More

    ಧನ್ವಂತರಿ: ಆಡಂಬರಕ್ಕಷ್ಟೇ ಅಲ್ಲದ ರತ್ನಗಳು

    ಧನ್ವಂತರಿ: ಆಡಂಬರಕ್ಕಷ್ಟೇ ಅಲ್ಲದ ರತ್ನಗಳು

    ಆಭರಣಗಳು ಹಾಗೂ ಮುತ್ತು-ರತ್ನಗಳು ಮಾನವಜೀವನದ ಅವಿಭಾಜ್ಯ ಅಂಗಗಳು. ಅವು ಮಂಗಳದ್ರವ್ಯಗಳು. ಧರಿಸಿದಾಗ ಅವು ಶರೀರದ ಅಂದವನ್ನಷ್ಟೇ ಹೆಚ್ಚು ಮಾಡುವುದಿಲ್ಲ. ಆರೋಗ್ಯಪ್ರದವಾಗಿಯೂ ಅವು ಬೇಕು! ಬಹುವಾಗಿ ಬೆಲೆಬಾಳುವುದರಿಂದ ಆಸ್ತಿಯಾಗಿ ಭೂಮಿಯನ್ನು ಗಳಿಸುವಂತೆ ರತ್ನಗಳನ್ನು ಹೊಂದುವುದಕ್ಕೂ ಅಮೂಲ್ಯ ಸ್ಥಾನವಿದೆ. ಭೂಮಿಯಲ್ಲಿ ದೊರಕುವ ಹಲವಾರು ಬಗೆಯ ರತ್ನಗಳ ಪೈಕಿ ಒಂಬತ್ತಕ್ಕೆ ವಿಶೇಷ ಮನ್ನಣೆಯಿದೆ. ಪ್ರಾಚೀನಕಾಲದಿಂದಲೂ ಇವು ನವರತ್ನಗಳು ಎಂದು ಕೀರ್ತಿಯುತವಾಗಿವೆ. ಆಯುರ್ವೆದ ಇದಕ್ಕೆ ರತ್ನವರ್ಗ ಅಥವಾ ನವರತ್ನವರ್ಗ ಎಂಬುದಾಗಿ ಹೆಸರು ನೀಡಿದೆ. ವಜ್ರ, ಮಾಣಿಕ್ಯ (ರೂಬಿ), ನೀಲ, ಪುಷ್ಯರಾಗ (ಟೋಪಾಜ್), ಮರಕತ (ಎಮರಾಲ್ಡ್), ವೈಡೂರ್ಯ (ಕ್ಯಾಟ್ಸ್ ಐ), ಗೋಮೇದಕ, ಮುಕ್ತಾ (ಮುತ್ತು) ಹಾಗೂ ಪ್ರವಾಳ(ಹವಳ)ಗಳೇ ಈ ನವರತ್ನಗಳು. ಭಾರತೀಯ ಶಾಸ್ತ್ರಗಳ ಪ್ರಕಾ ರ ರತ್ನಗಳಿಂದ ಮಾನವರಿಗಿರುವ ಲಾಭ ಒಂದೆಡೆಯಾದರೆ ಆಯುರ್ವೆದವು ಬೇರೆಯದೇ ರೀತಿಯಲ್ಲಿ ಅವುಗಳ ಪ್ರಯೋಜನವನ್ನು ವೈಜ್ಞಾನಿಕವಾಗಿ ವಿಮಶಿಸಿದೆ.

    ಧನ್ವಂತರಿ: ಆಡಂಬರಕ್ಕಷ್ಟೇ ಅಲ್ಲದ ರತ್ನಗಳು

    ಪ್ರಕೃತಿದತ್ತವಾದ ಬಹುಪಾಲು ದ್ರವ್ಯಗಳಲ್ಲಿ ಒಂದು ವಿಶೇಷವಿದೆ. ತಾವಿರುವ ಕಾಲದಲ್ಲಿ ಅನೇಕ ರೀತಿಯಿಂದ ಜನರಿಗೆ ಉಪಕಾರ ಮಾಡುತ್ತವೆ. ತಮ್ಮ ಅಸ್ತಿತ್ವ ಕಳೆದುಕೊಂಡ ನಂತರವೂ ಅದೇ ಪ್ರಕೃತಿಗೆ ಪೂರಕವಾಗಿರುತ್ತವೆ! ನವರತ್ನಗಳೂ ಅದೇ ಸಾಲಿನಲ್ಲಿ ನಿಲ್ಲುತ್ತವೆ. ರತ್ನಗಳ ಸ್ವರೂಪದಲ್ಲಿದ್ದಾಗ ಆಭರಣಗಳ ಮೂಲಕ ಶರೀರಕ್ಕೆ ಶೋಭೆಯನ್ನು ತಂದುಕೊಡುತ್ತವೆ. ಮನಸ್ಸಿನ ಪ್ರಸನ್ನತೆಗೆ, ಜೀವನದ ಲವಲವಿಕೆಗೆ ಕಾರಣವಾಗುತ್ತವೆ. ಆಯುರ್ವೆದ ರೀತ್ಯಾ ಸಂಸ್ಕರಣ, ಪರಿಷ್ಕರಣಗಳ ಮೂಲಕ ತಮ್ಮ ಸ್ವರೂಪವನ್ನು ಸಂಪೂರ್ಣವಾಗಿ ಕಳೆದುಕೊಂಡು ಅತಿ ಸೂಕ್ಷ್ಮ ಬೂದಿಯ ಕಣಗಳಾಗಿ ಪರಿವರ್ತನೆಗೊಳ್ಳುತ್ತವೆ. ಈ ಭಸ್ಮಗಳು ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಕೆಲಸಮಾಡಿ ಹಲವಾರು ರೋಗಗಳ ನಿಮೂಲನೆಗೆ ಅನುವು ಮಾಡುತ್ತವೆ. ಈ ಗುಣಧರ್ಮ ಹೇಗೆಂದರೆ, ತಾನಿದ್ದಾಗ ದುಃಖಹರ, ತಾನಿಲ್ಲದಾದಾಗ ರೋಗಹರ!

    ನವರತ್ನಗಳಲ್ಲಿ ಮುತ್ತು ಹಾಗೂ ಹವಳಗಳು ಪ್ರಾಣಿಜನ್ಯವಾಗಿವೆ. ಉಳಿದವು ಭೂಜನ್ಯ. ಎಲ್ಲ ರತ್ನಗಳನ್ನು ಒಟ್ಟಾಗಿ ಪರಿಗಣಿಸಿದರೆ ಮನುಷ್ಯ ದೇಹದಲ್ಲಿ ಕೆಲವೊಂದು ವಿಶೇಷ ಕಾರ್ಯಗಳನ್ನು ಮಾಡುವ ಪ್ರವೃತ್ತಿ ಕಂಡುಬರುತ್ತದೆ. ದೇಹದಲ್ಲಿರುವ ರಕ್ತ, ಮಾಂಸ, ಅಸ್ಥಿ ಮೊದಲಾದ ಏಳುಧಾತುಗಳ ಸಾರ ರೂಪವೇ ಓಜಸ್ಸು. ಈ ಓಜೋಶಕ್ತಿಯು ಒಬ್ಬ ವ್ಯಕ್ತಿಯ ರೋಗನಿರೋಧಕ ಶಕ್ತಿಯ ಮೂಲ. ನವರತ್ನಗಳು ಓಜೋಶಕ್ತಿಯನ್ನು ಹೆಚ್ಚಿಸುವ ಅಪ್ರತಿಮ ಗುಣ ಹೊಂದಿವೆ. ಹೃದಯಕ್ಕೆ ಬಲ ತುಂಬುವ ಗುಣವೂ ಇವೆಲ್ಲ ರತ್ನಗಳಿಗಿವೆ. ಮಿದುಳು ಹಾಗೂ ನರತಂತುಗಳಿಗೆ ತ್ರಾಣ ನೀಡಿ ಸಮಗ್ರ ನರಮಂಡಲವನ್ನೇ ಗಟ್ಟಿಮುಟ್ಟಾಗಿಸುತ್ತವೆ. ನಮ್ಮ ಶರೀರವನ್ನು ಧಾರಣೆ ಮಾಡಲು ಆಧಾರಸ್ತಂಭ ಗಳಂತಿರುವ ಏಳೂ ಧಾತುಗಳ ಪೋಷಣೆಯನ್ನು ಮಾಡುತ್ತವೆ. ಹೀಗೆ ಹೃದಯ, ಮಿದುಳು, ದೇಹಕ್ಕೆ ಬಲ ನೀಡಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಅಮೂಲ್ಯ ರತ್ನಗಳು ನಿಜಾರ್ಥದಲ್ಲಿ ಅರ್ನ್ಯಘ ರತ್ನಗಳು.

    ಧನ್ವಂತರಿ: ಆಡಂಬರಕ್ಕಷ್ಟೇ ಅಲ್ಲದ ರತ್ನಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts