More

    ದೇಶ ಸೇವೆಗಾಗಿ ಯುವಕರು ಸೈನ್ಯ ಸೇರಲಿ

    ಕಲಬುರಗಿ: ಯುವಕರು ಪದವಿ ಪಡೆದರೆ ಸಾಲದು. ಇದರೊಟ್ಟಿಗೆ ಕೌಶಲ, ಸೃಜನಶೀಲತೆ, ದೇಶಸೇವಾ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಜನ್ಮಭೂಮಿ ಋಣ ತೀರಿಸಲು ತ್ಯಾಗ, ಬಲಿದಾನಕ್ಕೆ ಸಿದ್ಧವಾಗಿರಬೇಕು ಎಂದು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಇಲ್ಲಿಯ ಮಾಜಿ ಯೋಧ ಕ್ಯಾಪ್ಟನ್ ಶರಣಪ್ಪ ಭೋಗಶೆಟ್ಟಿ ಕರೆ ನೀಡಿದರು.

    ನಗರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಬುಧವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ್ ದಿವಸದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇಶಕ್ಕೆ ಸೇವೆ ಸಲ್ಲಿಸುವುದಕ್ಕಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯದಲ್ಲಿ ಸೇರಬೇಕು. ದೇಶ ಸೇವೆಗಾಗಿ ಸೇನಾ ಪಡೆ ಆಯ್ದುಕೊಳ್ಳಬೇಕು ಎಂದರು.

    ಹಿಮಾವೃತ ಪ್ರದೇಶ, ವಿಪರೀತ ಚಳಿ, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ಕುಟುಂಬದ ಬಗ್ಗೆ ಚಿಂತಿಸದೆ ದೇಶದ ರಕ್ಷಣೆಗಾಗಿ ಜೀವದ ಹಂಗನ್ನು ತೊರೆದು ಹೋರಾಟ ಮಾಡಿದ ಆ ದಿನಗಳು ಅವಿಸ್ಮರಣೀಯ. ಸೈನಿಕರಿಗೆ ತಮ್ಮ ಕುಟುಂಬಕ್ಕಿAತ ದೇಶದ ಹಿತರಕ್ಷಣೆಯೇ ಮುಖ್ಯ. ಅವರ ರಕ್ತದ ಪ್ರತಿ ಕಣದಲ್ಲೂ ದೇಶಪ್ರೇಮ ತುಂಬಿರುತ್ತದೆ. ಇಂಥ ದೇಶಪ್ರೇಮ ದೇಶದ ಪ್ರತಿಯೊಬ್ಬ ನಾಗರಿಕರಲ್ಲಿ ಇರಬೇಕು ಎಂದರು.

    ಕಾರ್ಗಿಲ್ ಕಲಿ ಶಿವಶರಣಪ್ಪ ತಾವರಖೇಡ್ ಅವರು ಪಾಕ್‌ಗೆ ಬಗ್ಗುಬಡಿದ ಹೋರಾಟದ ದಿನಗಳನ್ನು ಬಿಚ್ಚಿಟ್ಟರು.ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ್, ಪ್ರಮುಖರಾದ ಅಸ್ಲಾಂ ಶೇಖ್, ಡಾ.ಸುನೀಲಕುಮಾರ ವಂಟಿ, ಶಿವಯೋಗಪ್ಪ ಬಿರಾದಾರ, ನೀಲಕಂಠಯ್ಯ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts