More

    ಧಾರವಾಡ ಜಿಲ್ಲೆಯಲ್ಲಿ 3.61 ಲಕ್ಷ ಮಂದಿಗೆ ಲಸಿಕಾಕರಣ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯ 18.5 ಲಕ್ಷ ಜನರಲ್ಲಿ (2011ರ ಜನಗಣತಿ ಪ್ರಕಾರ) 3,61,457 ಜನರು ಮಾತ್ರ ಲಸಿಕೆ ಪಡೆದಿದ್ದಾರೆ !

    ಇದುವರೆಗೆ ಒಟ್ಟು 3,40,055 ಜನರು ಕೋವಿಶೀಲ್ಡ್, 21,402 ಜನರು ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ. ಇದರಲ್ಲಿ 2,89,415 ಮೊದಲ ಡೋಸ್ ಪಡೆದಿದ್ದರೆ, 72,042 ಜನ ಎರಡನೇ ಡೋಸ್ ಪಡೆದಿದ್ದಾರೆ.

    ಲಸಿಕೆ ನಿರುಪಯುಕ್ತ ಸ್ಥಾನ ‘ಜೀರೋ ಪರ್ಸೆಂಟ್’ ಇದೆ. ಅಂದರೆ, ಜಿಲ್ಲೆಯಲ್ಲಿ ವ್ಯಾಕ್ಸಿನ್ ಎಳ್ಳಷ್ಟೂ ವೇಸ್ಟ್ ಆಗಿಲ್ಲ.

    ಕೋವ್ಯಾಕ್ಸಿನ್​ಗಿಂತ ಕೋವಿಶೀಲ್ಡ್ ಲಸಿಕೆಯನ್ನು ಹೆಚ್ಚು ಜನರು ಪಡೆದಿದ್ದಾರೆ. ಮೊದಲಿನಿಂದಲೂ ಕೋವಿಶೀಲ್ಡ್ ಲಸಿಕೆ ಹೆಚ್ಚಾಗಿ ಪೂರೈಕೆಯಾಗುತ್ತಿದ್ದು, ಹಾಗಾಗಿಯೇ ಜನರು ಇದರತ್ತ ವಾಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    18 ವಯಸ್ಸು ಮೇಲ್ಪಟ್ಟವರು ಜಿಲ್ಲೆಯಲ್ಲಿ 9,50,00 ಜನರು ಇದ್ದಾರೆ. 45 ವಯಸ್ಸು ಮೇಲ್ಪಟ್ಟವರು 5,16,000 ಜನರು ಇದ್ದಾರೆ ಎಂದು ಅಂದಾಜಿಸಲಾಗಿದೆ.

    ಪೂರ್ಣ ಪ್ರಮಾಣದ ಲಸಿಕಾಕರಣ ಇನ್ನೂ ಮುಗಿದಿಲ್ಲ. ಮೊದಲ ಹಂತದಲ್ಲಿ 21 ಸಾವಿರ ‘ಹೆಲ್ತ್ ಕೇರ್ ವರ್ಕರ್’ಗಳಿಗೆ ಆದ್ಯತೆ ನೀಡಲಾಯಿತು. ಆಗ ಲಸಿಕೆ ಪಡೆಯಲು ಬಹಳಷ್ಟು ಜನರು ಮುಂದೆ ಬಂದಿರಲಿಲ್ಲ. ಎರಡನೇ ಹಾಗೂ ಮೂರನೇ ಹಂತದ ಲಸಿಕಾಕರಣ ಆರಂಭವಾಯಿತು. ಲಸಿಕೆ ಪಡೆಯುವ ಮಹತ್ವ ಈ ಸಂದರ್ಭದಲ್ಲಿ ಅರಿವಾಯಿತಾದರೂ ಬಹಳಷ್ಟು ಜನರು ಲಸಿಕಾ ಕೇಂದ್ರದತ್ತ ಸುಳಿದಿರಲಿಲ್ಲ. ಕರೊನಾ ಎರಡನೇ ಅಲೆ ತೀವ್ರಗೊಳ್ಳುತ್ತಿದ್ದಂತೆ ಕೋವಿಡ್ ಲಸಿಕೆ ಪಡೆಯಲು ಜನರು ಹೆಚ್ಚಾಗಿ ಬರಲಾರಂಭಿಸಿದರು. ಜಿಲ್ಲೆಯ ವಿವಿಧ ಲಸಿಕೆ ಕೇಂದ್ರಗಳ ಮುಂದೆ ಜನರು ಗುಂಪುಗೂಡತೊಡಗಿದರು.

    ಎಲ್ಲೆಲ್ಲಿ ನೀಡಿಕೆ?

    ಧಾರವಾಡ ಜಿಲ್ಲೆಯ 32 ಪ್ರಾಥಮಿಕ ಆರೋಗ್ಯ ಕೇಂದ್ರ, 26 ನಗರ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್್ಸ, ರೈಲ್ವೆ ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಖಾಸಗಿಯಾಗಿ ಕೆಎಲ್​ಇ-ಸುಚಿರಾಯು ಆಸ್ಪತ್ರೆಯಲ್ಲಿ ಜನರು ಹಣ ಕೊಟ್ಟು ಲಸಿಕೆ ಪಡೆಯುತ್ತಿದ್ದಾರೆ. 18ರಿಂದ 45 ವಯಸ್ಸಿನವರ ಒಳಗಿನವರಿಗೆ ಲಸಿಕೆ ಪಡೆಯಲು ಅನುಮತಿಸಿದ್ದರಿಂದ ಕೇಂದ್ರಗಳ ಮುಂದೆ ಜನರು ಗುಂಪು ಸೇರುತ್ತಿದ್ದಾರೆ. ಕೋವಿಡ್ ಲಸಿಕೆ ಸಂಗ್ರಹಕ್ಕೆ ಜಿಲ್ಲೆಯಲ್ಲಿ 61 ಕೋಲ್ಡ್ ಸ್ಟೋರೇಜ್ (ಐಎಲ್​ಆರ್)ಗಳನ್ನು ಗುರುತಿಸಲಾಗಿದೆ.

    45 ವಯಸ್ಸು ಮೇಲ್ಪಟ್ಟವರು ಹಾಗೂ 18 ವಯಸ್ಸು ಮೇಲ್ಪಟ್ಟವರು ಲಸಿಕೆ ಪಡೆಯುತ್ತಿದ್ದಾರೆ. ಹಾಗಾಗಿ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಸರ್ಕಾರದಿಂದ ಪೂರೈಕೆಯಾಗುವ ಲಸಿಕೆಯನ್ನು ಧಾರವಾಡ ಜಿಲ್ಲೆಯ ವಿವಿಧ ಲಸಿಕಾ ಕೇಂದ್ರಗಳಿಗೆ ವಿತರಿಸಲಾಗುತ್ತಿದೆ. ಹೆಚ್ಚು ಲಸಿಕೆ ಪೂರೈಕೆಯಾದರೆ, ಹೆಚ್ಚೆಚ್ಚು ಲಸಿಕೆಯನ್ನು ಕೇಂದ್ರಗಳಿಗೆ ಹಂಚಲಾಗುವುದು.

    | ಡಾ.ಎಸ್.ಎಂ. ಹೊನಕೇರಿ, ಕೋವಿಡ್ ಲಸಿಕೆ ವಿತರಣಾ ಕೇಂದ್ರದ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts