More

    ದುಶ್ಚಟ ಸಹವಾಸದಿಂದ ದೇಶ ನಾಶ- ಶಿವನಕೆರೆ ಬಸವಲಿಂಗಪ್ಪ

    ದಾವಣಗೆರೆ: ಒಂದು ದೇಶದ ಯುವ ಜನರನ್ನು ದುಶ್ಚಟಗಳ ದಾಸರಾದರೂ ಆ ರಾಷ್ಟ್ರ ನಾಶವಾಗಲಿದೆ. ಇದಕ್ಕಾಗಿ ಅಣುಬಾಂಬ್, ನ್ಯೂಕ್ಲಿಯರ್ ಕ್ಷಿಪಣಿ ಬೇಕಾಗುವುದಿಲ್ಲ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಹೇಳಿದರು.
    ನಗರದ ಯಜಮಾನ್ ಬೆಳ್ಳೂಡಿ ಸೋಮಶೇಖರಪ್ಪ
    ಗೌರಮ್ಮಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ
    ‘ಆಹಾರ ಬೇಕು ತಂಬಾಕು ಬೇಡ’ ಎಂಬ ಸಂವಾದ
    ಕಾರ್ಯಕ್ರಮದಲ್ಲಿ ಮಾತನಾಡಿದರು.
    ಈ ವರ್ಷದ ವಿಶ್ವ ತಂಬಾಕು ವಿರೋಧಿ ದಿನದ ಧ್ಯೇಯವಾಕ್ಯ;ನಮಗೆ ಆಹಾರ ಬೇಕು, ತಂಬಾಕಲ್ಲ
    ಎನ್ನುವುದಾಗಿದೆ. ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಲು ಮುಂದಾಗಬೇಕು ಎಂದರು.
    ತಂಬಾಕಿನ ದುಷ್ಪರಿಣಾಮಗಳನ್ನು ಅರಿಯದ ವಯಸ್ಕರು
    ಜಗತ್ತಿನಲ್ಲಿಲ್ಲ. ಪ್ರತಿವರ್ಷ, ಜಾಗತಿಕವಾಗಿ 80 ಲಕ್ಷ ಜನರು
    ತಂಬಾಕು ಸಂಬಂಧಿತ ಕಾಯಿಲೆಗಳಿಂದ ಸಾಯುತ್ತಾರೆ. ಧೂಮಪಾನ, ಹೊಗೆರಹಿತ ತಂಬಾಕು ಉತ್ಪನ್ನಗಳ ಸೇವನೆ ಮತ್ತು ಒಡ್ಡುವಿಕೆಯ ಹಾನಿಗಳಿಂದ ಸ್ನೇಹಿತರು ಮತ್ತು
    ಕುಟುಂಬದವರ ನಷ್ಟದಿಂದಾಗಿ ಲಕ್ಷಾಂತರ ಜನರು ಬಳಲುತ್ತಿದ್ದಾರೆ
    ಎಂದರು.
    ತಂಬಾಕು ಮಾನಸಿಕ ಮತ್ತು ಶಾರೀರಿಕ ಆರೋಗ್ಯಕ್ಕೆ ಹಾನಿಕರ ಪರಿಣಾಮ ತರಲಿದೆ. ತಂಬಾಕು ಸೇವನೆಯು ಹೃದಯರಕ್ತನಾಳದ ಕಾಯಿಲೆ, ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶದ
    ಕಾಯಿಲೆ ಮತ್ತು ಮಧುಮೇಹ ಸೇರಿ ನಾಲ್ಕು ಪ್ರಮುಖ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಿದರು.
    ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಮಾತನಾಡಿ,
    ಮನೆಯಲ್ಲಿ ಪಾಲಕರು ಅಥವಾ ಸಂಬಂಧಿಕರು
    ತಂಬಾಕು ಉಪಯೋಗಿಸುತ್ತಿದ್ದರೆ ಮಕ್ಕಳಲ್ಲಿ ಕುತೂಹಲ ಹೆಚ್ಚಿಸಿ ತಂಬಾಕು ಸೇವನೆ ಹವ್ಯಾಸ, ವ್ಯಸನವಾಗಿ ಪರಿವರ್ತನೆಯಾಗುತ್ತದೆ. ಕೊನೆಗೆ ಸಾವು ಇಲ್ಲವಾದರೆ ಕ್ಯಾನ್ಸರ್, ಅಸ್ತಮಾದಂತಹ ಭೀಕರ ರೋಗಗಳಿಂದ
    ಬಳಲಬೇಕಾಗುತ್ತದೆ ಎಂದರು.
    ಶಾಲೆಯ ಶಿಕ್ಷಕರು ಮಕ್ಕಳಿಗೆ ತಂಬಾಕು ಸೇವನೆ ಮಾಡುವುದಿಲ್ಲವೆಂದು ಪ್ರತಿಜ್ಞಾವಿಧಿ ಭೋದಿಸಿದರು.
    ಶಾಲೆಯ ಮುಖ್ಯಶಿಕ್ಷಕ ಎಂ.ವಿ.ಮಹೇಶ್ವರಪ್ಪ,ಕಾರ್ಯದರ್ಶಿ ಜಿ.ಕೆ. ಪಂಚಣ್ಣ,ಕರುಣಾ ಟ್ರಸ್ಟಿನ ಆರ್.ಬಿ.ಪಾಟೀಲ್ ಮತ್ತು ಸೋನು, ಶಾಲಾ ಶಿಕ್ಷಕರು ಇದ್ದರು. ಕರುಣಾ ಜೀವ ಕಲ್ಯಾಣ
    ಟ್ರಸ್ಟ್ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts