More

    ದ.ಕ.ದಲ್ಲಿ 149 ಕರೊನಾ ಪಾಸಿಟಿವ್

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಮಂಗಳವಾರ 149 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಸೋಮವಾರ ಮೃತಪಟ್ಟಿದ್ದ ಐವರ ಪರೀಕ್ಷಾ ವರದಿ ಮಂಗಳವಾರ ಬಂದಿದ್ದು, ಸೋಂಕು ದೃಢಪಟ್ಟಿದೆ.

    ಮಂಗಳೂರು ನಿವಾಸಿ 81 ವರ್ಷದ ವೃದ್ಧ ಜುಲೈ 17ರಂದು ಉಸಿರಾಟ ತೊಂದರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ಬೆಳ್ತಂಗಡಿ ಮೂಲದ 51 ವರ್ಷದ ಪುರುಷ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಶ್ವಾಸಕೋಶದ ತೊಂದರೆ, ತೀವ್ರ ರಕ್ತದೊತ್ತಡ, ಡಯಾಬಿಟಿಸ್‌ನಿಂದ ನರಳುತ್ತಿದ್ದರು. ಭಟ್ಕಳ ನಿವಾಸಿ 65 ವರ್ಷದ ಪುರುಷ ಜುಲೈ 12ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸೆಪ್ಟಿಕ್ ಶಾಕ್‌ನಿಂದ ಬಳಲುತ್ತಿದ್ದವರು ನಿಧನರಾಗಿದ್ದಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ನಿವಾಸಿ 63 ವರ್ಷದ ವೃದ್ಧ ಜೂನ್ 26ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಕಿಡ್ನಿ ಕಾಯಿಲೆ, ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಹೃದಯಾಘಾತದಿಂದ ಮೃತರಾಗಿದ್ದಾರೆ. ಮಂಗಳೂರು ನಿವಾಸಿ 52 ವರ್ಷದ ಮಹಿಳೆ ಜು.19ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೃದಯ ಕಾಯಿಲೆ, ಹೈಪರ್ ಟೆನ್ಶನ್, ಡಯಾಬಿಟಿಸ್‌ನಿಂದ ಬಳಲುತ್ತಿದ್ದು ಮೃತಪಟ್ಟಿದ್ದಾರೆ. ಮೃತಪಟ್ಟವರ ಒಟ್ಟು ಸಂಖ್ಯೆ 87 ತಲುಪಿದೆ.

    ಮಂಗಳವಾರ ಸೋಂಕು ದೃಢಪಟ್ಟಿರುವವರಲ್ಲಿ 23 ಮಂದಿ ನೇರ ಸಂಪರ್ಕ, 67 ಮಂದಿ ಐಎಲ್‌ಐ, 22 ಮಂದಿ ತೀವ್ರ ಉಸಿರಾಟ ತೊಂದರೆ ಇರುವವರು. ಒಬ್ಬರು ಗಲ್ಫ್‌ನಿಂದ ಹಿಂದಿರುಗಿದವರು. 15 ಮಂದಿಯ ಸೋಂಕು ಮೂಲ ಪತ್ತೆಯಾಗಬೇಕಿದೆ.

    127 ಮಂದಿ ಬಿಡುಗಡೆ: ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣವಾದ 127 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ. ಜಿಲ್ಲೆಯ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 3834ಕ್ಕೆ ಏರಿಕೆಯಾಗಿದ್ದು, 2070 ಸಕ್ರಿಯ ಪ್ರಕರಣಗಳಿವೆ. ಬಿಡುಗಡೆಯಾಗಿರುವ ಒಟ್ಟು ಸಂಖ್ಯೆ 1675.

    ನಾಳೆಯಿಂದ ದುರ್ಬಲ ವ್ಯಕ್ತಿಗಳ ಸರ್ವೇ: ದ.ಕ. ಜಿಲ್ಲೆಯಲ್ಲಿ ಗುರುತಿಸಲಾಗಿರುವ ಅತಿ ಹೆಚ್ಚು ಸೋಂಕು ದೃಢಪಟ್ಟಿರುವ ಕ್ಲಸ್ಟರ್‌ಗಳಲ್ಲಿ ತಾಲೂಕು ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರಿಂದ ಸೋಂಕಿನಿಂದ ತೊಂದರೆಗೆ ಒಳಗಾಗಬಹುದಾದ ದುರ್ಬಲ ವ್ಯಕ್ತಿಗಳ ಗುರುತು ಪತ್ತೆ ಸಮೀಕ್ಷೆ ಜು.23ರಿಂದ ನಡೆಯಲಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

    ಪುತ್ತೂರಿನ ವೃದ್ಧೆ ಬಲಿ: ಪುತ್ತೂರು: ನಗರದ ಖಾಸಗಿ ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕಮುಡ್ನೂರು ಗ್ರಾಮದ ಕರೊನಾ ಸೋಂಕಿತ 80 ವರ್ಷದ ವೃದ್ಧೆ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಆರಂಭದ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದ ಅವರಿಗೆ ಎರಡನೇ ಬಾರಿಯ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಇದರೊಂದಿಗೆ ಪುತ್ತೂರು ತಾಲೂಕಿನಲ್ಲಿ ಕರೊನಾ ಸೋಂಕಿಗೆ ಮೂರನೇ ಬಲಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts