More

    ಧಾರವಾಡ ಜಿಲ್ಲೆಯಲ್ಲಿ 191 ಜನರಲ್ಲಿ ಕರೊನಾ ಖಾತ್ರಿ

    ಧಾರವಾಡ: ಜಿಲ್ಲೆಯಲ್ಲಿ ಸೋಮವಾರ 191 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4644ಕ್ಕೇರಿದೆ. ಈವರೆಗೆ 2152 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 2347 ಪ್ರಕರಣಗಳು ಸಕ್ರಿಯವಾಗಿವೆ. 37 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 155 ಜನ ಮೃತಪಟ್ಟಿದ್ದಾರೆ.

    ಸೋಮವಾರ ದೃಢಪಟ್ಟ ಪ್ರಕರಣಗಳ ತಾಲೂಕುವಾರು ಮಾಹಿತಿ ಇಂತಿದೆ.

    ಧಾರವಾಡ ತಾಲೂಕು: ಭೂಸಪ್ಪ ಚೌಕ, ಸಾರಸ್ವತಪುರ, ಸಾಧನಕೇರಿ ಮುಖ್ಯ ರಸ್ತೆ, ಶಿರಡಿ ಸಾಯಿ ಬಾಬಾ ಕಾಲನಿ, ಗಾಂಧಿ ಚೌಕ, ಮೆಹಬೂಬನಗರ, ಮಾಳಾಪುರ, ಬಸವನಗರ ಹತ್ತಿರ, ಹೊಸ ಯಲ್ಲಾಪುರ, ಕುರುಬರ ಓಣಿ, ಜನ್ನತನಗರ, ಶ್ರೀರಾಮನಗರ, ಗ್ರಾಮೀಣ ಪೊಲೀಸ್ ವಸತಿಗೃಹ, ಸತ್ತೂರಿನ ರಾಜಾಜಿನಗರ, ಹನುಮಂತನಗರ, ಸಿವಿಲ್ ಆಸ್ಪತ್ರೆ ವಸತಿಗೃಹ, ಹೈಕೋರ್ಟ್ ಪ್ರದೇಶ ಬೇಲೂರು, ಕೆಸಿಡಿ ರಸ್ತೆ, ಆಕಾಶವಾಣಿ, ಮರಾಠಾ ಕಾಲನಿ, ಹಿರೇಮಠ ಗಲ್ಲಿ, ತಪೋವನ ನಗರ, ಸತ್ತೂರ ಎಸ್​ಡಿಎಂ ಆಸ್ಪತ್ರೆ, ತೇಜಸ್ವಿನಗರ, ಗಾಂಧಿನಗರ, ಮಂಗಳವಾರಪೇಟೆ ಹಿರೇಮಠ ಓಣಿ, ವಿಕಾಸನಗರ, ಸಂಪಿಗೆನಗರ, ಶಿರೂರ ಗ್ರಾಮದ ಹಿರೇಮಠ ಓಣಿ, ವಿನಾಯಕನಗರ, ಕೊಪ್ಪದಕೇರಿ ಬಳಿ.

    ಹುಬ್ಬಳ್ಳಿ ತಾಲೂಕು: ಗಣೇಶ ನಗರ, ಕೇಶ್ವಾಪುರ, ಗಂಗಾಧರ ನಗರ, ಉದಯನಗರ, ಬ್ಯಾಹಟ್ಟಿ ಗ್ರಾಮ, ಗದಗ ರಸ್ತೆ ಚೇತನಾ ಕಾಲನಿ, ಸಿದ್ಧೇಶ್ವರ ಕಾಲನಿ, ಉಣಕಲ್ ಮೌನೇಶ್ವರ ನಗರ, ಶಿವಸೋಮೇಶ್ವರ ನಗರ, ಸಿದ್ಧಾರೂಡ ಮಠ ಬಳಿ, ಸಿದ್ಧೇಶ್ವರ ಪಾರ್ಕ್, ಸಿದ್ಧಾರ್ಥ ಕಾಲನಿ, ಮಂಟೂರ ರಸ್ತೆ ಗಣೇಶನಗರ, ರೈಲ್ವೆ ಸುರಕ್ಷಾ ದಳ, ನವನಗರ ಸಿಟಿ ಪಾರ್ಕ್, ಅರವಿಂದನಗರ ಬಳಿ, ಕುಸಗಲ್, ಸೋನಿಯಾ ಗಾಂಧಿನಗರ, ಜಾಡಗೇರ ಓಣಿ, ಭೈರಿದೇವರಕೊಪ್ಪ, ವಿನಾಯಕ ನಗರ, ವೆಂಕಟೇಶ್ವರ ಕಾಲನಿ, ರೈಲ್ವೆ ನಿಲ್ದಾಣ ಹತ್ತಿರ, ದೇಶಪಾಂಡೆ ನಗರ, ರಾಮಲಿಂಗೇಶ್ವರ ನಗರ, ಬೆಂಗೇರಿ, ಚೈತನ್ಯ ವಿಹಾರ, ಸಾಯಿನಗರ, ಆದರ್ಶನಗರ, ನೂಲ್ವಿ, ಹಳೇ ಹುಬ್ಬಳ್ಳಿ ಈಶ್ವರ ನಗರ, ಕೌಲಪೇಟ್ ಮೊಮಿನ್ ಪ್ಲಾಟ್, ಗೋಕುಲ ರಸ್ತೆ, ಗೋಪನಕೊಪ್ಪ ಗವಿಸಿದ್ಧೇಶ್ವರ ಕಾಲನಿ, ಸ್ವಾಗತ ಕಾಲನಿ, ದ್ಯಾಮವ್ವನ ಗುಡಿಓಣಿ, ಸದರಸೋಫಾ, ನೇಕಾರ ನಗರ, ನವನಗರ ಶಾಂತಿ ಕಾಲನಿ, ಸಿಬಿಟಿ ಹತ್ತಿರ, ಕಿಮ್್ಸ ಆಸ್ಪತ್ರೆ, ಕಾಡಸಿದ್ಧೇಶ್ವರ ಕಾಲನಿ, ಸಾಯಿನಗರ, ಮಂಜುನಾಥ ನಗರ, ಚಾಮುಂಡೇಶ್ವರಿ ನಗರ, ಅಮರಗೋಳ, ಹೊಸೂರು, ರಾಜನಗರ, ಸಹದೇವ ನಗರ, ಮಲ್ಲಿಕಾರ್ಜುನ ನಗರ ಎನ್.ಆರ್. ಚೇತನ ಕಾಲನಿ, ಬಂಕಾಪುರ ಚೌಕ, ಬಸವೇಶ್ವರ ನಗರ, ಆನಂದನಗರ, ಭವಾನಿನಗರ, ವಿದ್ಯಾನಗರ, ಮದರ್ ತೆರೇಸಾ ಕಾಲನಿ, ಫಾರೆಸ್ಟ್ ಕಾಲನಿ ಹತ್ತಿರ, ವಿನೋಬ ನಗರ, ಬ್ಯಾಹಟ್ಟಿ ಗ್ರಾಮ ಜಾಡಗೇರ ಓಣಿ, ರೈಲ್ವೆ ಆಫೀಸರ್ ಕಾಲನಿ, ಬೊಮ್ಮಾಪುರ ಓಣಿ, ಎಪಿಎಂಸಿ, ವಿದ್ಯಾನಗರ ಬೃಂದಾವನ ಲೇಔಟ್, ಗೋಕುಲ ರಸ್ತೆ ರೇಣುಕಾ ನಗರ, ಟಿಪ್ಪುನಗರ ಹತ್ತಿರ, ವೆಜಿಟೆಬಲ್ ಮಾರುಕಟ್ಟೆ, ಯಲ್ಲಾಪುರ ಓಣಿ, ಇಂಗಳಹಳ್ಳಿ ಗ್ರಾಮ.

    ಕಲಘಟಗಿ ತಾಲೂಕಿನ ತಾವರಗೇರಿ ಗ್ರಾಮ, ಮಿಶ್ರಿಕೋಟಿ, ಅಣ್ಣಿಗೇರಿ, ಕುಂದಗೋಳ ತಾಲೂಕಿನ ಯರಗುಪ್ಪಿ ಹಾಗೂ ಇತರ ಜಿಲ್ಲೆಗಳಾದ ಗದಗ ಜಿಲ್ಲೆ ರೋಣ ತಾಲೂಕಿನ ನರೇಗಲ್ ಗ್ರಾಮ, ಹಾವೇರಿ ಜಿಲ್ಲೆ ಸವಣೂರು ಬಸ್ ನಿಲ್ದಾಣ ಹತ್ತಿರ, ಶಿಗ್ಗಾಂವಿ ತಾಲೂಕಿನ ಬಸನಾಳ, ರಾಣೆಬೆನ್ನೂರ, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಿರೇಗೊರೊಳ್ಳಿ, ಕಿತ್ತೂರು, ಗೋಕಾಕ, ಸವದತ್ತಿ ತಾಲೂಕಿನ ಶಿವಬಸವೇಶ್ವರ ನಗರ, ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಎಸ್​ಕೆ ಕೊಪ್ಪ ಗ್ರಾಮ, ಉತ್ತರ ಕನ್ನಡ ಜಿಲ್ಲೆ ಮುಂಡಗೋಡದಲ್ಲಿ ಪ್ರಕರಣಗಳು ದಾಖಲಾಗಿವೆ.

    ಎಂಟು ಮಂದಿ ಸಾವು: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಹೊಂದಿದ್ದ 8 ಜನರು ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆನೋವು, ಇತರ ತೊಂದರೆಯಿಂದ ಬಳಲುತ್ತಿದ್ದ ಧಾರವಾಡ ಸಾರಸ್ವತಪುರದ 48 ವರ್ಷದ ಪುರುಷ, ಹುಬ್ಬಳ್ಳಿ ಮಂಟೂರ ರಸ್ತೆ ಮಿಲ್ಲತ್​ನಗರದ 77 ವರ್ಷದ ವೃದ್ಧೆ, ಗೋಕುಲ ರಸ್ತೆಯ 81 ವರ್ಷದ ವೃದ್ಧೆ, ಹಳೇಹುಬ್ಬಳ್ಳಿ ಆನಂದ ನಗರದ 76 ವರ್ಷದ ವೃದ್ಧೆ, ಆದರ್ಶ ನಗರದ 70 ವರ್ಷದ ವೃದ್ಧೆ, ಚರಂತಿಮಠ ಗಲ್ಲಿಯ 51 ವರ್ಷದ ಮಹಿಳೆ, ನವನಗರದ 85 ವರ್ಷದ ವೃದ್ಧೆ ಹಾಗೂ ಶಿವಸೋಮೇಶ್ವರ ನಗರದ 85 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಪಾರ್ಥೀವ ಶರೀರಗಳ ಅಂತ್ಯಕ್ರಿಯೆಯನ್ನು ನಿಯಮಾನುಸಾರ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ತಿಳಿಸಿದೆ.

    ತಪ್ಪಿಲ್ಲ ಕೋವಿಡ್ ಕಾಟ: ಕರೊನಾ ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಕರೊನಾ ಬೆಂಬಿಡದೆ ಕಾಡುತ್ತಿದೆ. ಕಲಘಟಗಿ ರಸ್ತೆಯಲ್ಲಿನ ಪೊಲೀಸ್ ತರಬೇತಿ ಶಾಲೆಗೂ ಕರೊನಾ ಹಾವಳಿ ತಪ್ಪಿಲ್ಲ. ಈಗಾಗಲೇ 100ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದರಿಂದ ತರಬೇತಿ ಸ್ಥಗಿತಗೊಳಿಸಲಾಗಿದೆ. ಇನ್ನು ಅಲ್ಲಿನ ಕೆಲವರಿಗೆ ಕ್ವಾರಂಟೈನ್ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಪರೀಕ್ಷಾ ವಾಹನದಲ್ಲಿ ಮಗು: ಜಿಲ್ಲೆಯಲ್ಲಿ ದಿನೇ ದಿನೆ ಕರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಇರಬೇಕು ಎಂದು ಜಿಲ್ಲಾಡಳಿತ ಹೇಳುತ್ತಲೇ ಇದೆ. ಆದರೆ ಆಂಟಿಜನ್ ಪರೀಕ್ಷೆ ವಾಹನದಲ್ಲೇ ಮಗು ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಸಂಚಾರಿ ವಾಹನದ ಸಮೀಪ ಸಹ ಹೋಗಲು ಜನ ಭಯ ಬೀಳುತ್ತಾರೆ. ಆದರೆ ಈ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ ಒಬ್ಬರು ಎರಡೂವರೆ ವರ್ಷದ ಮಗುವನ್ನೂ ಕರೆ ತಂದಿದ್ದಾರೆ. ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದ ಕಾರಣಕ್ಕೆ ತಮ್ಮೊಂದಿಗೆ ಕರೆ ತಂದಿದ್ದಾರೆ ಎನ್ನಲಾಗಿದೆ. ಪುಟ್ಟ ಮಗು ಇಡೀ ಬಸ್​ನಲ್ಲಿ ಓಡಾಡಿಕೊಂಡಿದೆ. ಪಾಸಿಟಿವ್ ಇರುವ ವ್ಯಕ್ತಿಗಳು ಸಹ ಬಸ್​ನೊಳಗೆ ಬರುವ ಸಾಧ್ಯತೆ ಇದ್ದು, ಮಗುವಿನ ಸುರಕ್ಷತೆಗೆ ತೊಂದರೆಯಾಗುವ ಆತಂಕ ಇದೆ. ಚಿಕ್ಕ ಮಗು ಇರುವ ನರ್ಸ್​ಗೆ ಬೇರೆ ಕರ್ತವ್ಯ ನೀಡಬಾರದಿತ್ತೆ ಎಂಬ ಪ್ರಶ್ನೆ ಉದ್ಭವಿಸಿದೆ.

    ಎಸ್​ಪಿ ಕಚೇರಿ 2ನೇ ಸಲ ಸೀಲ್​ಡೌನ್: ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್​ಪಿ) ಕಚೇರಿ ಎರಡನೇ ಸಲ ಸೀಲ್​ಡೌನ್ ಆಗಿದೆ. ನಿಯಂತ್ರಣ ಕೊಠಡಿಯ ಇಬ್ಬರು ಸಿಬ್ಬಂದಿಗೆ ಸೋಂಕು ತಗುಲಿದ್ದರಿಂದ 2 ದಿನಗಳ ಕಾಲ ಸೀಲ್​ಡೌನ್ ಮಾಡಲಾಗಿದೆ ಎಂದು ಎಸ್​ಪಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ. 20 ದಿನದ ಹಿಂದೆ ಸಹ ಎಸ್​ಪಿ ಕಚೇರಿ ಸೀಲ್​ಡೌನ್ ಆಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts