More

    ಧರ್ಮದ ಆಧಾರದ ಮೇಲೆ ಚುನಾವಣೆ ಸಲ್ಲ

    ಯಲ್ಲಾಪುರ: ದೇಶದಲ್ಲಿ ಅಭಿವೃದ್ಧಿ ಪ್ರಚಾರದ ಮೇಲೆ ಚುನಾವಣೆ ನಡೆಯುವ ಬದಲು ಧರ್ಮದ ಆಧಾರದ ಮೇಲೆ ಚುನಾವಣೆ ನಡೆಯುತ್ತಿರುವುದು ವಿಷಾದಕರ ಎಂದು ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ಹೇಳಿದರು.

    ತಾಲೂಕಿನ ಕುಂದರಗಿ, ಉಮ್ಮಚಗಿ, ಕಂಪ್ಲಿ, ಹಾಸಣಗಿ, ಉಪಳೇಶ್ವರಗಳಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಯುವಕರು ಮತ್ತು ಯುವತಿಯರು ದೇಶದ ಅಭಿವೃದ್ಧಿ ಕುರಿತು ಚಿಂತಿಸಿ, ಬದಲಾವಣೆ ತರುವುದು ಅಗತ್ಯ. ಧಾರ್ವಿುಕ ಭಾವನೆ ಕೆರಳಿಸಿ ಮತ ಪರಿವರ್ತನೆಗೊಳ್ಳುವ ತಂತ್ರ ಶಾಶ್ವತವಲ್ಲ. ಗ್ರಾಪಂ ಚುನಾವಣೆಯಲ್ಲಿ ಜನ ಸಂಪರ್ಕ ಹೊಂದಿದ ಹಾಗೂ ಬಡವರಿಗೆ ಸ್ಪಂದಿಸುವ ಅಭ್ಯರ್ಥಿಗಳನ್ನು ಆರಿಸಿ ತರಬೇಕು ಎಂದರು.

    ಹಿಂದೆ ಯುಪಿಎ ಸರ್ಕಾರ ಹೊರ ದೇಶಗಳಿಂದ ಬರುವ ಅಡಕೆಗೆ ಆಮದು ಶುಲ್ಕ ಹೆಚ್ಚಿಸಿರುವುದರಿಂದ ಜಿಲ್ಲೆಯಲ್ಲಿ ಅಡಕೆಗೆ ಹೆಚ್ಚಿನ ಬೆಲೆ ಬರಲು ಕಾರಣವಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ದೇಶಪಾಂಡೆಯವರು ಅಡಕೆ ಕೊಳೆರೋಗಕ್ಕೆ ಪರಿಹಾರ ನೀಡಿದ್ದಾರೆ ಎಂದು ತಿಳಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವ್ಕಾರ, ಕಾಂಗ್ರೆಸ್ ಮುಖಂಡರಾದ ಎ.ರವೀಂದ್ರ ನಾಯ್ಕ, ಆರ್.ಎನ್.ಹೆಗಡೆ ಗೋರ್ಸಗದ್ದೆ, ವಿ.ಎಸ್ ಭಟ್, ನರಸಿಂಹ ನಾಯ್ಕ, ದೀಪಕ್ ದೊಡ್ಡೂರು, ವಾಸು ಶೇಟ್, ಪ್ರಶಾಂತ್ ಸಭಾಹಿತ್, ವರದಾ ಹೆಗಡೆ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts