More

    ದೇವಾಂಗರ ಸೇವೆ ಶ್ಲಾಘನೀಯ

    ರಾಮದುರ್ಗ, ಬೆಳಗಾವಿ: ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೂಲ ವೃತ್ತಿಯಾದ ನೇಯ್ಗೆ ಕಾಯಕದಲ್ಲಿ ತೊಡಗಿ, ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿರುವ ದೇವಾಂಗ ಸಮುದಾಯದ ಸೇವೆ ಶ್ಲಾಘನೀಯ. ಈ ದಿಸೆಯಲ್ಲಿ ವೃತ್ತಿಯ ಮೂಲ ಪುರುಷ ದೇವಲ ಮಹರ್ಷಿ ಅವರ ವೃತ್ತವನ್ನು ನಗರದಲ್ಲಿ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

    ಪಟ್ಟಣದ ಪಾಂಡುರಂಗ ಚಿತ್ರಮಂದಿರದ ಬಳಿ ನಿರ್ಮಿಸಲಾಗುತ್ತಿರುವ ದೇವಾಂಗ ಸಮುದಾಯದ ಮೂಲ ಪುರುಷ ದೇವಲ ಮಹರ್ಷಿ ವೃತ್ತ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಾವಿರಾರು ವರ್ಷಗಳ ಹಿಂದೆ ಸಕಲ ದೇವಾನುದೇವತೆಗಳಿಗೆ ವಸ್ತ್ರ ನೇಯ್ಗೆ ಕಾಯಕ ಮಾಡಿದ ಮಹಾನ್ ಪುರುಷ ದೇವಲ ಮಹರ್ಷಿ. ಅಂತಹ ಮಹಾನ್ ಪುರುಷರ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಸಂಪೂರ್ಣ ಸಹಾಯ ನೀಡುವುದಾಗಿ ತಿಳಿಸಿದರು.

    ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ರೈತ ಅನ್ನ ಕೊಟ್ಟರೆ, ನೇಕಾರ ವಸ್ತ್ರ ನೀಡಿ ಎಲ್ಲರ ಮಾನ ಕಾಯುತ್ತಾನೆ. ಇವರಿಬ್ಬರೂ ದೇಶಕ್ಕೆ ಮುಖ್ಯ ಎಂದರು. ಬನಶಂಕರಿ ದೇವಾಂಗ ಸಮಾಜದ ಅಧ್ಯಕ್ಷ ನಾರಾಯಣಪ್ಪ ಬೆನ್ನೂರ, ಅರ್ಚಕ ನಿರಂಜನಸ್ವಾಮಿ ದೇವಾಂಗಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts