More

    ಧಾರವಾಡ-ಸವದತ್ತಿ ಸಂಚಾರ ಬಂದ್

    ಧಾರವಾಡ: ಮಂಗಳವಾರ ರಾತ್ರಿಯಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಧಾರವಾಡ ಜಿಲ್ಲೆಯ ಬಹುತೇಕ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ವರ್ಷದ ಸಂಭವಿಸಿದ್ದ ಪ್ರವಾಹ ಭೀತಿ ಈ ಬಾರಿಯೂ ಎದುರಾಗುವ ಲಕ್ಷಣಗಳು ಗೋಚರವಾಗುತ್ತಿವೆ.

    ತುಪ್ಪರಿ ಹಳ್ಳದಲ್ಲಿ ಪ್ರವಾಹ ಬಂದಿದ್ದರಿಂದ ಹಾರೋಬೆಳವಡಿ ಗ್ರಾಮದ ಬಳಿಯ ತಾತ್ಕಾಲಿಕ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ, ಧಾರವಾಡ-ಸವದತ್ತಿ ಸಂಪರ್ಕ ಕಡಿತವಾಗಿದೆ.

    ಕಳೆದ ವರ್ಷದ ಪ್ರವಾಹದ ವೇಳೆ ಹಾರೋಬೆಳವಡಿ ಸೇತುವೆ ಕೊಚ್ಚಿ ಹೋಗಿತ್ತು. ಹೊಸ ಸೇತುವೆ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲದ್ದರಿಂದ ತಾತ್ಕಾಲಿಕ ರಸ್ತೆ ನಿರ್ವಿುಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿತ್ತು.

    ಹಳ್ಳದ ನೀರು ಏರುತ್ತಲೇ ಇರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕ ಕಟಿಯಾರ್, ನಿರಂತರ ಮಳೆಯಿಂದ ಹಾರೋಬೆಳವಡಿ ಬಳಿಯ ತಾತ್ಕಾಲಿಕ ರಸ್ತೆ ಜಲಾವೃತವಾಗಿದೆ. ಸದ್ಯ ಜನರು ಆ ರಸ್ತೆಯಲ್ಲಿ ಸಂಚರಿಸಬಾರದು ಎಂದು ಮನವಿ ಮಾಡಿದ್ದಾರೆ.

    ಧಾರವಾಡ ನಗರದ ಜನ್ನತನಗರ, ಟೋಲ್​ನಾಕಾ, ಕೆಲಗೇರಿ ಬಳಿಯ ದ್ವಾರವಾಟಿಕಾ ಲೇಔಟ್ ಸೇರಿದಂತೆ ಬಹುತೇಕ ಕಡಗಳಲ್ಲಿ ನೀರು ನೀರು ನುಗ್ಗಿದ್ದು, ಜನರು ಪರದಾಡುವಂವತಾಗಿದೆ.

    ಹುಬ್ಬಳ್ಳಿಯ ಉಣಕಲ್ ಕೆರೆ ತುಂಬಿ ಹರಿಯುತ್ತಿದೆ. ಧಾರವಾಡ ಜಿಲ್ಲೆಯ ಹಲವು ಕೆರೆಗಳು ಭರ್ತಿಯಾಗಿವೆ. ಹುಬ್ಬಳ್ಳಿ ಗಂಗಾಧರ ನಗರ ಮತ್ತಿತರ ಕಡೆ ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟುಮಾಡಿದೆ.

    ಕುಂದಗೋಳ ತಾಲೂಕಿನ ವಿವಿಧ ಕಡೆ ಹಳ್ಳಗಳು ಉಕ್ಕಿ ಹರಿದು ಭಾರಿ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

    ಅಪೂರ್ಣ ಕಾಮಗಾರಿ: ಕಳೆದ ವರ್ಷ ಆಗಸ್ಟ್ ಮತ್ತು ಅಕ್ಟೋಬರ್​ನಲ್ಲಿ ಸಂಭವಿಸಿದ ಪ್ರವಾಹದಿಂದ ಅನೇಕ ಅನಾಹುತವಾಗಿತ್ತು. ಎಲ್ಲವನ್ನೂ ಸರಿಪಡಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರ,ೆ ಅನೇಕ ಕಡೆಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಈ ಬಾರಿಯೂ ಅನಾಹುತಗಳಾಗುವ ಆತಂಕ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts