More

    ದೇಶಕ್ಕೆ ಭದ್ರ ಬುನಾದಿ ಹಾಕಿದ ಬಾಬಾ ಸಾಹೇಬ್


    ಹಾಸನ : ವಿಶ್ವದ ಇತರ ದೇಶಗಳ ಸಂವಿಧಾನಕ್ಕಿಂತ ವಿಶೇಷವಾಗಿ ಸಂವಿಧಾನ ರಚಿಸಿ, ನಮ್ಮ ದೇಶಕ್ಕೆ ಭದ್ರ ಬುನಾದಿ ಒದಗಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಹಸೀಲ್ದಾರ್ ಬಿ.ಎಮ್.ಗೋವಿಂದರಾಜು ಅಭಿಪ್ರಾಯಪಟ್ಟರು.

    ಚನ್ನರಾಯಪಟ್ಟಣ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಅರ್.ಅಂಬೇಡ್ಕರ್ ಅವರ 132ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಅಂಬೇಡ್ಕರ್ ಅವರ ದೂರದೃಷ್ಟಿ ಹಾಗೂ ಸಮಾಜಮುಖಿ ಚಿಂತನೆಯಿಂದ ಸಂವಿಧಾನ ರೂಪುಗೊಂಡಿತು. ಅಂಬೇಡ್ಕರ್ ಅವರು ಬೇರೆ ದೇಶಗಳಿಗಿಂತ ವಿಭಿನ್ನವಾಗಿ ಸಂವಿಧಾನ ರಚಿಸಿದ್ದಾರೆ. ಎಲ್ಲ ಜಾತಿ, ಧರ್ಮಕ್ಕೆ ಸಮಾನತೆ ಕಲ್ಪಿಸಿದ್ದಾರೆ. ಅಂಬೇಡ್ಕರ್ ಅವರು ಶೋಷಿತ ವರ್ಗಗಳ ನಾಯಕ ಮಾತ್ರವಲ್ಲ ಎಲ್ಲ ಸಮುದಾಯಕ್ಕೂ ನಾಯಕರಾಗಿದ್ದಾರೆ ಎಂದರು.


    ಉಪನ್ಯಾಸಕ ರತ್ನಾಕರ್ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶಗಳು ಪ್ರತಿಮೆಗಳಲ್ಲಿ ಕಾಣುವುದಕ್ಕಿಂತ, ಅವರಂತೆ ಬೆಳೆದು ನಿಲ್ಲಬೇಕು ಎಂದು ಸಲಹೆ ನೀಡಿದರು.
    ತಾಲೂಕು ಪಂಚಾಯಿತಿ ಇಒ ಸುನಿಲ್‌ಕುಮಾರ್, ಪುರಸಭಾ ಮುಖ್ಯ ಅಧಿಕಾರಿ ಹೇಮಂತ್‌ಕುಮಾರ್, ಚನ್ನರಾಯಪಟ್ಟಣ ವಲಯ ಪೊಲೀಸ್ ಉಪ ಅಧೀಕ್ಷಕ ರವಿಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಂಕರ್ ಮೂರ್ತಿ, ಸಿಡಿಪಿಒ ವಿಜಯ್ ಕುಮಾರ್, ದಲಿತ ಮುಖಂಡ ನಾಗೇಶ್, ಗೋವಿಂದರಾಜ ದಿಂಡಗೂರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts