More

    ದೇಶದ ಪ್ರತಿ ಹಳ್ಳಿಗಳಿಗೆ ಬೆಳಕು ನೀಡಿದ್ದೇವೆ

    ಯಾದಗಿರಿ: ದೇಶದ ಎಲ್ಲ ಗ್ರಾಮಗಳನ್ನು ಕತ್ತಲು ಮುಕ್ತವನ್ನಾಗಿ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಣ ತೊಟ್ಟಿದ್ದು, ಹಲವು ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿದ್ದಾರೆ ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.

    ಶನಿವಾರ ನಗರದ ಕೆಪಿಟಿಸಿಎಲ್ ನೌಕರರ ಸಭಾಭವನದಲ್ಲಿ ಜೆಸ್ಕಾಂನಿಂದ ಆಯೋಜಿಸಿದ್ದ ಉಜ್ವಲ ಭಾರತ, ಉಜ್ವಲ ಭವಿಷ್ಯ ವಿದ್ಯುತ್ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನ ನಿತ್ಯ ಜೀವನಕ್ಕೆ ವಿದ್ಯುತ್ ಬೇಕೇಬೇಕು. 2015ರ ನಂತರ ದೇಶದಲ್ಲಿನ ಪ್ರತಿ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕಣಿವೆ ರಾಜ್ಯಗಳು, ಕಾಡು ಮೇಡುಗಳಲ್ಲಿನ ಬುಡಕಟ್ಟು ಜನಾಂಗ ವಾಸಿಸುತ್ತಿರುವ ಪ್ರದೇಶಗಳಲ್ಲೂ ಸಕರ್ಾರ ಬೆಳಕು ನೀಡುವ ಕೆಲಸ ಮಾಡಿದೆ ಎಂದರು.

    ಕಲ್ಯಾಣ ಭಾಗದಲ್ಲಿನ ರಾಯಚೂರು ಜಿಲ್ಲೆಯಲ್ಲಿನ ವೈಟಿಪಿಎಸ್ ಮತ್ತು ಆರ್ಟಿಪಿಎಸ್ಗಳಿಂದ ಇಡೀ ರಾಜ್ಯಕ್ಕೆ ನಾವಿಂದು ವಿದ್ಯುತ್ ಉತ್ಪಾದನೆ ಮಾಡಿ ಕೊಡುತ್ತಿದ್ದೇವೆ. ಆರ್ಟಿಪಿಎಸ್ ಪರಿಸರದಲ್ಲಿ ಉಂಟಾಗುವ ಧೂಳು ಮತ್ತಿತರ ಸಮಸ್ಯೆಗಳಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆ ಪರಿಸರದಲ್ಲಿ ಹೆಚ್ಚು ಹಸರೀಕಣ ಮಾಡಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು ಎಂದು ನಾನು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದರು.
    ಅಟಲ್ ಜ್ಯೋತಿ ಯೋಜನೆಯಡಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ಸುಮಾರು 2 ಸಾವಿರ ಸೋಲಾರ್ ವಿದ್ಯುತ್ ದೀಪ ಕೊಡಿಸಲಾಗಿದೆ. ಅದರಂತೆ ಕೇಂದ್ರ ವಿದ್ಯುತ್ ಸಚಿವ ಆರ್.ಎಸ್.ಸಿಂಗ್ ಅವರನ್ನು ಭೇಟಿ ಮಾಡಿ, ನಮ್ಮ ಭಾಗದ ರೈತರಿಗೆ ಸೋಲಾರ್ ಪಂಪ್ಸೆಟ್ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.

    ಶಾಸಕ ವೆಂಕಟರಡ್ಡಿ ಮುದ್ನಾಳ್ ಮಾತನಾಡಿ, 2019ರ ನೆರೆ ಸಂದರ್ಭದಲ್ಲಿ ನಮ್ಮ ಜೆಸ್ಕಾಂ ಅಕಾರಿಗಳು ಜೀವನ ಹಂಗು ತೊರೆದು ಕೆಲಸ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾಕೋ ಮಂಕಾಗಿದ್ದಾರೆ. ರೈತರಿಗೆ ಸಕಾಲಕ್ಕೆ ವಿದ್ಯುತ್ ಕೊಡುವಲ್ಲಿ ವಿಳಂಬ ಮಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನಾನು ನೇರವಾಗಿ ಮಾತನಾಡುವ ಮನುಷ್ಯ. ನೀವು ಚನ್ನಾಗಿ ಕೆಲಸ ಮಾಡಿದರೆ ಹೊಗಳಿ ಬೆನ್ನು ತಟ್ಟುವೆ, ದಾರಿ ತಪ್ಪಿದರೆ ಹೇಗೆ ತಿದ್ದಬೇಕು ಎಂಬುದೂ ನನಗೆ ಗೊತ್ತಿದೆ ಎಂದು ಅಸಡ್ಡೆ ತೋರುವ ಅಕಾರಿಗಳಿಗೆ ಚಾಟಿ ಬೀಸಿದರು.

    ಅಭಿಯಂತರ ರಾಘವೇಂದ್ರ ದುಕಾನ್ ಪ್ರಾಸ್ತಾವಿಕ ಮಾತನಾಡಿ, ಮಹತ್ವಾಕಾಂಕ್ಷೆ ಜಿಲ್ಲೆಯಗಳ ಪಟ್ಟಿಗೆ ಯಾದಗಿರಿ ಸೇರಿದ ನಂತರ 1 ಸಾವಿರ ದಿನಗಳ ಅವಯಲ್ಲಿ ಗ್ರಾಮೀಣ ಭಾಗದಲ್ಲಿ ಮನೆಮನೆಗೆ ವಿದ್ಯುತ್ ಸಂಪರ್ಕ ಒದಗಿಸುವ ಗುರಿ ಕೇಂದ್ರ ನಮಗೆ ನೀಡಿತ್ತು. ಅದರಂತೆ 14000 ಮನೆಗಳಿಗೆ ಬೆಳಕು ನೀಡುವ ಮೂಲಕ ಕೇಂದ್ರದಿಂದ ಪುರಸ್ಕಾರ ಪಡೆದಿದ್ದೇವೆ ಎಂದು ವಿವರಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts