More

    ಎನ್.ಎಸ್.ಯು.ಐ ನಿಂದ ಯುವ ನ್ಯಾಯ ಪೋಸ್ಟರ್ ಬಿಡುಗಡೆ

    ಮಡಿಕೇರಿ: ಎನ್.ಎಸ್.ಯು.ಐ(ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ)ದ ವತಿಯಿಂದ ಜಿಲ್ಲಾ ಮಟ್ಟದ ಯುವ ನ್ಯಾಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.


    ನಗರದ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಎನ್‌ಎಸ್‌ಯುಐ ಪ್ರಥಮ ಜಿಲ್ಲಾ ಮಟ್ಟದ ಸಭೆಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಯುವ ನ್ಯಾಯ ಯೋಜನೆಯ ಪ್ರತಿಯನ್ನು ಬಿಡುಗಡೆ ಮಾಡಿದರು.


    ನಂತರ ಮಾತನಾಡಿದ ಅವರು, ಜಗತ್ತಿನಲ್ಲಿ ಅತ್ಯಂತ ಹೆಚ್ಚು ಯುವಕರನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆ ಭಾರತ ದೇಶದ್ದಾಗಿದೆ. ಯುವಕರಿಗೆ ಸೂಕ್ತ ನ್ಯಾಯ ದೊರೆಯದೆ ಇರುವುದು ವಿಷಾದನೀಯ ಎಂದರು. ದೂರದೃಷ್ಟಿಯುಳ್ಳ ನ್ಯಾಯಕರಾದ ರಾಹುಲ್ ಗಾಂಧಿ ಅವರು ದೇಶದ ಯುವ ಸಮೂಹದ ಏಳಿಗೆಗೆ ಹಲವು ಸುಧಾರಣೆಗಳನ್ನು ರೂಪಿಸಿ ಗ್ಯಾರಂಟಿ ಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ. ಅವರಿಗೆ ದೇಶದ ಮೇಲೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ತಿಳಿಸಿದರು.


    ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಪಿ.ಎಂ.ಅಬ್ದುಲ್ ರಾಶಿದ್, ಕೊಡಗು ಜಿಲ್ಲಾದ್ಯಂತ ಎನ್.ಎಸ್.ಯು.ಐ ಸಂಘಟನೆಯನ್ನು ಬಲಿಷ್ಟ ಪಡಿಸುವುದಾಗಿ ತಿಳಿಸಿದರು. ಯುವಕರಿಗೆ ಕರ್ನಾಟಕ ಸರ್ಕಾರ ನೀಡಿರುವ ಯುವ ನಿಧಿ ಗ್ಯಾರಂಟಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.


    ಉಪಾಧ್ಯಕ್ಷರಾದ ಘನಶ್ರೀ, ಕೊಡಗು ಜಿಲ್ಲಾ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿ ಎಂ.ಎಂ.ಕಾರ್ತಿಕ್ ಯುವ ನ್ಯಾಯ ಯೋಜನೆಯ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿಗಳಾದ ಪ್ರತಾಪ್, ಚಂದನ್, ಮಡಿಕೇರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವೂಫ್, ಎಂ.ಎನ್.ಎನ್.ಎಸ್.ಯು.ಐ ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೆ.ಶರಣ್, ಮಡಿಕೇರಿ ನಗರ ಅಧ್ಯಕ್ಷ ಟಿ.ಆರ್.ಅರ್ಜುನ್ ಮತ್ತು ಎನ್.ಎಸ್.ಯು.ಐ ಕಾರ್ಯಕರ್ತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts