More

    ದೇಶದ ಆರ್ಥಿಕ ಪರಿಸ್ಥಿತಿ ಇಳಿಮುಖ

    ಗದಗ: ದೇಶದಲ್ಲಿ 30 ವರ್ಷಗಳ ಹಿಂದಿನ ಆರ್ಥಿಕ ಪರಿಸ್ಥಿತಿ ಬಂದೊದಗಿದೆ. ಜಿಡಿಪಿ ಶೇ.4.5ರಷ್ಟಾಗಿದ್ದು, ಕಳವಳಕಾರಿ ಬೆಳವಣಿಗೆ ಎಂದು ಲೆಕ್ಕಪರಿಶೋಧಕ ಆನಂದ ಪೋತ್ನಿಸ್ ಹೇಳಿದರು.

    ನಗರದ ಆದರ್ಶ ಶಿಕ್ಷಣ ಸಮಿತಿ ಕಾಲೇಜ್​ನಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ‘ಆರ್ಥಿಕ ಕುಸಿತ ನಿವಾರಿಸಲು ಭಾರತ ಏನು ಮಾಡಬಹುದು?’ ವಿಷಯ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಮಾನವ ಸಂಪನ್ಮೂಲ ಬಳಸಿಕೊಂಡು ಉದ್ಯೋಗ ಸೃಷ್ಟಿಸಿದರೆ ಆರ್ಥಿಕವಾಗಿ ದೇಶ ಚೇತರಿಕೆ ಕಾಣಬಹುದು. ರೈತನ ಫಸಲು ನೇರವಾಗಿ ದಲ್ಲಾಳಿಗಳ ಬಳಿ ಹೋಗುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ತಡೆಗಟ್ಟಿ ಕೃಷಿಯಲ್ಲಿ ಅಭಿವೃದ್ಧಿ ಕಾಣಲು ಪೂರಕ ಅವಕಾಶ ಕಲ್ಪಿಸಬೇಕು ಎಂದರು.

    ವಿದ್ಯಾರ್ಥಿಗಳು ಬರಿ ಪಠ್ಯ ಪುಸ್ತಕಕ್ಕೆ ಸೀಮಿತವಾಗಬಾರದು. ವಾಣಿಜ್ಯ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಬೆಳೆದರೆ ತಮ್ಮ ಜೀವನವನ್ನು ಸರಳವಾಗಿ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ವೇದಿಕೆ ಮೇಲೆ ಮಾತನಾಡುವ ಕಲೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಕೆ. ಕುರಡಗಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಇಕ್ಸಾಸ್ ಎಕ್ಸಂಬಿ, ಚೈತ್ರಾ ಗೌಡರ, ತೇಜಸ್ವಿನಿ ಪರ್ವತೀಕರ, ಅಕ್ಷತಾ ಕಟ್ನಳ್ಳಿ, ಪವಿತ್ರಾ ತಿರ್ಲಾಪೂರ ಪ್ರಬಂಧ ಮಂಡಿಸಿದರು.

    ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಎಲ್. ಗುಳೇದಗುಡ್ಡ, ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ತಾತನಗೌಡ ಪಾಟೀಲ, ಈಶಣ್ಣ ಮುನವಳ್ಳಿ, ಅರವಿಂದ ಪಟೇಲ, ಪ್ರೊ.ಎಸ್.ಬಿ. ಜಾಧವ, ಪ್ರೊ.ಎಸ್.ಎಂ. ಬೆಳಗಾಂ, ಪ್ರೊ. ಫಿರೋಜ್​ಖಾನ್, ಪ್ರೊ.ಬಸವರಾಜ ಕುರಹಟ್ಟಿ, ಪ್ರೊ. ಷರೀಫ ಬೆನಕಲ್, ಪಿ.ಜಿ. ಬೆಳ್ಳಟ್ಟಿ, ಎಸ್.ಜಿ. ಕಣವಿ ಇತರರು ಉಪಸ್ಥಿತರಿದ್ದರು.

    ಬಾಹುಬಲಿ ಜೈನರ ನಿರೂಪಿಸಿದರು. ಸುಪ್ರಿಯಾ ಕುಲಕರ್ಣಿ ಪ್ರಾರ್ಥಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts