More

    ದೇವಾಲಯಗಳ ಅಭಿವೃದ್ಧಿಗೆ ಒತ್ತು

    ನಿಪ್ಪಾಣಿ: ಸರ್ಕಾರಿ ಶಾಲೆಗಳ ಜತೆಗೆ ಕ್ಷೇತ್ರದಲ್ಲಿರುವ ದೇವಾಲಯಗಳ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ. ಹಂತ ಹಂತವಾಗಿ ನಿಪ್ಪಾಣಿಯನ್ನು ಮಾದರಿ ತಾಲೂಕನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ತಾಲೂಕಿನ ಅಪ್ಪಾಚಿವಾಡಿ ಗ್ರಾಮದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಹಾಲಸಿದ್ಧನಾಥ ದೇವರ ಜಾತ್ರೆಗೆ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ಗೋವಾ, ಆಂದ್ರಪ್ರದೇಶ ಮತ್ತಿತರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಭಕ್ತರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

    ದೇವಾಲಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ಕಾರ್ಯಕ್ರಮಕ್ಕೂ ಮುನ್ನ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆಗೊಂಡಿರುವ 25 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಅಪ್ಪಾಚಿವಾಡಿ ಗ್ರಾಮದ ಹಾಲಸಿದ್ಧನಾಥದ ಸಮೀಪ ಭಕ್ತರಿಗೆ ನಿರ್ಮಿಸಲಾದ ಯಾತ್ರಿ ನಿವಾಸವನ್ನು ಸಚಿವೆ ಜೊಲ್ಲೆ ಲೋಕಾರ್ಪಣೆಗೊಳಿಸಿದರು.

    80.12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರಾಮದ ವಿವಿಧ ಸರ್ಕಾರಿ ಶಾಲೆಗಳ 10 ಕೊಠಡಿ ಹಾಗೂ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸಮುದಾಯ ಭವನವನ್ನು ಉದ್ಘಾಟಿಸಿದರು. ಮುಜರಾಯಿ ಇಲಾಖೆಯಿಂದ ಹಾಲಸಿದ್ಧನಾಥ ದೇವರ ಮಂದಿರಕ್ಕೆ ಅನುಮೋದನೆಗೊಂಡ 30 ಲಕ್ಷ ರೂ. ಅನುದಾನದ ಆದೇಶದ ಪ್ರತಿ, ಕೋವಿಡ್-19 ನಿಂದ ಮೃತಪಟ್ಟ 6 ಕುಟುಂಬ ಸದಸ್ಯರಿಗೆ 50 ಸಾವಿರ ರೂ. ನಂತೆ 3 ಲಕ್ಷ ಸಹಾಯಧನದ ಆದೇಶ ಪತ್ರಗಳನ್ನು ಹಾಗೂ ಸಂಧ್ಯಾ ಸುರಕ್ಷಾ ಪಿಂಚಣಿ ಆದೇಶ ಪತ್ರಗಳನ್ನು 15 ಲಾನುಭ ವಿಗಳಿಗೆ ವಿತರಿಸಿದರು.

    ಬಿಇಒ ರೇವತಿ ಮಠದ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಜನ್ಮಟ್ಟಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಪವನ ಪಾಟೀಲ, ಹಾಲಶುಗರ್ ಕಾರ್ಖಾನೆ ಸಂಚಾಲಕ ರಾಜಾರಾಮ ಖೋತ, ಪ್ರಕಾಶ ಶಿಂಧೆ, ಗ್ರಾಪಂ ಅಧ್ಯಕ್ಷೆ ಶಾಲನ ಚವ್ಹಾಣ, ಉಪಾಧ್ಯಕ್ಷ ಆನಂದ ಕಾವಳೆ, ಮಂಗಲಾ ಜಾಧವ, ಸೋಹನ ಖೋತ, ಕೆ.ಬಿ.ಮಾನೆ, ಜಯಶ್ರೀ ಕಾಂಬಳೆ, ಸಾತಪ್ಪ ಶೇನಗಾವೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts