More

    ಧಾರಾಕಾರ ಮಳೆಗೆ 13 ಮನೆಗಳು ಧರೆಗೆ

    ಚನ್ನಗಿರಿ: ತಾಲೂಕಿನ ವಿವಿಧ ಕಡೆಗಳಲ್ಲಿ ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ 13 ಮನೆಗಳು ಕುಸಿದಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಮನೆ ಕುಸಿತಕ್ಕೆ ಪ್ರಕೃತಿ ವಿಕೋಪದಡಿ ಪರಿಹಾರ ನೀಡಲಾಗುತ್ತ್ತಿದೆ ಎಂದು ತಹಸೀಲ್ದಾರ್ ಪಿ.ಎಸ್. ಯರಿಸ್ವಾಮಿ ತಿಳಿಸಿದರು.
    ತಾಲೂಕಿನ ಅಸ್ತಾಪನಹಳ್ಳಿ ಗ್ರಾಮದ ಶಿಥಿಲಗೊಂಡ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಕುಸಿದು ಪಕ್ಕದಲ್ಲಿ ಸಾಗುತ್ತಿದ್ದ ಗ್ರಾಮದ ಶರಣಪ್ಪ(50) ಎಂಬುವವರ ಮೇಲೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
    ತಾವರೆಕೆರೆ ಗ್ರಾಮದ ಕೆರೆಯಲ್ಲಿ ಹಸುವೊಂದು ಕಾಲು ಜಾರಿ ಕೆರೆಗೆ ಬಿದ್ದು ಸತ್ತಿದೆ.
    ತಾಲೂಕಿನ ಚಿರಡೋಣಿ ಗ್ರಾಮದಲ್ಲಿ 3 ಮನೆ, ಚಿಕ್ಕಮಳಲಿ, ಮಾನಮಟ್ಟಿ, ಕೊಡಕಿಕೆರೆಚ ಕ್ಯಾಂಪ್, ಭೀಮನೆರೆ, ಶೆಟ್ಟಿಹಳ್ಳಿ, ಕೆ. ಹೊಸಳ್ಳಿ, ದೊಡ್ಡಬ್ಬಿಗೆರೆ, ಸೋಮ್ಲಾಪುರ, ಚನ್ನಗಿರಿ ಟೌನ್, ಮುದಿಗೆರೆ ಸೇರಿದಂತೆ ತಲಾ ಒಂದು ಮನೆ ಕುಸಿದಿದೆ. ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣದಿಂದ ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕಿನಲ್ಲಿ ಬುಧವಾರವೂ ರಜೆ ನೀಡಲಾಗಿದೆ.
    ಮಳೆ ವರದಿ: ಚನ್ನಗಿರಿ 9.2 ಮಿ.ಮೀ., ದೇವರಹಳ್ಳಿ 36.4 ಮಿ.ಮೀ., ಕತ್ತಲಗೆರೆ 8.2 ಮಿ.ಮೀ., ತ್ಯಾವಣಗಿ 7.6 ಮಿ.ಮೀ., ಬಸವಾಪಟ್ಟಣ 4.2 ಮಿ.ಮೀ., ಜೋಳದಾಳು 13.8 ಮಿ.ಮೀ., ಸಂತೇಬೆನ್ನೂರು 20.4 ಮಿ.ಮೀ., ಉಬ್ರಾಣಿ 46.4 ಮಿ.ಮೀ., ಕೆರೆಬಿಳಚಿ 34.2 ಮಿ.ಮೀ.ರಷ್ಟು ಮಳೆ ದಾಖಲಾಗಿದೆ. ಸರಾಸರಿ 180.4 ಮಿಮೀನಷ್ಟು ಮಳೆ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts