More

    ಪರೋಪಕಾರದಿಂದ ಸುಖ, ಸಂಪತ್ತು ಪ್ರಾಪ್ತಿ

    ಹೊಳೆಹೊನ್ನೂರು: ಪರೋಪಕಾರದಿಂದ ಸುಖ, ಸಂಪತ್ತು ಪ್ರಾಪ್ತಿ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಚನ್ನಗಿರಿ ಕೇದಾರ ಶಾಖಾ ಮಠದ ಶ್ರೀ ಕೇದಾರಲಿಂಗ ಶಿವ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಸಮೀಪದ ಮೈದೊಳಲಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಆರ್ಶೀವಚನ ನೀಡಿದ ಶ್ರೀಗಳು, ಸಮಾಜಮುಖಿ ಕಾರ್ಯಗಳಿಂದ ಮಾನವ ಜನ್ಮ ಸಾರ್ಥಕವಾಗಿ ಅಮರವಾಗಬೇಕು. ಪರಸ್ಪರ ಕೂಡಿ ಬಾಳುವುದರಲ್ಲಿನ ಹಿತವನ್ನು ಕಂಡುಕೊಳ್ಳಬೇಕು ಎಂದರು.
    ಕೌಟುಂಬಿಕ ಕಲಹಗಳು ವ್ಯಾಜ್ಯಗಳ ರೂಪ ಪಡೆಯದೆ ಮಾತುಕಥೆಗಳಲ್ಲಿ ಬಗೆ ಹರಿಯಬೇಕು. ಪ್ರತಿಯೊಬ್ಬರು ಸಂಬಂಧಗಳಿಗೆ ಬೆಲೆ ಕೊಡುವುದನ್ನು ರೂಢಿಸಿಕೊಳ್ಳಬೇಕು. ಸತ್ಕಾರ್ಯಗಳ ಚಿಂತನೆಗಳಿಂದ ಸತ್ಫಲ ಪ್ರಾಪ್ತಿಯಾಗುತ್ತವೆ. ಆಧ್ಯಾತ್ಮಿಕ ಚಿಂತನೆ, ಆಲೋಚನೆಗಳು ಮನಸಿಗೆ ಮುದ್ದ ನೀಡುತ್ತವೆ. ಪ್ರತಿಯೊಬ್ಬರಲ್ಲೂ ಪರೋಪಕಾರದ ಗುಣ ಬೆಳೆಬೇಕು. ಹಳ್ಳಿಗಳಲ್ಲಿ ಹೈನುಗಾರಿಕೆ ತೆರೆಮರೆಗೆ ಸರಿಯುತ್ತಿರುವುದು ಒಳ್ಳೆಯ ಬೆಳೆವಣಿಗೆಯಲ್ಲ ಎಂದು ಹೇಳಿದರು.
    ಕೂಡಿ ಬಾಳುವ ಸಂಸ್ಕೃತಿಯನ್ನು ವಿಶ್ವಕ್ಕೆ ತೊರಿಸಿದ ದೇಶ ನಮ್ಮದು. ಭಾರತ ಸಂಸ್ಕೃತಿಯ ತಾಯಿ ಬೇರು. ಪರಸ್ಪರ ಅನ್ಯೊನ್ಯ ಸಂಬಂಧಗಳನ್ನು ಕೊನೆಯವರೆಗೂ ಕಾಪಾಡಿಕೊಳ್ಳಬೇಕು. ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಕಾರಾತ್ಮಕ ಆಲೋಚನೆಯಿಂದ ಆರೋಗ್ಯ ಪೂರ್ಣ ಮನಸು ಸಿಗುತ್ತದೆ. ದ್ವೇಷ, ಅಸೂಹೆಗಳಿಂದ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ. ಸಜ್ಜನರಿಗೆ ಜೀವನದಲ್ಲಿ ಪರೀಕ್ಷೆಗಳು ಎದುರಾಗುತ್ತವೆ. ಎಲ್ಲವನ್ನು ಜಯಿಸಿದರೆ ಸುಖ ಜೀವನ ನಮ್ಮದಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts