More

    ಧಾರವಾಡ ಜಿಲ್ಲೆಯಲ್ಲಿ 290 ಕೋವಿಡ್

    ಧಾರವಾಡ: ಜಿಲ್ಲೆಯಲ್ಲಿ ಶನಿವಾರ 290 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಪೀಡಿತರ ಸಂಖ್ಯೆ 10736ಕ್ಕೆ ಏರಿದೆ. ಇದುವರೆಗೆ 8132 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶೇ. 75ಕ್ಕಿಂತ ಹೆಚ್ಚು ಜನ ಚೇತರಿಸಿಕೊಂಡಂತಾಗಿದೆ. ಇನ್ನೂ 2297 ಪ್ರಕರಣಗಳು ಸಕ್ರಿಯವಾಗಿವೆ. 74 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮತ್ತೆ 9 ಜನು ಚೀನಿ ವೈರಸ್​ನಿಂದ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 307ಕ್ಕೆ ಜಿಗಿದಿದೆ.

    ಶನಿವಾರದ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ನಗರ ಮತ್ತು ಗ್ರಾಮೀಣ ಭಾಗ ಸೇರಿ 59 ಕಡೆಗಳಲ್ಲಿ ಪ್ರಕರಣಗಳು ಕಂಡುಬಂದಿವೆ. ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲೂಕು ಸೇರಿ 76 ಪ್ರದೇಶದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಇವುಗಳಲ್ಲಿ ನಗರ ಪ್ರದೇಶದ್ದೇ ಸಿಂಹ ಪಾಲು!

    ಉಳಿದಂತೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ, ಶೀಗಿಗಟ್ಟಿ ತಾಂಡಾ, ಬೋಗೂರ, ತಂಬೂರು, ತಬಕದಹೊನ್ನಳ್ಳಿ; ನವಲಗುಂದ ತಾಲೂಕಿನ ನಾಗರಹಳ್ಳಿ ಮಸೂತಿ ಓಣಿ, ಅಂಬೇಡ್ಕರ್ ನಗರ, ಕೊಂಗವಾಡ ಕೆಳಗಿನ ಓಣಿ; ಕುಂದಗೋಳ ತಾಲೂಕಿನ ಹಿರೇಹರಕುಣಿ, ಯರಿಬೂದಿಹಾಳ, ಕಮಡೊಳ್ಳಿ ಗೌಡರ ಓಣಿ, ಅಂಬೇಡ್ಕರ್ ಓಣಿ, ದೇಸಾಯಿ ಓಣಿ, ಶಿರೂರ ಪ್ಲಾಟ್, ಹೀರೆನರ್ತಿ ಗೌಡರ ಓಣಿ, ಹಿರೆಗುಂಜಳ, ಇಂಗಳಗಿ ಜನತಾ ಪ್ಲಾಟ್ ತರ್ಲಘಟ್ಟ ಹಾಗೂ ಅಣ್ಣಿಗೇರಿ ತಾಲೂಕಿನ ಹರಿಜನ ಕಾಲನಿ, ಕುರುಬರ ಓಣಿ, ಅಗಸಿ ಓಣಿ, ಕಮಲೇಶ್ವರ ಗುಡಿ ಓಣಿ, ಶಂಕರಲಿಂಗ ಗುಡಿ ಓಣಿಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.ಸುತ್ತಲಿನ ಜಿಲ್ಲೆಗಳ ಏಳೆಂಟು ಜನರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts