More

    ದೆಹಲಿಯತ್ತ ಹೊರಟ ಮೊದಲ ಕಿಸಾನ್ ರೈಲು : ಸಂಸದ ಮುನಿಸ್ವಾಮಿ ಚಾಲನೆ. ಈಡೇರಿದ ರೈತರ ಬಹುದಿನದ ಬೇಡಿಕೆ

    ಚಿಂತಾಮಣಿ : ಉತ್ತರ ಭಾರತಕ್ಕೆ ಟೊಮ್ಯಾಟೊ ಹಾಗೂ ಮಾವಿನ ಹಣ್ಣಿನ ಸಾಗಣೆಗೆ ಕಿಸಾನ್ ರೈಲಿನ ವ್ಯವಸ್ಥೆ ಬೇಕು ಎಂಬ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ಬೇಡಿಕೆ ಈಡೇರಿದ್ದು, ಮಾವಿನಹಣ್ಣನ್ನು ಹೊತ್ತ ಮೊಟ್ಟಮೊದಲ ಕಿಸಾನ್ ರೈಲು ಚಿಂತಾಮಣಿ ತಾಲೂಕಿನ ದೊಡ್ಡನೆತ್ತ ಗ್ರಾಮದಿಂದ ದೆಹಲಿಯ ಆದರ್ಶ ನಗರದತ್ತ ಶನಿವಾರ ಪ್ರಯಾಣ ಬೆಳೆಸಿತು.

    ಚಿಂತಾಮಣಿ-ಶ್ರೀನಿವಾಸಪುರ ರಸ್ತೆಯ ದೊಡ್ಡನೆತ್ತ ರೈಲು ನಿಲ್ದಾಣದಿಂದ 25 ಬೋಗಿಗಳಲ್ಲಿ ಸುಮಾರು 250 ಟನ್ ಮಾವಿನಹಣ್ಣು ಹೊತ್ತ ರೈಲಿಗೆ ಸಂಸದ ಎಸ್.ಮುನಿಸ್ವಾಮಿ, ಶಾಸಕ ಎಂ.ಕೃಷ್ಣಾರೆಡ್ಡಿ, ಬೆಂಗಳೂರು ಡಿವಿಜನ್ ರೈಲ್ವೆ ಇಲಾಖೆ ವ್ಯವಸ್ಥಾಪಕ ಅಶೋಕಕುಮಾರ್ ವರ್ಮ ಚಾಲನೆ ನೀಡಿದರು.

    ಸಂಸದ ಮುನಿಸ್ವಾಮಿ ಮಾತನಾಡಿ, ನಾವು ಬೆಳೆದಂತಹ ಹಣ್ಣು ಮತ್ತು ತರಕಾರಿಗಳನ್ನು ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಲು ರಸ್ತೆ ಮಾರ್ಗ ದುಬಾರಿಯಾಗಿದ್ದು ಒಂದು ಕೆಜಿಗೆ 7 ರಿಂದ 8 ರೂ. ಖರ್ಚು ಬರುತ್ತದೆ, ವಿಮಾನ ಸಾರಿಗೆ ಮತ್ತಷ್ಟು ದುಬಾರಿ. ಆದರೆ ರೈಲು ಮಾರ್ಗದಲ್ಲಿ 2 ರಿಂದ 3 ರೂ.ಗಳ ಕಡಿಮೆ ಖರ್ಚಿನಲ್ಲಿ ಕಳುಹಿಸುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ರೈತರ ಬಹುದಿನಗಳ ಬೇಡಿಕೆ ಈಡೇರಿದ್ದು ಇದನ್ನು ರೈತರು ಸದುಪಯೋಗಪಡಿಸಿ ಕೊಳ್ಳುವಂತೆ ಕೋರಿದರು.

    ಕಿಸಾನ್ ರೈಲಿಗೆ ಕೇಂದ್ರ ಸರ್ಕಾರದ ಸಹಕಾರದ ಜತೆ ಏನು ಸಬ್ಸಿಡಿ ನೀಡುತ್ತಿದೆಯೋ ಅದರಂತೆ ರಾಜ್ಯ ಸರ್ಕಾರ ಸಹ ಸಬ್ಸಿಡಿ ನೀಡುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೋರುವುದಾಗಿ ತಿಳಿಸಿದರು.ಬೆಂಗಳೂರು ಡಿವಿಜನ್ ರೈಲ್ವೆ ಇಲಾಖೆ ವ್ಯವಸ್ಥಾಪಕ ಅಶೋಕಕುಮಾರ್ ವರ್ಮ ಮಾತನಾಡಿ, ಯಾವುದೇ ಹಣ್ಣು ಮತ್ತು ತರಕಾರಿ ಸಾಗಾಣಿಕೆಗೆ ರೈತರು ಮತ್ತು ವ್ಯಾಪಾರಸ್ಥರ ಬೇಡಿಕೆಗೆ ತಕ್ಕಂತೆ ತಾವು ಕಿಸಾನ್ ರೈಲಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

    ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿ, ರೈತರು ರೈಲ್ವೆ ಅಧಿಕಾರಿಗಳನ್ನು ಸಂಪರ್ಕ ಮಾಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.ಅಡಿಷನಲ್ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್, ಹಿರಿಯ ವಾಣಿಜ್ಯ ರೈಲ್ವೆ ವ್ಯವಸ್ಥಾಪಕ ಕೃಷ್ಣಾರೆಡ್ಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts