More

    ದೇಶಾಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಅಪಾರ

    ಚಿತ್ರದುರ್ಗ: ನಾಡು, ನುಡಿ, ನೆಲ ಹಾಗೂ ಜಲದೆಡೆ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
    ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಕೋಟೆ ವಾಯುವಿಹಾರಿಗಳ ಸಂಘದ ಆಶ್ರಯದಲ್ಲಿ ಶನಿವಾರ ನಗರದ ರಾಘವೇಂದ್ರ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭಾಷೆ ಹಿರಿಮೆಯ ಅರಿವು ನಮಗಿರಬೇಕು.
    ಸಂಶೋಧನೆಗಳ ಮೂಲಕ ನಮ್ಮ ಭಾಷಾ ಸಂಪತ್ತು, ಭವ್ಯ ಇತಿಹಾಸ ಜ್ಞಾನವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯ ಬೇಕಿದೆ. ಕರ್ನಾಟಕದ ಏಕೀಕರಣಕ್ಕೆ ಅನೇಕ ಹಿರಿಯರ ಹೋರಾಟ ತ್ಯಾಗ, ಬಲಿದಾನವಿದೆ. ರಾಷ್ಟ್ರದ ಬೆಳವಣಿಗೆಯಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದರು.
    ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ ಕವಿ, ಕಾವ್ಯ ಕುರಿತು ಆಲೋಚಿಸಿದರೆ ಅನೇಕ ಕುತೂಹಲಕಾರಿ ಸಂಗತಿ ಗಳು ನೆನಪಿಗೆ ಬರುತ್ತವೆ. ಕಾವ್ಯವಾಚನಕ್ಕೆ ಈಗಲೂ ಪ್ರಾಶಸ್ತ್ಯವಿದೆ. ಕಾವ್ಯ ರಚನೆ ಸೂಕ್ಷ್ಮವಾದುದು.
    ಐದನೇ ಶತಮಾನದಲ್ಲೇ ಕನ್ನಡದ ಹಲ್ಮಿಡಿ ಶಾಸನ ಬೇಲೂರು ತಾಲೂಕಿನಲ್ಲಿ ದೊರೆತಿದೆ. ಕನ್ನಡ ಸಾಹಿತ್ಯಕ್ಕೆ ಸಮೃದ್ಧ ಬೆಳವಣಿಗೆಯಿದೆ. ಬಸವಾದಿ ಶರಣರ ವಚನಗಳ ಕೊಡುಗೆ ನಮ್ಮ ಸಾಹಿತ್ಯಕ್ಕೆ ಇದೆ ಎಂದರು. ಉಪನ್ಯಾಸಕ ವಿ.ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದ ರು. ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಅಧ್ಯಕ್ಷತೆ ವಹಿಸಿದ್ದರು.
    ರಾಘವೇಂದ್ರ ವಿದ್ಯಾಸಂಸ್ಥೆ ಸಂಸ್ಥಾಪಕ ಎಚ್.ಶ್ರೀನಿವಾಸ್, ಪ್ರಾಚಾರ್ಯ ಎ.ಜಿ.ಬಸವರಾಜಪ್ಪ, ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜ ಂಟಿ ನಿರ್ದೇಶಕ ಟಿ.ವಿ.ಸುರೇಶ್‌ಗುಪ್ತ, ನಿವೃತ್ತ ಪ್ರಾಧ್ಯಾಪಕಿ ಡಾ.ಯಶೋಧ ಬಿ.ರಾಜಶೇಖರಪ್ಪ, ಎಲ್‌ಐಸಿಯ ಜಿ.ಹರೀಶ್‌ಬೇದ್ರೆ, ಸರ್ವದಾ ಪ್ರಾರ್ಥಿಸಿ, ರವಿ ಕೆ. ಅಂಬೇಕರ್ ಸ್ವಾಗತಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts