More

    ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ

    ಕಡೋಲಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೋಲಿ, ಕಾಕತಿ ಹಾಗೂ ಹುದಲಿ ಜಿಪಂ ಕ್ಷೇತ್ರಗಳ ಗ್ರಾಮಗಳ ದೇವಸ್ಥಾನ, ಮಠಗಳ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆ ಸಚಿವ ಶಶಿಕಲಾ ಜೊಲ್ಲೆ 1.95 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ.

    ಭೂತರಾಮನಹಟ್ಟಿಯ ಮುಕ್ತಿಮಠಕ್ಕೆ 35 ಲಕ್ಷ ರೂ., ಬೆನ್ನಾಳಿಯ ಗಜಾನನ ಸೇವಾ ಸಮಿತಿಗೆ 5 ಲಕ್ಷ ರೂ., ಕಾಕತಿ ಸಿದ್ದೇಶ್ವರ ದೇವಸ್ಥಾನಕ್ಕೆ 6.5 ಲಕ್ಷ ರೂ., ಕಡೋಲಿ ಕಲ್ಮೇಶ್ವರ ದೇವಸ್ಥಾನಕ್ಕೆ 5 ಲಕ್ಷ ರೂ., ದುರದುಂಡೀಶ್ವರ ವಿರಕ್ತಮಠಕ್ಕೆ 13 ಲಕ್ಷ ರೂ. ಅಗಸಗಿ ವಿಠ್ಠಲ್-ರುಕ್ಮಾಯಿ ಮಂದಿರಕ್ಕೆ 2.5 ಲಕ್ಷ ರೂ., ಕಲ್ಮೇಶ್ವರ ದೇವಸ್ಥಾನಕ್ಕೆ 3.5 ಲಕ್ಷ ರೂ., ಚೆಲುವ್ಯಾನಟ್ಟಿ ಕಲ್ಮೇಶ್ವರ ದೇವಸ್ಥಾನಕ್ಕೆ 5 ಲಕ್ಷ ರೂ., ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ 5 ಲಕ್ಷ ರೂ., ಮನ್ನಿಕೇರಿ ಬ್ರಹ್ಮಲಿಂಗ ಮಠಕ್ಕೆ 5 ಲಕ್ಷ ರೂ., ಕಲಖಾಂಬ ಬ್ರಹ್ಮಲಿಂಗೇಶ್ವರ ದೇವಸ್ಥಾನ ಕ್ಕೆ 5 ಲಕ್ಷ ರೂ., ಮುಚ್ಚಂಡಿ ಸಿದ್ದೇಶ್ವರ ದೇವಸ್ಥಾನಕ್ಕೆ 15 ಲಕ್ಷ ರೂ., ಅಷ್ಠೇ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ 5 ಲಕ್ಷ ರೂ. ಹಾಗೂ ಶಿವಾಪುರ ಗ್ರಾಮದ ಕಾಡಸಿದ್ದೇಶ್ವರ ಮಠಕ್ಕೆ ಬಿಡುಗಡೆಯಾದ 10 ಲಕ್ಷ ರೂ. ಅನುದಾನದ ಚೆಕ್‌ಗಳನ್ನು ಸಚಿವರ ಪರವಾಗಿ ಬಿಜೆಪಿ ಮುಖಂಡರು ಮಂಗಳವಾರ ಹಸ್ತಾಂತರಿಸಿದರು.

    ಬಿಜೆಪಿ ಮುಖಂಡ ರವಿ ಹಂಜಿ ಮಾತನಾಡಿ, ಕಳೆದ ವಾರ ಹುಕ್ಕೇರಿ ತಾಲೂಕಿನ ಗ್ರಾಮಗಳಲ್ಲಿರುವ ದೇವಸ್ಥಾನಗಳಿಗೆ 1.36 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸಚಿವೆ ಜೊಲ್ಲೆ ಅವರ ಸೇವೆ ಮುಂದುವರಿಯಲಿ ಎಂದು ಆಶಿಸಿದರು.

    ಚಿಕ್ಕೋಡಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಸು ಹುಂದ್ರಿ, ಮಾರುತಿ ಅಷ್ಠಗಿ, ಕಲಗೌಡ ಪಾಟೀಲ, ಉದಯ ನಿರ್ಮಳ, ಭರಮಾ ಸನದಿ, ಶಿವಾನಂದ ಪಡಗೂರಿ, ಶಿವಾನಂದ ಮಸರಗುಪ್ಪಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts