More

    ದೇವರ ಧ್ಯಾನದಿಂದ ಮನಸ್ಸಿನಲ್ಲಿ ನೆಲೆಸಲಿದೆ ನೆಮ್ಮದಿ

    ನುಗ್ಗೇಹಳ್ಳಿ: ದೇವರ ಧ್ಯಾನ, ಸ್ಮರಣೆ, ಪೂಜೆ ಮಾಡುವುದರಿಂದ ಮನುಷ್ಯನ ಮನಸ್ಸಿಗೆ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಕತ್ತರಿಗಟ್ಟ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಹೇಳಿದರು.


    ದ್ಯಾವಲಾಪುರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಲಕ್ಕಮ್ಮದೇವಿ ಅಮ್ಮನವರ ದೇವಾಲಯದ ಮುಖಮಂಟಪ, ವಿಮಾನ ಗೋಪುರ ಉದ್ಘಾಟನೆ, ಸುಹಾಸಿನಿಯರಿಗೆ ಬಾಗಿನ ಅರ್ಪಣೆಯ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.


    ಮನುಷ್ಯನ ಬುದ್ಧಿಶಕ್ತಿ ಅಪಾರವಾದದ್ದು ವಿಜ್ಞಾನಕ್ಕೂ ನಿಲುಕದ ಹಾಗೆ ಅದ್ಭುತ ಶಕ್ತಿ ಇದೆ. ಇದನ್ನೇ ನಾವು ಪೂರ್ವಿಕರ ಕಾಲದಿಂದಲೂ ದೇವರು ಎಂದು ನಂಬಿ ಪೂಜಿಸುತ್ತ ಬಂದಿದ್ದೇವೆ. ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣವಾಗಿದೆ. ಜೀವನದಲ್ಲಿ ಕಷ್ಟವೇ ಬರಲಿ ಸುಖವೇ ಬರಲಿ ಧರ್ಮ ಮಾರ್ಗದಲ್ಲಿ ಸಾಗಿದರೆ ಜೀವನದಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದರು.


    ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಆರ್.ನಾಗೇಶ್, ಮಾಜಿ ಸದಸ್ಯ ಸ್ವಾಮಿ, ಮುಖಂಡರಾದ ಕೃಷ್ಣೇಗೌಡ, ನಾಗರಾಜ್, ರಾಧಾ, ಉಮೇಶ್, ಲಕ್ಕಮ್ಮದೇವಿ ಯುವಕ ಸಂಘದ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts