More

    ಧರ್ಮಸ್ಥಳ ಸಂಘದ ಕಾರ್ಯ ಸ್ವಾಗತಾರ್ಹ

    ಕಡೋಲಿ, ಬೆಳಗಾವಿ: ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಗ್ರಾಮದೇವತೆ ಹಾಗೂ ವಿಠ್ಠಲ ಬೀರದೇವ ಮಂದಿರದ ಕಳಸ ನಿರ್ಮಾಣ ಕಾರ್ಯಕ್ಕೆ ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಸ್ವಸಹಾಯ ಸಂಘದಿಂದ ಬುಧವಾರ ದೇವಸ್ಥಾನ ಕಮಿಟಿಗೆ ಸಂಸ್ಥೆಯ ಜಿಲ್ಲಾ ನಿರ್ದೆಶಕ ಪ್ರದೀಪ ಶೆಟ್ಟಿ, ಯೋಜನಾಧಿಕಾರಿ ನಾಗರಾಜ ಹಗಲಿ 2 ಲಕ್ಷ ರೂ.ಚೆಕ್ ಹಸ್ತಾಂತರಿಸಿದರು. ಶಾಸಕ ಸತೀಶ ಜಾರಕಿಹೊಳಿ ಅವರ ಶಾಸಕರ ನಿಧಿಯಿಂದ 5 ಲಕ್ಷ ರೂ. ಮೊತ್ತದ ಅನುದಾನ ನೀಡುವುದಾಗಿ ಅವರ ಆಪ್ತ ಕಾರ್ಯದರ್ಶಿ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ಘೋಷಿಸಿದರು.

    ಮಲಗೌಡ ಪಾಟೀಲ ಮಾತನಾಡಿ, ಸತೀಶ ಜಾರಕಿಹೊಳಿ ಅವರು ಜನಸೇವೆಗೆ ಅನುದಾನ ಮೀಸಲಿಟ್ಟಿದ್ದಾರೆ. ಎಲ್ಲ ವರ್ಗದ ಬಡವರು, ದೀನ-ದಲಿತರಿಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ಸದುಪಯೋಗ ಪಡೆದುಕೊಳ್ಳಬೇಕು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ತ್ರೀ ಸಬಲೀಕರಣ ಕಾರ್ಯ ಸ್ವಾಗತಾರ್ಹವಾಗಿದೆ ಎಂದರು.

    ಪ್ರದೀಪ ಶೆಟ್ಟಿ ಮಾತನಾಡಿ, ಸಂಸ್ಥೆಯಿಂದ ಮಹಿಳೆಯರು ಆರ್ಥಿಕ ವ್ಯವಹಾರದ ಅನುಭವ ಹೊಂದಿದ್ದು, ಒಂದು ಶಕ್ತಿಯಾಗಿ ಹೊರ-ಹೊಮ್ಮಿ ಸ್ವಾವಲಂಬಿಗಳಾಗಿದ್ದಾರೆ ಎಂದರು. ಕಮಿಟಿ ಅಧ್ಯಕ್ಷ ಗಜಾನನ ಕಾಗಣಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಠ್ಠಲ ಬೀರದೇವ ಜೀರ್ಣೋದ್ಧಾರ ಕಮಿಟಿ ಪದಾಧಿಕಾರಿಗಳು, ಕುರುಬ ಸಮಾಜದ ಹಿರಿಯರು, ಮಹಿಳೆಯರು, ಯುವಕರು, ಸಂಸ್ಥೆಯ ಸ್ವ-ಸಹಾಯ ಸಂಘದ ಸೇವಾಪ್ರತಿನಿಧಿ ಇದ್ದರು. ಸಂಜಯ ಉಪರಿ ನಿರೂಪಿಸಿದರು. ಕಲ್ಲಪ್ಪ ನರೋಟಿ ಸ್ವಾಗತಿಸಿದರು. ಮಹಾದೇವ ನರೋಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts