More

    ದೈಹಿಕ ಗಟ್ಟಿತನಕ್ಕೆ ಕ್ರೀಡೆಗಳು ಪೂರಕ

    ಗ್ರಾಮೀಣ: ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಶಾರೀರಿಕ ಬೆಳವಣಿಗೆ ಹಾಗೂ ಬೌದ್ಧಿಕ ಪ್ರಗತಿಗೆ ಕಾರಣವಾಗುತ್ತದೆ ಎಂದು ಅಥಣಿ ಪಿಎಸ್​ಐ ಶಿವಶಂಕರ ಮುಕರಿ ಹೇಳಿದರು.
    ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಆಯೋಜಿಸಲಾಗಿದ್ದ ವಿವಿಧ ಕ್ರೀಡೆ ಹಾಗೂ ಸ್ಪರ್ಧೆಗಳಿಗೆ ಚಾಲನೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಮನಸ್ಸು ಹಗುರ ಹಾಗೂ ಸಂತಸದಿಂದ ಇರಲು ಸಂಗೀತ ಅವಶ್ಯವಾದರೆ, ದೇಹ ಸದೃಢ ಮತ್ತು ಸುಂದರವಾಗಿ ಕಾಣಲು ಕ್ರೀಡೆ ಅತಿ ಅವಶ್ಯ. ಇಂದು ಾಸ್ಟ್​ುಡ್​ ಬೇಕರಿಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಅವುಗಳಿಗೆ ಮರುಳಾಗದೆ ಗ್ರಾಮೀಣರು ಹೈನೋದ್ಯಮ ಬೆಳೆಸಬೇಕು. ಮೈದಾ&ಸಕ್ಕರೆಯಿಂದ ಕೂಡಿದ ಆಹಾರ ಪದಾರ್ಥ ಮಕ್ಕಳಿಂದ ದೂರವಿಡಬೇಕು. ಬಹುತೇಕ ಮಕ್ಕಳ ಬೊಜ್ಜಿಗೆ ಜಂಕ್​ ಮತ್ತು ಾಸ್ಟ್​ುಡ್​ ಕಾರಣವಾಗಿದೆ. ಮಕ್ಕಳು ಆಟೋಟಗಳಲ್ಲಿ ಪಾಲ್ಗೊಳ್ಳಲು ಪಾಲಕರು ಹುರಿದುಂಬಿಸಬೇಕು. ಜಾತ್ರೆ, ಹಬ್ಬಗಳಲ್ಲಿ ಹಳ್ಳಿಗಳಲ್ಲಿ ಕ್ರೀಡಾಸ್ಪರ್ಧೆ ಆಯೋಜಿಸುತ್ತಿರುವುದು ಶ್ಲಾನೀಯ ಎಂದರು.

    ಮುಖಂಡ ಅಶೋಕ ಯಲಡಗಿ ಮಾತನಾಡಿ, ಹಳ್ಳಿ ಮಕ್ಕಳಿಗೆ ಕ್ರೀಡೆ ಬಗ್ಗೆ ಆಸಕ್ತಿ ಇದ್ದರೂ, ಒಳ್ಳೆಯ ಮಾರ್ಗದರ್ಶನ ಸಿಗುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕ್ರೀಡಾಪಟುಗಳಿಗೆ ವಿಶೇಷ ಉದ್ಯೋಗಾವಕಾಶ ನೀಡಬೇಕು ಎಂದರು. ಎ.ಸಿ.ವಾಲಿ ಮಹಾರಾಜರ ಪ್ರವಚನ ಭಕ್ತರ ಮನಸೂರೆಗೊಂಡಿತು.
    ರಾಜ್ಯಮಟ್ಟದ ಭಜನಾ ಸ್ಪರ್ಧೆ ವಿಜೇತರು: ಕುಳಲಿಯ ಚೌಡೇಶ್ವರ ಭಜನಾ ಮಂಡಳಿ ಪ್ರಥಮ, ಕೊಕಟನೂರಿನ ಸರ್ಪಭೂಷಣ ತಂಡ ದ್ವೀತಿಯ, ಬಸಳಿಗುಂದಿಯ ಬಸವೇಶ್ವರ ತಂಡ ತೃತೀಯ, ಶೂರಪಾಲಿಯ ಬಸವೇಶ್ವರ ತಂಡ ಚತುರ್ಥ ಪ್ರಶಸ್ತಿ ಪಡೆದವು.

    ಬಸವೇಶ್ವರ ಕಮಿಟಿ ಅಧ್ಯ ಮುರಗೆಪ್ಪ ಬಾಂವಿ ಅಧ್ಯತೆ ವಹಿಸಿದ್ದರು. ಪಿಕೆಪಿಎಸ್​ ಅಧ್ಯ ಅಶೋಕ ನಾಯಿಕ, ಅರ್ಚಕ ಅಪ್ಪಣ್ಣ ಪೂಜಾರಿ, ಮುಖಂಡರಾದ ಬಸಪ್ಪ ಚನ್ನಾಪುರ, ಶಿವಾಜಿ ಭೋಸಲೆ, ಬಸವರಾಜ ಬೆಳ್ಳಂಕಿ, ಬಾಲಪ್ಪ ಸಾರವಾಡ, ಪಾಂಡು ಭೋಸಲೆ, ಬಸಪ್ಪ ತೇಲಿ, ಚಂದ್ರಶೇಖರ ಬೆಳ್ಳಂಕಿ, ಶ್ರೀಶೆಲ ಖೋತ, ಬಾಬು ಹುಲ್ಯಾಳ, ಮಂಜುನಾಥ ನಾಯಿಕ, ಸದಾಶಿವ ಗಲಗಲಿ, ಅಣ್ಣಪ್ಪ ಕಿತ್ತೂರ, ಶಿವಾನಂದ ಗಲಗಲಿ, ರಾಜು ಚನ್ನಾಪುರ, ಮಹಾಂತೇಶ ಮಿರ್ಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts