More

    ಧಾರವಾಡ ಜಿಲ್ಲೆಯಲ್ಲಿ 225 ಶಂಕಿತರು ಪತ್ತೆ

    ಧಾರವಾಡ: ಜಿಲ್ಲೆಯಲ್ಲಿ ಶಂಕಿತ ಸೋಂಕಿತರ ಸಂಖ್ಯೆ ದಿನೇ ದಿನೆ ಬೆಳೆಯುತ್ತಲೇ ಇದೆ. ಆದರೆ, ಹೆಚ್ಚಿನ ವರದಿಗಳು ನೆಗೆಟಿವ್ ಬರುತ್ತಿರುವ ಕಾರಣಕ್ಕೆ ಜಿಲ್ಲೆಯ ಜನರು ನಿಟ್ಟುಸಿರುವ ಬಿಡುವಂತಾಗಿದೆ.

    ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 225 ಶಂಕಿತ ಸೋಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಭಾನುವಾರ ಇದ್ದ (ಒಟ್ಟು) 2294 ಶಂಕಿತರ ಸಂಖ್ಯೆ ಸೋಮವಾರ 2540ಕ್ಕೆ ಏರಿಕೆಯಾಗಿದೆ.

    ಈವರೆಗೆ ಜಿಲ್ಲೆಯಲ್ಲಿ 1996 ಶಂಕಿತ ವ್ಯಕ್ತಿಗಳ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 1828 ಜನರ ವರದಿ ನೆಗೆಟಿವ್ ಬಂದಿವೆ. 9 ಪ್ರಕರಣದಲ್ಲಿ ಪಾಸಿಟಿವ್ ಬಂದಿದ್ದು, 7 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ ಹಾಗೂ ಹುಬ್ಬಳ್ಳಿಯ ತಲಾ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 161 ವರದಿಗಳು ಬರಬೇಕಿದೆ.

    ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 2540 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 1736 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡಗಳಲ್ಲಿ 10 ಜನ ದಾಖಲಾಗಿದ್ದಾರೆ. 70 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 703 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಮಸೀದಿಗಳಲ್ಲಿ ಪ್ರಾರ್ಥನೆ, ತರಾಭಿ ನಮಾಜ್​ಗೆ ನಿರ್ಬಂಧ

    ಧಾರವಾಡ: ಲಾಕ್​ಡೌನ್ ಹಿನ್ನಲೆಯಲ್ಲಿ ರಂಜಾನ್ ತಿಂಗಳಲ್ಲಿ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಸೇರಿ ದೈನಂದಿನ ಸಾಮೂಹಿಕ ಪ್ರಾರ್ಥನೆ ಜತೆಗೆ ತರಾಭಿ ನಮಾಜ್ ಅನ್ನು ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ವಕ್ಪ್ ಅಧಿಕಾರಿ ಮಹಮದ್ಧೀನ್ ಸಜ್ಜು ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮನೆಯಲ್ಲೇ ಇದ್ದು ಎಲ್ಲ ರೀತಿಯ ಪ್ರಾರ್ಥನೆ ಹಾಗೂ ನಮಾಜ್ ನಿರ್ವಹಿಸಬೇಕು. ಪ್ರವಾದಿ ಮುಹಮ್ಮದ್ ಪೈಗಂಬರರು ಸಾಂಕ್ರಾಮಿಕ ರೋಗ ಉಲ್ಭಣಗೊಂಡಾಗ ಯಾವುದೇ ಪ್ರದೇಶಗಳಿಗೆ ತೆರಳದೆ ಮನೆಯಲ್ಲೇ ಪ್ರಾರ್ಥನೆ ಹಾಗೂ ನಮಾಜ್ ಮಾಡುವ ಕುರಿತು ಉಪದೇಶಿಸಿದ್ದಾರೆ. ಮನೆಯಲ್ಲೇ ಇದ್ದುಕೊಂಡು ಉಪವಾಸ ಆಚರಣೆ ಮಾಡಿ, ಇದೇ ತಿಂಗಳ ಕೊನೆಯಲ್ಲಿ ಬರುವ ಶಬೇಖದ್ ಶುಭ ರಾತ್ರಿಯಲ್ಲಿ ಸಕಲ ಮಾನವ ಕುಲದ ಒಳತಿಗಾಗಿ ಹಾಗೂ ವೈರಸ್ ನಿವಾರಣೆಗೆ ಪ್ರಾರ್ಥಿಸಬೇಕು.

    ಇಫ್ತಿಯಾರ್ ಕೂಟ ಏರ್ಪಡಿಸುವುದು, ಮಸೀದಿ ಸುತ್ತ ಮುತ್ತ ಆಹಾರ ಪದಾರ್ಥಗಳ ಅಂಗಡಿ ತೆರಯುವುದು ಹಾಗೂ ಯುವಕರು ರಾತ್ರಿ ರಸ್ತೆ, ಬೀದಿ, ಮೊಹಲ್ಲಾ ಹಾಗೂ ವೃತ್ತಗಳಲ್ಲಿ ಸವಾರಿಯೊಂದಿಗೆ ಅನಾವಶ್ಯಕ ಓಡಾಟ ಮಾಡಬಾರದು. ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಸಮಾಜದ ಹಿತದೃಷ್ಟಿಯನ್ನು ಕಾಪಾಡುವ ಮೂಲಕ ಶಾಂತಿಯುತವಾಗಿ ರಂಜಾನ್ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ.

    ಪುಣ್ಯಾರಾಧನೆ, ಪಲ್ಲಕ್ಕಿ ಉತ್ಸವ ರದ್ದು

    ಹುಬ್ಬಳ್ಳಿ: ಇಲ್ಲಿಯ ಸಿದ್ಧಾರೂಢಮಠದಲ್ಲಿ ಶ್ರೀ ಸದ್ಗುರು ಗುರುನಾಥರೂಢ ಸ್ವಾಮಿಗಳ ಪುಣ್ಯಾರಾಧನೆ ಅಂಗವಾಗಿ ಮೇ 1ರಿಂದ 3ರ ವರೆಗೆ ನಡೆಯಬೇಕಿದ್ದ ಪಲ್ಲಕ್ಕಿ ಉತ್ಸವ ಹಾಗೂ ಇತರೆ ಧಾರ್ವಿುಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಭಕ್ತರ ಹಿತದೃಷ್ಟಿಯಿಂದ ಸರ್ಕಾರದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ದೇವೇಂದ್ರಪ್ಪ ಮಾಳಗಿ, ಗೌರವ ಕಾರ್ಯದರ್ಶಿ ಸಿದ್ರಾಮಪ್ಪ ಕೋಳಕೂರ ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts