More

    ದೇವಿ ಆರಾಧನೆಯಿಂದ ಸಮೃದ್ಧ ಬದುಕು ಪ್ರಾಪ್ತಿ

    ಸಂಶಿ: ನವರಾತ್ರಿಯ ಒಂಬತ್ತು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ನವದುರ್ಗೆಯರನ್ನು ಆರಾಧಿಸಿದರೆ ದುಷ್ಟಶಕ್ತಿಗಳ ದಮನವಾಗಿ ಸಮೃದ್ಧ ಬದುಕು ಪ್ರಾಪ್ತವಾಗುತ್ತದೆ ಎಂದು ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.

    ಗ್ರಾಮದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ 71ನೇ ದಸರಾ ಮಹೋತ್ಸವ ಹಾಗೂ ಶ್ರೀ ದೇವಿ ಮಹಾ ಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ಚನ ನೀಡಿದರು. ದೇವಿ ಸ್ವರೂಪದಲ್ಲಿರುವ ಶಕ್ತಿ ತತ್ವದ ಆರಾಧನೆಯೇ ನವರಾತ್ರಿ ಹಬ್ಬದ ಆಚರಣೆಯ ಸಂದೇಶ. ದುಷ್ಟ ಶಿಕ್ಷೆ, ಶಿಷ್ಟ ಪರಿಪಾಲನೆಗೈಯುವ ಶಕ್ತಿ ಸ್ವರೂಪಳಾದ ಮಾತೆ ದುರ್ಗಾದೇವಿಯ ಆರಾಧನೆಯ ಹಬ್ಬವೇ ನವರಾತ್ರಿ. ಈ ಹಬ್ಬದಲ್ಲಿ ದೇವಿಯನ್ನು ಶಕ್ತಿಯ ನಾನಾ ರೂಪದಲ್ಲಿ ಆರಾಧಿಸಲಾಗುತ್ತದೆ ಎಂದರು.

    ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಭಾರತೀಯ ಸಂಸ್ಕೃತಿಗೆ ಅಗ್ರ ಸ್ಥಾನವಿದೆ. ಭಾರತೀಯರ ಭಾತೃತ್ವದ ನೆಲಗಟ್ಟಿನ ಮೇಲೆ ನಿಂತಿರುವ ಧಾರ್ವಿುಕ ಸಂಸ್ಕೃತಿ ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಮಾಜದಲ್ಲಿ ಧಾರ್ವಿುಕ ಕಾರ್ಯಗಳು ನೆರವೇರುವುದರಿಂದ ಸಾಮರಸ್ಯದ ಬದುಕಿನ ಜತೆಗೆ ಮನೆ, ಮನದಲ್ಲಿ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದರು.

    ಗುರುಶಾಂತಯ್ಯ ಚಿಕ್ಕಮಠ ಪುರಾಣ ಪಠಣ ಮಾಡಿದರು. ಕಲಾವಿದರು ಪಸರಿಸಿದ ಸಂಗೀತ ಸುಧೆಗೆ ಸಹ ಕಲಾವಿದರು ತಬಲಾ ಸಾಥ್ ನೀಡಿದರು.

    ಉಣಕಲ್ಲ ಬ್ರಹ್ಮಾನಂದ ಆಶ್ರಮದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಜಿಪಂ ಮಾಜಿ ಸದಸ್ಯ ಎನ್.ಎನ್. ಪಾಟೀಲ, ಗ್ರಾಪಂ ಅಧ್ಯಕ್ಷ ರಾಜು ಪುಟ್ಟಣ್ಣವರ, ಉಪಾಧ್ಯಕ್ಷೆ ಗೌರಮ್ಮ ಹರಕುಣಿ, ನಿವೃತ್ತ ತಹಸೀಲ್ದಾರ್ ಲಕ್ಷ್ಮಣ ದೊಡ್ಡಮನಿ, ಸಿದ್ದಪ್ಪ ಕಡಕೋಳ, ಸಂಗಪ್ಪ ಉಪಾಸಿ, ಶಿವಾನಂದ ಪೂಜಾರ, ಹಾಲಪ್ಪ ತಡಾಳ, ಪ್ರಕಾಶಗೌಡ ಪಾಟೀಲ, ಈರಣ್ಣ ಕಮ್ಮಾರ, ಲೋಕೇಶ ಸಾರವರಿ, ಮಾಂತೇಶ ಶಾಗೋಟಿ, ಫಕ್ಖಜ್ಜ ಕೋರಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts