More

    ಧರ್ಮದ ಮಾರ್ಗದಲ್ಲಿ ನಡೆದರೆ ನೆಮ್ಮದಿ ಪ್ರಾಪ್ತಿ

    ರಾಣೆಬೆನ್ನೂರ: ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ಸಾಗಿದಾಗ ಮಾತ್ರ ಜೀವನ ಸುಖ ಹಾಗೂ ನೆಮ್ಮದಿ ಕಾಣಲು ಸಾಧ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

    ನಗರದ ಮೇಡ್ಲೇರಿ ರಸ್ತೆಯ ಗಂಗಾಜಲ ತಾಂಡಾದ ಬಳಿ ನಾಗದೇವತೆ, ನವದುರ್ಗೆ ದೇವಸ್ಥಾನ ಮತ್ತು ಗುರುನಿವಾಸ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ಮತ್ತು ಲೋಕಕಲ್ಯಾಣಾರ್ಥವಾಗಿ ಭಾನುವಾರ ಏರ್ಪಡಿಸಿದ್ದ ಮೃತ್ಯುಂಜಯ ಹೋಮ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಈ ಬಾರಿ ದಸರಾ ಮಹೋತ್ಸವ ಸೇರಿ ಎಲ್ಲ ಹಬ್ಬ, ಧಾರ್ವಿುಕ ಆಚರಣೆಗಳಿಗೂ ಕೋವಿಡ್​ನಿಂದ ತೊಂದರೆ ಉಂಟಾಗಿದೆ. ಪ್ರವಾಹ ಪೀಡಿತ ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳ ನೆರೆ ಸಂತ್ರಸ್ತರೊಂದಿಗೆ ಸರ್ಕಾರವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಜನತೆ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದರು.

    ದಿಂಡದಹಳ್ಳಿ ಮಠದ ಪಶುಪತಿ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಅರುಣಕುಮಾರ ಪೂಜಾರ, ವಿಧಾನ ಪರಿಷತ್ ಸದಸ್ಯ ಆರ್. ಶಂಕರ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಕೆ.ಎಂ. ರುದ್ರಯ್ಯ, ಚೋಳಪ್ಪ ಕಸವಾಳ, ಎಸ್.ಎಸ್. ರಾಮಲಿಂಗಣ್ಣನವರ, ಗಂಗಮ್ಮ ಹಾವನೂರ, ಶೇಖಪ್ಪ ಹೊಸಗೌಡ್ರ, ಕೆ. ಶಿವಲಿಂಗಪ್ಪ, ಬಿ.ಎನ್. ಪಾಟೀಲ, ಸಂತೋಷ ಪಾಟೀಲ, ಬಸವರಾಜ ಕೇಲಗಾರ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts