More

    ದೈನಂದಿನ ಒತ್ತಡ ನಿವಾರಣೆಗೆ ಕ್ರೀಡೆ ಪೂರಕ

    ಕೊಡೇಕಲ್ : ನಿತ್ಯದ ಕೆಲಸ ಕಾರ್ಯಗಳ ಒತ್ತಡದ ಮಧ್ಯೆಯೂ ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಪೂರಕವಾಗಿವೆ. ಪರಸ್ಪರ ಬಾಂಧವ್ಯ ಬೆಸೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತವೆ ಎಂದು ಕೃಷ್ಣಾ ಭಾಗ್ಯ ಜಲನಿಗಮದ ಅಣೆಕಟ್ಟು ವಲಯದ ಮುಖ್ಯ ಅಭಿಯಂತರ ಆರ್.ಮಂಜುನಾಥ ಹೇಳಿದರು.

    ನಾರಾಯಣಪುರದ ಎಎನ್‌ಸಿಸಿ ಕ್ರೀಡಾಂಗಣದಲ್ಲಿ ಗಾಂಧಿ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ನಿಗಮದ ನೌಕರರ ಕ್ರಿಕೆಟ್ ಟೂರ್ನಿ ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದ ಅವರು, ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಪ್ರತಿಯೊಬ್ಬರೂ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆಯುವುದು ಮುಖ್ಯ ಎಂದರು.
    ಪ್ರಮುಖರಾದ ರಮೇಶ ಪವಾರ್, ಸುರೇಂದ್ರರಡ್ಡಿ, ಅಜೀತಕುಮಾರ, ಪ್ರಭಾಕರ, ಮಹಾಲಿಂಗಪ್ಪ, ವಿಜಯಕುಮಾರ ಅರಳಿ, ಶಂಕರ ಹಡಲಗೇರಿ, ಬಾಲಸುಬ್ರಮಣ್ಯಂ, ರಮಜಾನ್, ಆರ್.ಎಸ್. ರಾಠೋಡ್, ಆದಮ್ ಶಫಿ ಇತರರಿದ್ದರು.

    ಡ್ಯಾಂ ಡಿವಿಜನ್‌ಗೆ ಟ್ರೋಫಿ: ಟೂರ್ನಿಯಲ್ಲಿ ಬಸವಸಾಗರ ಅಣೆಕಟ್ಟು ವಿಭಾಗ, ಹುಣಸಗಿ ಮತ್ತು ರೋಡಲಬಂಡಾ ವಿಭಾಗ ಸೇರಿ ಒಟ್ಟು ನಾಲ್ಕು ತಂಡಗಳ ಮಧ್ಯೆ ನಡೆದ ಟೂರ್ನಿ ಫೈನಲ್‌ನಲ್ಲಿ ನಾರಾಯಣಪುರ ಡ್ಯಾಂ ವಿಭಾಗ ರೋಡಲಬಂಡಾ ವಿಭಾಗವನ್ನು ಪರಾಭವಗೊಳಿಸುವ ಮೂಲಕ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು. ರೋಡಲಬಂಡಾ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts