More

    ದೊರೆಯದ ಬೆಳೆ ಹಾನಿ ವಿಮೆ

    ಕಾರವಾರ: ಬೆಳೆ ಹಾನಿಯಾಗಿದ್ದರೂ ವಿಮಾ ಪರಿಹಾರ ದೊರೆಯದೆ ಇರುವ ಕುರಿತು ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಇನ್ನೂ 57 ಪ್ರಕರಣಗಳು ದಾಖಲಾಗಿವೆ.

    2016-17 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿಯ ಗುತ್ತಿಗೆ ಪಡೆದ ಯುನಿವರ್ಸಲ್ ಸೊಂಪೊ ಎಂಬ ಕಂಪನಿ ಅರ್ಹ ರೈತರಿಗೆ ವಿಮಾ ಪರಿಹಾರ ಕೊಡದೇ ಮೋಸ ಮಾಡಿರುವ ಕುರಿತು ಅಂಕೋಲಾ ತಾಲೂಕಿನ ಕುಂಟಗಣಿಯ ರಾಮಚಂದ್ರ ಹೆಗಡೆ, ದೇವಪ್ಪ ಹೆಗಡೆ ಇಬ್ಬರು ಹಾಗೂ ಧಾರವಾಡ ಜಿಲ್ಲೆಯ ಯಲ್ಲಪ್ಪ ಒಬ್ಬ ರೈತ ಉತ್ತರ ಕನ್ನಡ ಜಿಲ್ಲಾ ಗ್ರಾಹರ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ರೈತರ ಪರವಾಗಿ ಮಹತ್ವದ ತೀರ್ಪು ನೀಡಿತ್ತು. ಅದನ್ನು ಗಮನಿಸಿ ಇನ್ನೂ ಹಲವು ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

    2018 ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಬೆಳೆ ವಿಮೆಯನ್ನು ತುಂಬಿದರೂ ವಿಮಾ ಯೋಜನೆಯ ಮಾನದಂಡದಂತೆ ಪರಿಹಾರಕ್ಕೆ ಅರ್ಹರಾಗಿದ್ದರೂ ರೈತರಿಗೂ ಪರಿಹಾರ ಬಂದಿಲ್ಲ. ಎಂದು ಎಸ್​ಬಿಐ ಇನ್ಶೂರೆನ್ಸ್ ವಿರುದ್ಧ ಶಿರಸಿ ತಾಲೂಕಿನ ಮೆಣಸಿ ಭಾಗದ 57 ರೈತರು ದಾವೆ ಹೂಡಿದ್ದು, ವಿಚಾರಣೆ ನಡೆದಿದೆ.

    ಯುನಿವರ್ಸಲ್ ಸೊಂಪೊ ಎಂಬ ಕಂಪನಿ ರೈತರಿಗೆ ಬೆಳೆ ವಿಮೆ ನೀಡದೇ ಮೋಸ ಮಾಡಿದ ಕುರಿತು ಜಿಲ್ಲಾ ಗ್ರಾಹಕರ ನ್ಯಾಯಾಲಯ ಈ ಹಿಂದೆಯೇ ಕುಂಟಗಣಿಯ ಇಬ್ಬರು ರೈತರ ಪರವಾಗಿ ತೀರ್ಪು ನೀಡಿತ್ತು. ಆದರೆ, ಕಂಪನಿ ರಾಜ್ಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಕುರಿತು ಮರು ಪರಿಶೀಲನೆ ನಡೆಸುವಂತೆ ರಾಜ್ಯ ಗ್ರಾಹಕರ ನ್ಯಾಯಾಲಯ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿತ್ತು. ಅದರಂತೆ ಎರಡನೇ ಬಾರಿಯೂ ಜಿಲ್ಲಾ ಗ್ರಾಹಕರ ನ್ಯಾಯಾಲಯ ರೈತರ ಪರವಾಗಿ ತೀರ್ಪು ಪ್ರಕಟ ಮಾಡಿದೆ.

    ನಾಗರಾಜ ನಾಯಕ , ರೈತರ ಪರ ವಕೀಲ

    ಹವಾಮಾನ ಆಧರಿಸಿ ಕೃಷಿ ಮಾಡುವ ರೈತರಿಗೆ ಅತಿ ಅನುಕೂಲಕರ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದ ಬೆಳೆ ವಿಮೆಯಾಗಿದೆ. ಅದರ ವಿರುದ್ಧ ನಮ್ಮ ಹೋರಾಟವಲ್ಲ. ಆದರೆ, ಯೋಜನೆ ಜಾರಿ ಮಾಡುವ ಕಂಪನಿಗಳು ರೈತರಿಗೆ ಮಾಡುತ್ತಿರುವ ಮೋಸದ ವಿರುದ್ಧ ನಾವು ಕಾನೂನು ಹೋರಾಟ ನಡೆಸಿದ್ದೆವು.

    ರಾಮಚಂದ್ರ ಹೆಗಡೆ, ಕುಂಟಗಣಿ, ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts