More

    ದೇಶ, ಧರ್ಮದ ಉನ್ನತಿಗೆ ಬ್ರಾಹ್ಮಣರು ಮುಖ್ಯ

    ಶೃಂಗೇರಿ: ದೇಶ ಹಾಗೂ ಧರ್ಮದ ಉನ್ನತಿಗೆ ಬ್ರಾಹ್ಮಣರು ಮುಖ್ಯ. ಆದರೆ ಬ್ರಾಹ್ಮಣ ಸಮಾಜಕ್ಕೆ ಅಹಂಕಾರ, ದುರಭಿಮಾನ ಇರಬಾರದು ಎಂದು ಕಿರುತೆರೆ ನಿರ್ದೇಶಕ ಎಸ್.ಎನ್.ಸೇತುರಾಮ್ ತಿಳಿಸಿದರು.

    ರಾಜನಗರದ ವಿದ್ಯಾಭಾರತೀ ಭವನದಲ್ಲಿ ಭಾನುವಾರ ತಾಲೂಕು ಬ್ರಾಹ್ಮಣ ಮಹಾಸಭಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಾಹ್ಮಣರು ಸಂಘಟಿತರಾಗಬೇಕು. ಸಂವಿಧಾನ ನಮಗೆ ಮತದಾನದ ಹಕ್ಕು ನೀಡಿದೆ. ಉತ್ತಮ ಕೆಲಸ ಮಾಡುವವರನ್ನು ಆಯ್ಕೆ ಮಾಡುವ ಪ್ರಜ್ಞೆ ಇರಬೇಕು. ಮಳೆ, ಬೆಳೆ ಬರುತ್ತದೆ ಎಂಬ ನಂಬಿಕೆಯಲ್ಲಿ ಜೀವನ ಸಾಗಿಸಿದ್ದೇವೆ. ಸಮಾಜದ ವ್ಯವಸ್ಥೆಯ ಸೂಕ್ಷ್ಮತೆಯ ಅರಿವು ನಮಗಿರಬೇಕು ಎಂದು ಹೇಳಿದರು.

    ಹಿಂದು ಧರ್ಮದಲ್ಲಿ ಸತಿಪದ್ಧತಿ ಇದ್ದುದಕ್ಕೆ ಬ್ರಾಹ್ಮಣರನ್ನು ದೂಷಿಸುತ್ತಾರೆ. ಸಮಾಜದಲ್ಲಿ ನ್ಯೂನತೆ ಕಂಡರೆ ಧರ್ಮವನ್ನು ಹೀಯಾಳಿಸುತ್ತಾರೆ. ಭಗವಂತ ನಮಗೆ ಯೋಚಿಸುವ ಬುದ್ಧಿಶಕ್ತಿ ನೀಡಿದ್ದಾನೆ. ಸರ್ಕಾರದಿಂದ ಸವಲತ್ತು ನಮಗೆ ಬೇಕಿಲ್ಲ. ಆದರೆ ನಮ್ಮನ್ನು ಆಳುವವರಿಂದ ನಮಗೆ ತೊಂದರೆಯಾಗಬಾರದು ಎಂಬ ವಿವೇಚನೆ ನಮ್ಮಲ್ಲಿ ಇರಬೇಕು ಎಂದರು.

    ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕವನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ವಿ.ಆರ್.ನಟಶೇಖರ್, ವಾಮನ ಭಟ್, ನಾಗರಾಜ ಭಟ್, ಶಾಂತಮ್ಮ ಮಲ್ಲೇಶ್ ರಾವ್, ನಂಜುಂಡ ಭಟ್ ಹೆಗ್ಗದ್ದೆ, ಶ್ರೀಕಂಠರಾವ್, ರಮಾಕಾಂತ್ ಅವರನ್ನು ಸನ್ಮಾನಿಸಲಾಯಿತು. ಶನಿವಾರ ಗಾಯತ್ರೀ ಪುರಶ್ಚರಣೆ 200 ಋತ್ವಿಜರಿಂದ ಏಕಕಲದಲ್ಲಿ ನೆರವೇರಿತು. ಭಾನುವಾರ ಬೆಳಗ್ಗೆ 8ರಿಂದ ಲಕ್ಷ ಗಾಯತ್ರಿ ಹೋಮ ಹಾಗೂ ಪೂರ್ಣಾಹುತಿ ಧಾರ್ವಿುಕ ಪ್ರಕ್ರಿಯೆ ನೆರವೇರಿತು. ರಾಜ್ಯ ಬ್ರಾಹ್ಮಣ ಮಹಾಸಭಾ ನಿರ್ದೇಶಕ ರಾಘವೇಂದ್ರ ಭಟ್, ಅಧ್ಯಕ್ಷ ಜಿ.ಎಂ.ಸತೀಶ್, ಉಪಾಧ್ಯಕ್ಷ ನಾಗಭೂಷಣ್ ರಾವ್, ವಿವಿಧ ಬ್ರಾಹ್ಮಣ ಘಟಕದ ಪದಾಧಿಕಾರಿಗಳಾದ ಸುಂಕುರ್ಡಿ ವಿವೇಕಾನಂದ ರಾವ್, ಎಂ.ಎನ್.ಶ್ರೀಧರ್ ರಾವ್, ಗೌರವ ಕಾರ್ಯದರ್ಶಿ ಬಿ.ಎಲ್.ರವಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಕವನಾ ಶ್ಯಾಮಸುಂದರ್, ಜಿಲ್ಲಾ ಸಂಚಾಲಕಿ ನಾಗಮಣಿ ಮುರಳೀಕೃಷ್ಣ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts