More

    ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ 12ರಿಂದ

    ಯಾದಗಿರಿ: ಜಿಲ್ಲಾದ್ಯಂತ ದ್ವಿತೀಯ ಪಿಯು ಪೂರಕ ಪರೀಕ್ಷೆ 12ರಿಂದ ಆರಂಭಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.

    ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರೀಕ್ಷೆ ಹಿನ್ನೆಲೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 12ರಿಂದ 25ರ ವರೆಗೆ ನಡೆಯಲಿರುವ ಪರೀಕ್ಷೆ ಸುಸೂತ್ರವಾಗಿ ಸಾಗಲು ಅಧಿಕಾರಿ ವರ್ಗ ಶ್ರಮಿಸಬೇಕು. ಜಿಲ್ಲೆಯ 90 ಪದವಿಪೂರ್ವ ಕಾಲೇಜುಗಳಲ್ಲಿನ 3614 ವಿದ್ಯಾಥರ್ಿಗಳು ನೋಂದಾಯಿಸಿದ್ದಾರೆ. 8 ಕೇಂದ್ರ ರಚಿಸಲಾಗಿದೆ. ಪ್ರವೇಶ ಪತ್ರ ಈಗಾಗಲೇ ಆನ್ಲೈನ್ ಮೂಲಕ ಎಲ್ಲ ಕಾಲೇಜುಗಳಿಗೆ ವಿತರಿಸಲಾಗಿದೆ ಎಂದರು.

    ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲ ಕೇಂದ್ರಗಳಿಗೆ ಆರೋಗ್ಯ ಸಿಬ್ಬಂದಿ ಸಲಕರಣೆಯೊಂದಿಗೆ ನಿಯೋಜಿಸಬೇಕು. ಅಲ್ಲದೆ ಕೇಂದ್ರಗಳಲ್ಲಿ ಮಾಹಿತಿ ಚಿತ್ರೀಕರಿಸುವುದು, ಸಮೂಹ ಮಾಧ್ಯಮಗಳಲ್ಲಿ ಹರಿದಾಡುವಂತೆ ಮಾಡುವುದು ಅಪರಾಧವಾಗಿರುತ್ತದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇನ್ನೂ ಪರೀಕ್ಷಾ ಕೇಂದ್ರಗಳಿಗೆ ಸುರಕ್ಷತೆಗಾಗಿ ಪೊಲೀಸರು ಸಮಯಕ್ಕಿಂತ ಮುಂಚಿತವಾಗಿ ತೆರಳಬೇಕು ಎಂದು ಸೂಚಿಸಿದರು.

    ಕೇಂದ್ರಗಳಲ್ಲಿ ವಾಟರ್ ಬಾಯ್ಗಳ ನೇಮಕ ರದ್ದುಪಡಿಸಲಾಗಿದೆ. ಕುಡಿವ ನೀರಿನ ವ್ಯವಸ್ಥೆ ಕೊಠಡಿಗಳ ಅಂತರದಲ್ಲಿ ಮಾಡಬೇಕು. ಮೊಬೈಲ್ ಪೋನ್ಗಳ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಗೌಪ್ಯ ಕಾರ್ಯಗಳಿಗೆ ಬಳಸಲಾಗುವ ವಾಹನಗಳಿಗೆ ಮುಂಚಿತವಾಗಿ ಜಿಪಿಎಸ್ ಅಳವಡಿಸಬೇಕು ಎಂದರು.

    ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕ ಎಂ.ಮರಿಸ್ವಾಮಿ, ಉಪನ್ಯಾಸಕರಾದ ಮಹಮ್ಮದ್ ಮಶಾಕ್, ಕೆ.ಕೆ ರಾಟೋಡ್, ಅಂಬರಾಯ, ಮಲ್ಲಿಕಾಜರ್ುನ ಪೂಜಾರಿ, ಬಸವರಾಜ ಕೊಡೇಕಲ್, ಮಹಾಂತೇಶ ಕಲಾಲ್, ಬಸಪ್ಪ ಕಟ್ಟಿಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts