More

    ದೇಶವನ್ನು ಒಂದುಗೂಡಿಸಿದ ಮಹಾನ್ ಶಕ್ತಿ ಪಟೇಲ್

    • ಹುಣಸೂರು: ಸರ್ದಾರ್ ವಲ್ಲಭಬಾಯಿ ಪಟೇಲ್ ಭಾರತವನ್ನು ಅಖಂಡವಾಗಿ ಒಂದುಗೂಡಿಸಿದ ಮಹಾನ್ ಶಕ್ತಿ ಎಂದು ತಾಲೂಕಿನ ಗದ್ದಿಗೆಯ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಮೇನಕಾ ತಿಳಿಸಿದರು.

    • ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಸೋಮವಾರ ಆಯೋಜಿಸಿದ್ದ ಸೈಕಲ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಪಡೆದ ಭಾರತದಲ್ಲಿ ಅಂದು 562 ರಾಜ್ಯಗಳಿದ್ದವು. ಇವೆಲ್ಲವನ್ನೂ ಭಾರತಾಂಬೆಯ ಒಂದೇ ಸೂರಿನಡಿ ತಂದು ವಿವಿಧ ರಾಜ್ಯಗಳನ್ನು ಭಾರತದಲ್ಲಿ ವಿಲೀನಗೊಳಿಸುವಲ್ಲಿ ಸರ್ದಾರ್ ಪಟೇಲ್ ಯಶಸ್ವಿಯಾದರು. ಪಟೇಲರ ಅಭಿಪ್ರಾಯವನ್ನು ದೇಶಾದ್ಯಂತ ಅಂದು ಆಳುತ್ತಿದ್ದ ರಾಜರು, ಸಾಮಂತರು ಒಪ್ಪಿಕೊಳ್ಳಲು ಪ್ರಮುಖ ಕಾರಣ ಪಟೇಲರ ರಾಜಕೀಯ ಬದ್ಧತೆ, ದೇಶಪ್ರೇಮ ಮತ್ತು ಎಲ್ಲರ ಒಳಿತಿಗಾಗಿ ಎನ್ನುವ ಧ್ಯೇಯೋದ್ದೇಶ. ಸರ್ದಾರ್ ಪಟೇಲ್‌ರ ಏಕತಾ ಮಂತ್ರ ಇಂದಿನ ಭಾರತಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದು ಯುವಸಮೂಹ ಇದನ್ನು ಅರಿಯಬೇಕಿದೆ ಎಂದರು.
      ಸೈಕಲ್ ರ‌್ಯಾಲಿಯಲ್ಲಿ 150ಕ್ಕೂ ಹೆಚ್ದು ವಿದ್ಯಾರ್ಥಿಗಳು ಭಾಗವಹಿಸಿ ಗದ್ದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸರ್ದಾರ್ ಪಟೇಲರ ಹಾಗೂ ಏಕತಾ ದಿನದ ಮಹತ್ವವನ್ನು ಸಾರಿದರು. ರ‌್ಯಾಲಿಯಲ್ಲಿ ಸಹಶಿಕ್ಷಕರಾದ ಪ್ರತಿನಿಧಿ, ಸುಹಾಸ್ ಇತರರು ಇದ್ದರು.

    ಹುಣಸೂರು ತಾಲೂಕು ಗದ್ದಿಗೆಯ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಸೈಕಲ್ ರ‌್ಯಾಲಿ ನಡೆಸಿದರು. ಮುಖ್ಯಶಿಕ್ಷಕಿ ಮೇನಕಾ, ಸಹಶಿಕ್ಷಕ ಸುಹಾಸ್, ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts