More

    ಧಾರವಾಡ ಜಿಲ್ಲೆಯಲ್ಲಿ 13 ಸಾವಿರ ಕೋವಿಡ್ ಕೇಸ್

    ಧಾರವಾಡ: ಜಿಲ್ಲೆಯಲ್ಲಿ ಶನಿವಾರ ಕೊಂಚ ಕಡಿಮೆಯಾಗಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಭಾನುವಾರ ಏರಿಕೆಯಾಗಿದ್ದು, 311 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಪ್ರಕರಣಗಳ ಸಂಖ್ಯೆ 12,994ಕ್ಕೆ ಏರಿದೆ. ಇದುವರೆಗೆ 9945 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2679 ಪ್ರಕರಣಗಳು ಸಕ್ರಿಯವಾಗಿವೆ. 68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 370 ಜನ ಮೃತಪಟ್ಟಿದ್ದಾರೆ.

    ಧಾರವಾಡ ನಗರ ಹಾಗೂ ತಾಲೂಕು ಸೇರಿ 63 ಕಡೆಗಳಲ್ಲಿ; ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕು ಸೇರಿ 73 ಪ್ರದೇಶದಲ್ಲಿ ಪ್ರಕರಣ ಪತ್ತೆಯಾಗಿವೆ. ಕಲಘಟಗಿ ತಾಲೂಕಿನ ಜಿ. ಬಸವನಕೊಪ್ಪ, ಶೀಗಿಗಟ್ಟಿ ತಾಂಡಾ, ಗಂಜಿಗಟ್ಟಿ, ಮಿಶ್ರಿಕೋಟಿ, ಬೀರವಳ್ಳಿ, ಮಡಕಿಹೊನ್ನಳ್ಳಿ,ದೇವಿಕೊಪ್ಪ, ದುಮ್ಮವಾಡ, ಗಾಂಧಿನಗರ; ನವಲಗುಂದ ತಾಲೂಕಿನ ಹೊರಕೇರ ಓಣಿ, ನವಲಗುಂದಓಣಿ, ಕರ್ಲವಾಡ, ಭೋಗಾನೂರ, ಅಳಗವಾಡಿಯ ಪಂಚಾಯಿತಿ ಓಣಿ, ಶಾಂತಿದೇವಿ ಓಣಿ, ಶಲವಡಿ ದೇಸಾಯಿ ಪ್ಯಾಟಿಓಣಿ, ಬಸ್ತಿ ಪ್ಲಾಟ್, ತಿರ್ಲಾಪುರ; ಕುಂದಗೋಳ ತಾಲೂಕಿನ ಪಶುಪತಿಹಾಳ, ಇಂಗಳಹಳ್ಳಿ, ಕುಂಬಾರ ಓಣಿ, ಮಳಲಿ ಬಸ್ ನಿಲ್ದಾಣದ ಹತ್ತಿರ, ಶಿರೂರ ಚಟ್ಟಿ ಓಣಿ, ವಿಠ್ಠಲಾಪುರದ ಕುಬಿಹಾಳ ರಸ್ತೆ, ಚಿಕ್ಕಹರಕುರಣಿ ಅಂಬೇಡ್ಕರ್ ಓಣಿ, ದ್ಯಾವನೂರು ನಾಯಕರ ಓಣಿ, ತರ್ಲಘಟ್ಟ, ಬುಳ್ಳಪ್ಪನ ಕೊಪ್ಪ ಜೈನ ಬಸ್ತಿ, ಕಳಸ ಗ್ರಾಮದ ಅರಳಿಕಟ್ಟಿ ಓಣಿ, ಕುರಬಗೇರಿ, ಯಲಿವಾಳ ಗ್ರಾಮದ ಹೊಸಕಟ್ಟಿ ರಸ್ತೆ, ಮುಗಳಿ ಪ್ಲಾಟ್, ಹಿರೇಗುಂಜಳ; ಅಣ್ಣಿಗೇರಿ ತಾಲೂಕಿನ ಬಸಾಪುರ, ಕೇರಿ ಓಣಿ, ಬಂಗಾರಪ್ಪನಗರದಲ್ಲಿ ಸೋಂಕಿತರು ಕಂಡುಬಂದಿದ್ದಾರೆ. ಅನ್ಯಜಿಲ್ಲೆಗಳಾದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂದೋಗಿ, ಯಾದವಾಡ ಹನುಮಂತ ಗುಡಿ ಓಣಿ, ಹಳ್ಳಿಗಿರಮಠ,ದೊಡ್ಡವಾಡ ನದಾಫ ಗಲ್ಲಿ, ಗದಗ ಜಿಲ್ಲೆಯ ಲಕ್ಷೇ ಶ್ವರ, ಗಜೇಂದ್ರಗಡ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮುಗಳಿ, ಬ್ಯಾಡಗಿ ಸೂಡಂಬಿ, ಕೊಪ್ಪಳ ಜಿಲ್ಲೆಯ ಅಳವಂಡಿ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜಿ. ಜಂಬಗಿ ಹಾಗೂ ಬಳ್ಳಾರಿ ಜಿಲ್ಲೆಯ ಹರವಿ, ಹೂವಿನ ಹಡಗಲಿಯ ಸೋಂಕಿತರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

    ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸಿ
    ಧಾರವಾಡ:
    ಕೋವಿಡ್​ನಿಂದ ಚೇತರಿಸಿಕೊಂಡವರು ಕರೊನಾ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಿ ಜೀವ ರಕ್ಷಿಸಬಹುದು. ಪ್ಲಾಸ್ಮಾ ದಾನಿಗಳಿಗೆ ಸರ್ಕಾರ ತಲಾ 5,000 ರೂ. ಪ್ರೋತ್ಸಾಹಧನ ನೀಡುತ್ತಿದೆ. ಚೇತರಿಸಿಕೊಂಡವರು ಪ್ಲಾಸ್ಮಾ ದಾನಕ್ಕೆ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹೇಳಿದರು.

    ಧಾರವಾಡ ಡಿಸ್ಟ್ರಿಕ್ಟ್ ಸೆಂಟರ್ ಫಾರ್ ಲರ್ನಿಂಗ್ ಮತ್ತು ಇನ್ನೋವೇಷನ್ ಕೋವಿಡ್ ಸೇಫ್ಟಿ ಸೊಲುಷನ್ಸ್, ಇತ್ತೇಹಾದ್ ಗ್ರೂಪ್ ಹಾಗೂ ಹಬೀಬ್ ಫೌಂಡೇಷನ್ ಸಹಯೋಗದಲ್ಲಿ ನಗರದ ಮಾಳಾಪುರದ ಪಠಾಣ್ ಹಾಲ್​ನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕೋವಿಡ್ ಕುರಿತು ಇರುವ ಸಾಮಾಜಿಕ ತಪ್ಪು ಕಲ್ಪನೆಗಳು ದೂರವಾಗಬೇಕು. ರೋಗದ ವಿರುದ್ಧ ನಮ್ಮ ಹೋರಾಟ ಇರಬೇಕೇ ಹೊರತು ರೋಗಿಯ ವಿರುದ್ಧ ಅಲ್ಲ ಎಂದರು. ಜಿಲ್ಲೆಯಲ್ಲಿ ಪ್ಲಾಸ್ಮಾ ದಾನ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಡಾ. ಉಮೇಶ್ ಹಳ್ಳಿಕೇರಿ ಮಾತನಾಡಿ, ಪ್ಲಾಸ್ಮಾ ದಾನದಿಂದ ಇತರ ರೋಗಿಗಳ ಜೀವ ರಕ್ಷಣೆ ಸಾಧ್ಯ. ಅದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಕಿಮ್್ಸ ಪ್ಲಾಸ್ಮಾ ದಾನ ಸಹಾಯವಾಣಿ 9448733130, 827780062ಗೆ ಸಂರ್ಪಸಲು ಕೋರಿದರು.

    ಜಿಲ್ಲೆಯ ಮೊದಲ ಪ್ಲಾಸ್ಮಾ ದಾನಿ, ಕೋವಿಡ್ ಯೋಧ ಮೊಹಮ್ಮದ್ ಯೂಸುಫ್ ಗಾಂಜೆವಾಲೆ, ಇತರರನ್ನು ಇತ್ತೆಹಾದ್ ಗ್ರೂಪ್​ನಿಂದ ಸನ್ಮಾನಿಸಲಾಯಿತು. ಅಂಜುಮನ್ ಜಿಲ್ಲಾಧ್ಯಕ್ಷ ಅಬ್ದುಲ್ ಹಮೀದ್ ಕೊಪ್ಪದ್, ಮುಖಂಡರಾದ ಮುಫ್ತಿ ಮಹ್ಮದ್, ಡಾ. ವಿಜಾಪುರ, ಒಟ್ಟಿಲಿ ಅನ್ಬನ್​ಕುಮಾರ, ವಕೀಲ ಮುಸಾಖಾನ್ ಪಠಾಣ್, ಜುಬೇರ್, ಹುಸೇನ್ ದರ್ಗಾದ, ಜಮೀಲ್ ಮುಲ್ಲಾ, ವಸೀಮ್ ಕಿತ್ತೂರ್, ಜಾವೇದ್ ಪೀರಜಾದೆ, ತಾರಿಖ್ ಪಠಾಣ್, ಜಹೀರ್ ಪೀರಜಾದೆ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts