇ ಮಾಡಿರುವುದು ಬೀದರ್ ಜಿಲ್ಲೆಯಲ್ಲಿಯೇ ಮಹತ್ತರ ಕಾರ್ಯವಾಗಿದೆ ಎಂದರು.

    12ನೇ ಶತಮಾನ ಶರಣೆ ಧೂಪದ ಗುಗ್ಗವ್ವೆ ಸರೋವರ ಹಿಂದಿನ ದಿನಗಳಲ್ಲಿ ಹಾಳು ಕೊಂಪೆಯಾಗಿತ್ತು. ಅದಕ್ಕೆ ಆಗಿನ ಪಿಡಿಒ ಶಿವಾನಂದ ಔರಾದೆ ಹಾಗೂ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಅವರು ಸುಂದರೀಕರಣ ಮಾಡಿದ್ದಾರೆ. ವಾಕಿಂಗ್ ಟಾ್ರೃಕ್, ಬೋಟ್ ವ್ಯವಸ್ಥೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಜಿಲ್ಲಾಡಳಿತವೇ ಈ ಕಡೆ ಮುಖಮಾಡುವ ಹಾಗೆ ಮಾಡಿರುವುದು ಮಾದರಿಯಾಗಿದೆ ಎಂದು ತಿಳಿಸಿದರು.

    ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಜೊನ್ನೇಕೇರಿ, ಪಿಡಿಒ ನಾಗೇಶ ಮುಕ್ರಂಬೆ, ಎಇಇ ಸುಭಾಷ, ಬಸವರಾಜ ಮಡಿವಾಳ, ಸಿದ್ದು, ಮಹೇಶ ಪವಾರ್, ಪಾಂಡುರಂಗ ಇಟಗಂಪಲ್ಲಿ ಇತರರಿದ್ದರು. ನಿವೃತ್ತ ಪ್ರಾಂಶುಪಾಲ ಶರಣಪ್ಪ ಬಿರಾದಾರ್, ಕಲಾವತಿ ಗಾಯಕವಾಡ, ಚಂದ್ರಕಾಂತ ಔರಾದೆ, ಶಿವಾನಂದ ಔರಾದೆ, ರಿಲಯನ್ಸ್ ಫೌಂಡೇಷನ್ ಅಧಿಕಾರಿ ರಾಮಚಂದ್ರ ಶೇರಿಕಾರ, ಸಂಗಪ್ಪ ಅತಿವಾಳೆ, ಜಿಪಂ ಕಾರ್ಯದಶರ್ಿ ವೈಜಣ್ಣ, ಜೆಇ ಹಣಮಂತರಾವ ಪಾಟೀಲ್, ಗ್ರಾಮ ಲೆಕ್ಕಾಧಿಕಾರಿ ಸಲಾವುದ್ದಿನ್ ಅವರನ್ನು ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts