More

    ಧಾರ್ಮಿಕ ನೆಲೆಗಟ್ಟಿನ ಅಪರೂಪದ ಸಂತ


    ಯಾದಗಿರಿ: ತಾನು ನಡೆದಲೆಲ್ಲ, ಆಧ್ಯಾತ್ಮಿಕ ಜ್ಞಾನದ ಪುಷ್ಪ ಪರಿಮಳ ಪಸರಿಸಿದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ಭೂಲೋಕದ ಶ್ರೇಷ್ಠ ಸಂತ ಎಂದು ಮಾಜಿ ಶಾಸಕ ಡಾ.ವೀರಬಸವಂರಡ್ಡಿ ಮುದ್ನಾಳ್ ಅಭಿಪ್ರಾಯಪಟ್ಟರು.

    ಪೂಜ್ಯ ಸಿದ್ದೇಶ್ವರ ಶ್ರೀಗಳ ಅಗಲುವಿಕೆ ಹಿನ್ನೆಲೆಯಲ್ಲಿ ಮಂಗಳವಾರ ವಿಕಾಸ ಅಕಾಡೆಮಿಯಿಂದ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ನುಡಿಮನ ಕಾರ್ಯಕ್ರಮದಲ್ಲಿ ಮಾತನಾಡಿ, ಧಾರ್ಮಿಕ ನೆಲೆಗಟ್ಟಿನಲ್ಲಿ ಸಮಾಜಕ್ಕೆ ಹಿಡಿದ ಮೌಢ್ಯ ಅಳಿಸುವಲ್ಲಿ ಶ್ರೀಗಳ ಪಾತ್ರ ಪ್ರಮುಖವಾಗಿತ್ತು. ನಾಡು ಕಂಡ ಹಲವು ಮಠಾಶರಲ್ಲಿ ಸಿದ್ದೇಶ್ವರ ಸ್ವಾಮಿಗಳು ಸರಳ ಜೀವನ ನಡೆಸುವ ಮೂಲಕ ಜನರಿಗೆ ಜ್ಞಾನದ ಅಮೃತ ನೀಡಿದ್ದಾರೆ ಎಂದರು.

    ಶಾಸಕ ವೆಂಕಟರೆಡ್ಡಿ ಮುದ್ನಾಳ್ ಮಾತನಾಡಿ, ಸ್ವಾಮಿಗಳು ಪ್ರಕೃತಿ ಪ್ರೀಯರಾಗಿದ್ದರು, ನಿಸರ್ಗದೊಂದಿಗೆ ಇರುವ ಮಾನವನ ಸಂಬಂಧಗಳನ್ನು ಅವರು ತಮ್ಮ ಪ್ರವಚನಗಳ ಮೂಲಕ ನಾಡಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗುವ ಮೂಲಕ ಬದಲಾವಣೆಗೆ ಶ್ರಮಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

    ಉಪನ್ಯಾಸ ನೀಡಿದ ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ, ಲೇಸೆನಿಸಿಕೊಂಡು ಒಂದೇ ದಿನ ಬದುಕಿದರೆ ಸಾಕು ಜೀವನ ಪಾವನವಾಗುತ್ತದೆ. ಎಂಬ ಬಸವಣ್ಣನವರ ವಚನದಂತೆ, ಸಿದ್ದೇಶ್ವರ ಸ್ವಾಮಿಗಳ ಪೂವರ್ಾಶ್ರಮದ ಹೆಸರು ಸಿದ್ದಗೊಂಡಪ್ಪ. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಅಣ್ಣ ವಯಸ್ಸಿನಲ್ಲೇ ಎಲ್ಲರನ್ನು ಬಗೆಯಬೇಕು ಎಂಬ ಭಾವ ಅವರಲ್ಲಿ ಪುಟಿದೇಳುತ್ತಿತ್ತು ಎಂದು ಹೇಳಿದರು.

    ಜಿಪಂ ಮಾಜಿ ಸದಸ್ಯ ಎಚ್.ಸಿ.ಪಾಟೀಲ್ ಮಾತನಾಡಿ, ಶ್ರೀಗಳು ಪ್ರತಿನಿತ್ಯ 4 ಗಂಟೆಗೆ ಎದ್ದು ಭಗವದ್ಗೀತೆ, ವೇದ ಮತ್ತು ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದರು. ಬರೀ ಮಾತನಾಡಬಾರದು, ಆಡಿದಂತೆ ನಡೆಯಬೇಕು ಎಂದು ಉಪನಿಷತ್ ಹೇಳುತ್ತದೆ. ಇದನ್ನೇ ಪೂಜ್ಯರು ಪ್ರತಿಪಾದಿಸಿದ್ದರು. ಯಾವುದೇ ಮಾನ, ಸಮ್ಮಾನ ಮತ್ತು ಭಾರತ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀಯನ್ನೂ ಕೂಡಾ ನಯವಾಗಿ ತಿರಸ್ಕರಿಸಿದ ಶತಮಾನದ ಸಂತ ಎಂದು ಕೊಂಡಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts